ಕುಂದಾಪುರ( ಜು,5): ಮನುಷ್ಯನ ದೇಹಕ್ಕೆ ಬೆನ್ನುಮೂಳೆ ಹೇಗೆ ಆಧಾರವೋ, ಅದೇ ರೀತಿ ಸದೃಢ ಸಮಾಜ ನಿರ್ಮಾಣಕ್ಕೆ ಉತ್ತಮ ನಾಯಕತ್ವ ಅವಶ್ಯಕ. ಇಂತಹ ನಾಯಕತ್ವ ಗುಣವನ್ನು ವಿದ್ಯಾರ್ಥಿ ದೆಸೆಯಿಂದಲೇ ಬೆಳೆಸಿಕೊಳ್ಳಬೇಕು. ವಿರೋಧ ಪಕ್ಷದವರು ಆಡಳಿತ ಪಕ್ಷದ ಕಾರ್ಯಕ್ಕೆ ಸೂಕ್ತ ಬೆಂಬಲ ನೀಡಿದರೆ ಶಾಲಾ ಸಂಸoತ್ತು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಲು ಸಾಧ್ಯ ಎಂದು ನಾಡಾ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಪುಷ್ಪರವರು ಹೇಳಿದರು. ಅವರು ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ […]
Day: July 5, 2023
ಬಿಲ್ಲವರ ಹಿತರಕ್ಷಣಾ ವೇದಿಕೆ ಗಂಗೊಳ್ಳಿ: ಜು.9 ರಂದು ಎರಡನೇ ಮಹಾಸಭೆ
ಗಂಗೊಳ್ಳಿ(ಜು,5) : ಬಿಲ್ಲವರ ಹಿತರಕ್ಷಣಾ ವೇದಿಕೆ ಗಂಗೊಳ್ಳಿಯ ಎರಡನೇ ವಾರ್ಷಿಕ ಮಹಾಸಭೆ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು ಜುಲೈ 9 ರ ಭಾನುವಾರದಂದು ಗಂಗೊಳ್ಳಿಯ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ನಡೆಯಲಿದೆ. ಶ್ರೀ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಪ್ರವರ್ತಕರಾದ ಡಾ. ಗೋವಿಂದ ಬಾಬು ಪೂಜಾರಿಯವರು ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಮಾಜಿ ಶಾಸಕರಾದ ಕೋಟ ಶ್ರೀನಿವಾಸ್ ಪೂಜಾರಿ, ಉಡುಪಿ ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯೆ […]
ಜಿ.ಎಸ್.ವಿ.ಎಸ್ ಅಸೋಷಿಯೇಷನ್ ಗಂಗೊಳ್ಳಿ: ಶೈಕ್ಷಣಿಕ ಸಾಧಕರ ಅಭಿನಂದನಾ ಸಮಾರಂಭ
ಗಂಗೊಳ್ಳಿ(ಜು,5): ಗಂಗೊಳ್ಳಿಯ ಜಿ.ಎಸ್.ವಿ.ಎಸ್ ಅಸೋಷಿಯೇಷನ್ ವತಿಯಿಂದ ಕಳೆದ 2022-23ರ ಶೈಕ್ಷಣಿಕ ವರುಷದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಶೇಕಡ 85ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳು ಮತ್ತು ವಿಷಯವಾರು ನೂರಕ್ಕೆ ನೂರು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಮತ್ತು ಭೋಧಕರನ್ನು ಗೌರವಿಸುವ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭ ಕಾರ್ಯಕ್ರಮವು ಇಲ್ಲಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಕುಂದಾಪುರದ ಚಿನ್ಮಯಿ ಆಸ್ಪತ್ರೆಯ […]
ಐ ಎಂ ಜೆ ಐ ಎಸ್ ಸಿ ಕಾಲೇಜು ಮೂಡ್ಲಕಟ್ಟೆ – ಕಾಲೇಜು ವಾರ್ಷಿಕೋತ್ಸವ
ಕುಂದಾಪುರ (ಜು,4): ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್ ಕಾಲೇಜು ಮೂಡ್ಲಕಟ್ಟೆ, ಕುಂದಾಪುರ ಇಲ್ಲಿ ವಾರ್ಷಿಕೋತ್ಸವ ಇತ್ತೀಚೆಗೆ ಗಿ ನೆರವೇರಿತು. ಕಲಿಕೆಯು ಕೇವಲ ಪರೀಕ್ಷೆಗೆ ಮಾತ್ರ ಸೀಮಿತವಲ್ಲ, ಕಲಿತದ್ದು ಬದುಕಿನುದ್ದಕ್ಕೂ ಇರಬೇಕಾಗಿದೆ. ಆದ್ದರಿಂದ ಆಳವಾದ ಅಧ್ಯಯನ ಮಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಏನೇ ಗುರಿ ಕಂಡರೂ ಅದನ್ನು ಸಾಧಿಸುವ ಗರಿಷ್ಠ ಪ್ರಯತ್ನವನ್ನು ಮಾಡಬೇಕು” ಎಂದು ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಶ್ರೀಮತಿ ರಶ್ಮಿ ಎಸ್ಆರ್ ಹೇಳಿದರು. ಮುಖ್ಯ […]
ಡಾ| ಬಿ. ಬಿ. ಹೆಗ್ಡೆ ಕಾಲೇಜು: ಕುಂದಗನ್ನಡ ನೆಲಪರ ಆಚರಣೆ ಮತ್ತು ಸಂಸ್ಕೃತಿ-ವಿಶೇಷ ಉಪನ್ಯಾಸ
ಕುಂದಾಪುರ (ಜುಲೈ 04): ಕುಂದಾಪುರ ಭಾಷಿಕ ಮತ್ತು ಸಾಂಸ್ಕೃತಿಕವಾಗಿ ಅನನ್ಯವಾದ ಪ್ರದೇಶ. ಕೃಷಿ ಪ್ರಧಾನವಾದ ಈ ಭಾಗದಲ್ಲಿ ಕೃಷಿಯೊಂದಿಗೆ ಅನೇಕ ನೆಲಪರವಾದ ಆಚರಣೆಗಳು ಹೆಣೆದುಕೊಂಡಿದೆ’. ಆಚರಣೆಗಳು ಮರೆಯಾದಂತೆ ಭಾಷೆ, ಸಂಸ್ಕೃತಿ ತಮ್ಮ ನೆಲೆಯನ್ನು ಕಳೆದುಕೊಳ್ಳುತ್ತದೆ. ಆ ನಿಟ್ಟಿನಲ್ಲಿ ನಮ್ಮ ಪ್ರಾದೇಶಿಕ ಆಚರಣೆಗಳನ್ನು ಯುವ ಪೀಳಿಗೆಗೆ ಪರಿಚಯಿಸುವುದು ತುರ್ತು ಎಂದು ಸಿದ್ದಾಪುರದ ವೈದ್ಯರಾದ ಡಾ| ಜಗದೀಶ್ ಶೆಟ್ಟಿ ಹೇಳಿದರು. ಅವರು ದಿನಾಂಕ ಜು.04 ರಂದು ಡಾ| ಬಿ. ಬಿ. ಹೆಗ್ಡೆ ಪ್ರಥಮ […]