ಕುಂದಾಪುರ (ಜೂ,30): ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುಂಬಯಿಯ ಪ್ರತಿಷ್ಠಿತ ಸಂಸ್ಥೆ ಮಾಟುಂಗಾ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ಡಾ. ಭರತ್ ಕುಮಾರ್ ಪೊಲಿಪು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಮುಂಬಯಿಯ ಕನ್ನಡಪರ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದು ಮುಂಬಯಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ರಾಯಭಾರಿಯಾಗಿ ಡಾ.ಭರತ್ ಕುಮಾರ್ ಪೊಲಿಪುರವರು ಗುರುತಿಸಿಕೊಂಡಿದ್ದಾರೆ. ವರದಿ :-ಈಶ್ವರ್ ಸಿ ನಾವುಂದ
Month: June 2023
ರೋಟರಿ ಕ್ಲಬ್ ಅಧ್ಯಕ್ಷರಾಗಿ ಎಂ ನಾಗೇಂದ್ರ ಪೈ ಆಯ್ಕೆ
ಗಂಗೊಳ್ಳಿ(ಜೂ,30) : ಗಂಗೊಳ್ಳಿಯ ರೋಟರಿ ಕ್ಲಬ್ ನ 2023 -24 ನೇ ಸಾಲಿನ ಅಧ್ಯಕ್ಷರಾಗಿ ಗಂಗೊಳ್ಳಿಯ ಖ್ಯಾತ ಉದ್ಯಮಿ ಎಂ ನಾಗೇಂದ್ರ ಪೈ ಆಯ್ಕೆಯಾಗಿರುತ್ತಾರೆ. ವಿವಿಧ ಸಂಘ ಸಂಸ್ಥೆಗಳ ಸಕ್ರಿಯ ಸದಸ್ಯರಾಗಿರುವ ಇವರು ಗಂಗೊಳ್ಳಿ ಭಾಗದಲ್ಲಿ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.
ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ : ವಿಶೇಷ ಉಪನ್ಯಾಸ
ಕುಂದಾಪುರ(ಜೂ,29): ದೇಶದಾದ್ಯಂತ ಡ್ರಗ್ಸ್, ಮಧ್ಯಪಾನ, ಧೂಮಪಾನ ಮುಂತಾದ ಮಾದಕ ವ್ಯಸನಗಳಿಂದ ಮುಕ್ತವಾದ ಸ್ವಚ್ಛ ವ್ಯಕ್ತಿತ್ವ, ಸ್ವಚ್ಛ ಕ್ಯಾಂಪಸ್ಗಳ ಮೂಲಕ ಸ್ವಚ್ಛ ಸಮಾಜ ನಿರ್ಮಾಣ ಮಾಡಲು ವಿದ್ಯಾರ್ಥಿ ಯುವ ಜನಾಂಗದ ಪಾತ್ರ ನಿರ್ಣಾಯಕವಾದುದು. ದುಶ್ಚಟಗಳು ವ್ಯಕ್ತಿಯ ಬದುಕು, ಕುಟುಂಬ ಮಾತ್ರವಲ್ಲದೆ ಸಮಾಜದ ಮೇಲೂ ನೇರ ಪರಿಣಾಮ ಬೀರುತ್ತದೆ. ಮಾದಕ ವಸ್ತುಗಳ ಸೇವನೆ ವ್ಯಕ್ತಿಯ ಮೆದುಳಿನಲ್ಲಿ ಬದಲಾವಣೆ ತಂದು ಅಪರಾಧಿ ಕೃತ್ಯಗಳಿಗೆ ಪ್ರಚೋದನೆ ನೀಡುತ್ತದೆ ಎಂದು ಕುಂದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ ಸುಧಾಕರ್ […]
ಡಾ|ಬಿ.ಬಿ.ಹೆಗ್ಡೆ ಕಾಲೇಜು ಕುಂದಾಪುರ: ಕ್ಯಾಂಪಸ್ ನೇಮಕಾತಿ ಡ್ರೈವ್
ಕುಂದಾಪುರ (ಜೂನ್ 26): ಕಾಲೇಜಿನ ವೃತ್ತಿ ಮಾರ್ಗದರ್ಶನ ಘಟಕದ ನೇತೃತ್ವದಲ್ಲಿ ಜೂ.26 ರಂದು ಅಂತಿಮ ವರ್ಷದ ಬಿಸಿಎ, ಬಿಎಸ್ಸಿ. ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ Cognitive Solutions ಕಂಪೆನಿ ವತಿಯಿಂದ ಕಾಲೇಜಿನಲ್ಲಿ ಕ್ಯಾಂಪಸ್ ನೇಮಕಾತಿ ಡ್ರೈವ್ ನಡೆಯಿತು. Cognitive Solutions ಸಂಸ್ಥೆಯ ಸಿಬ್ಬಂದಿಯಾದ ಶ್ರೀ ಸಾಗರ್ ಆಳ್ವ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ, ವೃತ್ತಿ ಮಾರ್ಗದರ್ಶನ ಘಟಕದ ಅಧಿಕಾರಿಗಳಾದ ಶ್ರೀ ಮಹೇಶ್ […]
ವಿ. ಕೆ. ಆರ್. ಆಂಗ್ಲ ಮಾಧ್ಯಮ ಶಾಲೆ : ಸಮಯ ಪರಿಪಾಲನೆ ಮತ್ತು ಅಧ್ಯಯನ ಕೌಶಲ್ಯ ಕುರಿತು ಕಾರ್ಯಗಾರ
ಕುಂದಾಪುರ (ಜೂ,29): ಇಂದು ಬದುಕು ಗೊತ್ತುಗುರಿ ಇಲ್ಲದೆ ಓಡುತ್ತಿದೆ; ಹಾಗಾಗಬಾರದು. ಬದುಕಲ್ಲಿ ಗುರಿ ಇರಬೇಕು. ಕಷ್ಟಗಳನ್ನು ಎದುರಿಸಿ ಎದೆಗುಂದದೆ ಛಲದಿಂದ ಮುಂದುವರಿದಾಗ ಗೆಲುವು ನಮ್ಮದಾಗುತ್ತದೆ. ಜೊತೆಯಲ್ಲಿ ಇಂತಹ ಗೆಲುವು ಸಾಧಿಸಬೇಕಾದರೆ ನಮ್ಮಲ್ಲಿ ಗುರಿ ಇಟ್ಟುಕೊಂಡು ಮುಂದೆ ಸಾಗುವುದು ಬಹಳ ಮುಖ್ಯ. ಇಲ್ಲವಾದಲ್ಲಿ ಮೌಸ್ ಮತ್ತು ಕೀಲಿಮಣೆ ಇಲ್ಲದ ಕಂಪ್ಯೂಟರ್ನoತೆ ಆಗುತ್ತದೆ. ಹಾಗೆ ನಮಗೆ ನಾವೇ ಪ್ರೇರಣೆಯಾಗಬೇಕು ಎಂದು ಖ್ಯಾತ ಸಂಪನ್ಮೂಲ ವ್ಯಕ್ತಿ ಶಿರಿಯಾರ ಗಣೇಶ್ ನಾಯಕ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಶ್ರೀ […]
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೈಕಾಡಿ: ವಿಶ್ವ ಯೋಗ ದಿನಾಚರಣೆ
ಬ್ರಹ್ಮಾವರ(ಜೂ,29): ವಿಶ್ವ ಯೋಗ ದಿನಾಚರಣೆ ಅಂಗವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಯ್ಕಾಡಿಯಲ್ಲಿ ಜೆಸಿಐ ಬ್ರಹ್ಮಾವರ ಸೇವಾಮೆ ಬ್ರಹ್ಮಾವರ ಇವರ ಆಶ್ರಯದಲ್ಲಿ ಇಶಾ ಫೌಂಡೇಶನ್ ಸಂಸ್ಥೆಯ ಸಹಕಾರದಲ್ಲಿ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು. ವಿಶ್ವ ಯೋಗ ದಿನಾಚರಣೆಯ ಮಹತ್ವ,ಯೋಗದಿಂದಾಗುವ ಪ್ರಯೋಜನ, ಯೋಗದ ಅರಿವು ಮತ್ತು ಪ್ರಸ್ತುತ ಸಮಯದಲ್ಲಿ ಯೋಗದ ಅವಶ್ಯಕತೆ ಮತ್ತು ಪ್ರಾತ್ಯಕ್ಷಿಕೆ ಯನ್ನು ಶಾಲಾ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿದಂತೆ 340 ಜನ ಕಾರ್ಯಗಾರದಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ […]
ಕುಂದಾಪುರ: ಜೂ.28 ರಂದು ಯುವ ಬಂಟರ ಸಂಘದ ವತಿಯಿಂದ 1000 ಹೈಬ್ರೀಡ್ ಸಿಹಿ ಫಲದ ಗಿಡಗಳ ವಿತರಣೆ
ಕುಂದಾಪುರ. ಜೂನ್ 26. ಕುಂದಾಪುರ ತಾಲೂಕು ಯುವ ಬಂಟರ ಸಂಘದ ದಶಮ ಸಂಭ್ರಮ ಆಚರಣೆಯ ಅಂಗವಾಗಿ ಹಸಿರು ಹೊನ್ನು ಎಂಬ ಯೋಜನೆಯನ್ನು ರೂಪಿಸಲಾಗಿದ್ದು ಮುಖ್ಯವಾಗಿ ವೈವಿಧ್ಯಮಯ ಗಿಡಗಳನ್ನು ನೆಟ್ಟು ಬೆಳೆಸುವ ಕಾಯಕದಲ್ಲಿ ಯುವ ಜನಾಂಗ ಹೆಚ್ಚು ಸಕ್ರಿಯವಾಗಿ ತೊಡಗಿ ಕೊಳ್ಳುವಂತಾಗಬೇಕು ಎಂಬ ಗುರಿಯನ್ನು ಇರಿಸಿಕೊಂಡು ಜೂನ್ 28 ರ ಬುಧವಾರ ಮಧ್ಯಾಹ್ನ 2.00 ಗಂಟೆಗೆ ಆರ್. ಎನ್. ಶೆಟ್ಟಿ ಸಭಾಭವನದಲ್ಲಿ 1000 ಹೈಬ್ರೀಡ್ ಸಿಹಿ ಫಲದ ಗಿಡಗಳ ವಿತರಣೆ ಈ […]
ಡಾIಬಿ.ಬಿ ಹೆಗ್ಡೆ ಕಾಲೇಜ್ ನಲ್ಲಿ ವೆಯಿಟ್ ಝೋನ್ ಜಿಮ್ & ಫಿಟ್ನೆಸ್ ಸೆಂಟರ್ ವತಿಯಿಂದ ಫಿಟ್ನೆಸ್ ಚಾಲೆಂಜ್ ಕಾರ್ಯಕ್ರಮ
ಕುಂದಾಪುರ(ಜೂ,26): ವೆಯಿಟ್ ಝೋನ್ ಜಿಮ್ & ಫಿಟ್ನೆಸ್ ಸೆಂಟರ್ ಕುಂದಾಪುರ ಇವರ ವತಿಯಿಂದ ಕುಂದಾಪುರದ ಪ್ರತಿಷ್ಟಿತ ಡಾ.ಬಿ. ಬಿ ಹೆಗ್ಡೆ ಕಾಲೇಜ್ ನಲ್ಲಿ ಫಿಟ್ನೆಸ್ ಟಾಸ್ಕ್ ಚಾಲೆಂಜ್ ಕಾರ್ಯಕ್ರಮ ನಡೆಯಿತು.ವೆಯಿಟ್ ಝೋನ್ ಇದರ ಮಾಲಕರಾದ ರಾಘವೇಂದ್ರ ವಿಠಲವಾಡಿಯವರು ವಿದ್ಯಾರ್ಥಿಗಳಿಗೆ ಫಿಟ್ನೆಸ್ ನ ಬಗ್ಗೆ ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿಗಳಿಗೆ ಮಾಹಿತಿಯ ಜೊತೆಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು . ವೆಯಿಟ್ ಝೋನ್ ನ ಗೌರವ ಅಧ್ಯಕ್ಷ ರಾದ ಡಾIಉಮೇಶ್ ಪುತ್ರನ್, ಕಾಲೇಜಿನ ಉಪ […]
ಡಾ| ಬಿ. ಬಿ ಹೆಗ್ಡೆ ಕಾಲೇಜು ಕುಂದಾಪುರ: ಕ್ಯಾಂಪಸ್ ನೇಮಕಾತಿ ಡ್ರೈವ್
ಕುಂದಾಪುರ (ಜೂನ್ 24): ಕಾಲೇಜಿನ ವ್ರತ್ತಿ ಮಾರ್ಗದರ್ಶನ ಘಟಕದ ನೇತೃತ್ವದಲ್ಲಿ ಜೂನ್ 24 ರಂದು ಅಂತಿಮ ಪದವಿ ಬಿಸಿಎ, ಬಿಎಸ್ಸಿ. ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ವಿ ಬುಕ್ ವತಿಯಿಂದ ಕಾಲೇಜಿನಲ್ಲಿ ಕ್ಯಾಂಪಸ್ ನೇಮಕಾತಿ ಡ್ರೈವ್ ನೆರವೇರಿತು. ವಿ ಬುಕ್ ಸಂಸ್ಥೆಯ ಸಿಬ್ಬಂದಿಗಳಾದ ಶ್ರೀ ರಾಘವೇಂದ್ರ ಆಚಾರ್ಯ ಶ್ರೀ ನಾಗರಾಜ್, ಶ್ರೀ ಪವನ್, ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ, ವ್ರತ್ತಿ ಮಾರ್ಗದರ್ಶನ ಘಟಕದ ಘಟಕದ ಅಧಿಕಾರಿಗಳಾದ ಶ್ರೀ ಮಹೇಶ್ ಕುಮಾರ್, […]
ಶಿರ್ವ: ಸಂತ ಮೇರಿ ಮಹಾ ವಿದ್ಯಾಲಯದಲ್ಲಿ ವಿಶೇಷ ಉಪನ್ಯಾಸ
ಶಿರ್ವ(ಜೂ,26): ಇಂದಿನ ವಿವಿಧ ಕ್ಷೇತ್ರಗಳಲ್ಲಿ ದತ್ತಾಂಶ ಸಮಸ್ಯೆಗಳನ್ನು,ಪರಿಹರಿಸಲು ಡೇಟಾ ವಿಜ್ಞಾನವನ್ನು ಬಳಸುವ ಮೂಲಕ ದತ್ತಾಂಶ ಗಣಿಗಾರಿಕೆ, ಯಂತ್ರ ಕಲಿಕೆ ಮತ್ತು ಅಂಕಿಅಂಶಗಳ ವಿಶ್ಲೇಷಣೆಯ ಸಂಯೋಜನೆಯಾಗಿದೆ. ಯುವಕರು ಇಂತಹ ಡೇಟಾ ವಿಜ್ಞಾನದ ಕೌಶಲ್ಯಗಳನ್ನು ಕಲಿಯುವ ಮೂಲಕ ವ್ಯಾಪಾರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ವ್ಯವಹಾರಗಳಿಗೆ ಉತ್ತಮ ನಿರ್ಧಾರಗಳನ್ನು ನೀಡುವ ಮೂಲಕ ಉತ್ತಮ ಉಪಾದಿಗಳನ್ನು ಪಡೆಯಬಹುದೆಂದು ಇಲ್ಲಿನ ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಗಣಕ ವಿಜ್ಞಾನ ವಿಭಾಗವು ತನ್ನ ಘಟಕವಾದ ಐಟಿ ಕ್ಲಬ್ ನ […]