ಕುಂದಾಪುರ (ಜು,4): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕುಂದಗನ್ನಡ ಸಂಘ ಹಾಗೂ ಕನ್ನಡ ಸಂಘದ ವಿದ್ಯಾರ್ಥಿ ಗಳಿಂದ ವಿಸ್ತರಣಾ ಚಟುವಟಿಕೆ ಕಾರ್ಯಕ್ರಮವನ್ನು ಜೂನ್ 26ರಂದು ಕೊಳ್ಕೆಬೈಲ್ ಸೂರಪ್ಪ ಶೆಟ್ಟಿ ಸರ್ಕಾರಿ ಪ್ರೌಢಶಾಲೆ, ಹಕ್ಲಾಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಕುಂದಗನ್ನಡ ಸಂಘ ಹಾಗೂ ಕನ್ನಡ ಸಂಘದ ವಿದ್ಯಾರ್ಥಿಗಳು ನಡೆಸಿಕೊಟ್ಟ ಈ ಕಾರ್ಯಕ್ರಮದಲ್ಲಿ ಹಕ್ಲಾಡಿ ಪ್ರೌಢಶಾಲೆಯ ವಿದ್ಯರ್ಥಿಗಳ ಸಹಯೋಗದೊಂದಿಗೆ ಅನೇಕ ಪಠ್ಯೇತರ ಕರ್ಯ ಚಟುವಟಿಕೆಗಳನ್ನು ನಡೆಸುವುದರ ಮೂಲಕ ವಿಜೇತ ವಿದ್ಯಾರ್ಥಿಗಳಿಗೆ […]
Month: July 2023
ಡಾ| ಬಿ. ಬಿ. ಹೆಗ್ಡೆ ಕಾಲೇಜು ಕುಂದಾಪುರ: ಲಲಿತ ಕಲಾ ಸಂಘದ ವತಿಯಿಂದ ವಿಸ್ತರಣಾ ಚಟುವಟಿಕೆ
ಕುಂದಾಪುರ (ಜು,3): ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಇದರ ಲಲಿತ ಕಲಾಸಂಘದ ವತಿಯಿಂದ ವಿಸ್ತರಣಾ ಚಟುವಟಿಕೆಯನ್ನು ಅಂಪಾರು ಮೂಡುಬಗೆ ವಾಗ್ಜ್ಯೋತಿ ಶ್ರವಣ ದೋಷವುಳ್ಳ ಮಕ್ಕಳ ವಸತಿ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಹಾಗೂ ಕಲೆಯ ಮಹತ್ವವನ್ನು ತಿಳಿಸುವ ಸಲುವಾಗಿ ಲಲಿತಾ ಕಲಾಸಂಘದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ, ಯಕ್ಷಗಾನ, ಭರತನಾಟ್ಯ, ಜಾನಪದ ನೃತ್ಯ ಹಾಗೂ ಅರೆ ಶಾಸ್ತ್ರೀಯ ನೃತ್ಯ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರದರ್ಶಿಸಲಾಯಿತು. ಇದರ ಜೊತೆಗೆ […]
ಆರ್.ಎನ್.ಶೆಟ್ಟಿ ಪಿ. ಯು ಕಾಲೇಜು ಕುಂದಾಪುರ : ಶಾಸ್ತ್ರೀಯ ನೃತ್ಯದಲ್ಲಿ ರಾಷ್ಟ್ರಮಟ್ಟದ ಸಾಧನೆ
ಕುಂದಾಪುರ(ಜು,3): ಇಲ್ಲಿನ ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿರುವ ಕುಮಾರಿ ಪೂರ್ವಿಕಾ ಇವರು ಪ್ರಭಾತ್ ಕಲಾವಿದರ ತಂಡ ಗೋಪಿನಾಥ್ ನ್ಯಾಸ-2023 ವತಿಯಿಂದ ಬೆಂಗಳೂರಿನಲ್ಲಿಆಯೋಜಿಸಲ್ಪಟ್ಟ ರಾಷ್ಟ್ರ ಮಟ್ಟದ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಸ್ಪರ್ಧೆಗಳ ಭರತನಾಟ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಪರ್ಯಾಯ ಪಾರಿತೋಷಕವನ್ನು ಗಳಿಸಿರುತ್ತಾರೆ. ಕು.ಪೂರ್ವಿಕಾ ಇವರು ವಿದುಷಿ ಪ್ರವಿತ ಮತ್ತು ಅಶೋಕ್ ಕುಮಾರ್ ರವರ ಪುತ್ರಿ. ಪೂರ್ವಿಕಾಳ ಈ ಅಮೋಘ ನೃತ್ಯಸಾಧನೆಯನ್ನು ಮೆಚ್ಚಿ, […]
ಸೇವಾ ಚೇತನ ಟ್ರಸ್ಟ್(ರಿ) ,ಮೂಡುಬಗೆ: ಸ್ವಚ್ಚತೆಯೇ ಸರ್ವೋಚ್ಛತೆ ಕಾರ್ಯಕ್ರಮ
ಕುಂದಾಪುರ(ಜು,03): ಸ್ವಚ್ಚತೆಯೆ ಸರ್ವೋಚ್ಛತೆ ಕಾರ್ಯಕ್ರಮದಡಿಯಲ್ಲಿ ಸೇವಾ ಚೇತನ ಟ್ರಸ್ಟ್ ಮೂಡುಬಗೆ ವತಿಯಿಂದ ಸ್ವಚ್ಚತಾ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಮೂಡುಬಗೆಯ ಸಣ್ಣ ಊರಿನಲ್ಲಿ ದೊಡ್ಡ ಉದ್ಧೇಶ ಇರಿಸಿಕೊಂಡು ಆರಂಭವಾದ ಸಮಾನ ಮನಸ್ಕರ ತಂಡವೊಂದು ಜನಸ್ನೇಹಿ ಹಾಗೂ ಜನಪರ ಕೆಲಸಗಳನ್ನು ಮಾಡುವ ಮೂಲಕ ಜನಮಾನಸದಲ್ಲಿ ಸ್ಥಾನ ಪಡೆದುಕೊಂಡಿದೆ. ನಮ್ಮೂರ ಸಂಭ್ರಮ ಎಂಬ ಸಾಮಾಜಿಕ- ಧಾರ್ಮಿಕ- ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಊರಿನ ಹೆಸರನ್ನು ರಾಜ್ಯಾದ್ಯಂತ ಪಸರಿಸಿದ ಹೆಮ್ಮ ಸೇವಾ ಚೇತನ ಟ್ರಸ್ಟ್. ಎರಡು ವರ್ಷಗಳಿಂದ ನಿರಂತರ […]
ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ: ವಾರ್ಷಿಕ ಕ್ರೀಡೋತ್ಸವ
ಬ್ರಹ್ಮಾವರ(ಜು,03): ಕ್ರೀಡೆಯಿಂದ ಕೇವಲ ಮನೋರಂಜನೆ ಮಾತ್ರ ದೊರೆಯಲಾರದು ,ಅವುಗಳಿಂದ ದೈಹಿಕ ಶಕ್ತಿ, ಮಾನಸಿಕ ಶಾಂತಿ ,ವೃದ್ಧಿಯಾಗುವುದು ಎಂಬ ಉದ್ದೇಶ ಹೊಂದಿರುವ ವಿದ್ಯಾ ಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ವಾರ್ಷಿಕ ಕ್ರೀಡೋತ್ಸವ ಬ್ರಹ್ಮಾವರದ ಸರಕಾರಿ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ಇತ್ತೀಚೆಗೆ ಜರುಗಿತು. ಅತಿಥಿಗಳಾಗಿ ಶ್ರೀ ಮೊಹಮ್ಮದ್ ಆಸಿಫ್ ಜನರಲ್ ಮ್ಯಾನೇಜರ್ ಟವೆಲ್ ಪ್ರಾಜೆಕ್ಟ್ಕಕಂಪೆನಿ ಮಸ್ಕತ್, ಶ್ರೀಮತಿ ಫಾಝಿಯ ಹಾಗೂ ಬಿ ಟಿ ನಾಯಕ್ ನಿವೃತ್ತ ಉಪಪ್ರಾಂಶುಪಾಲರು ಸರಕಾರಿ ಬೋರ್ಡ್ […]
ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಕಲ್ಯಾಣಪುರ – ಉಡುಪಿ: ಕ್ರಿಯೇಟಿವ್ ಸಮಾಗಮ
ಉಡುಪಿ(ಜು,3): ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ (ರಿ) ಕಾರ್ಕಳ ಇವರ ಸಹಭಾಗಿತ್ವದ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಕಲ್ಯಾಣಪುರ ಉಡುಪಿಯಲ್ಲಿ ಜೂ,30 ರ ಶುಕ್ರವಾರದಂದು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಮತ್ತು ಶೈಕ್ಷಣಿಕ, ಸಾಂಸ್ಕೃತಿಕ ,ಕ್ರೀಡಾ ಸಂಘಟನೆಗಳ ಉದ್ಘಾಟನೆ ನಿಮಿತ್ತ “ಕ್ರಿಯೇಟಿವ್ ಸಮಾಗಮ” ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮವನ್ನು ಸಂಸ್ಥೆಯ ಸಂಸ್ಥಾಪಕರುಗಳಲ್ಲಿ ಓರ್ವರಾದ ಶ್ರೀ ಅಶ್ವತ್ ಎಸ್ ಎಲ್ ರವರು ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತುಗಳನ್ನಾಡಿದರು. “ವಿದ್ಯಾರ್ಥಿಗಳು ತಮ್ಮ ಕನಸನ್ನು ನನಸು ಮಾಡಿಕೊಳ್ಳಲು […]
ಯುವ ಬಂಟರ ಸಂಘ ದಶಮ ಸಂಭ್ರಮದ ಸಿಹಿ ನೆನಪಿಗೆ ಹಸಿರು ಹೊನ್ನು
ಕುಂದಾಪುರ(ಜು,3): ಹವಾಮಾನ ವೈಪರೀತ್ಯದಿಂದ ಭವಿಷ್ಯದ ದಿನಗಳು ಆತಂಕದಿಂದ ಕೂಡಿದ್ದು ಯುವ ಜನಾಂಗ ಈ ನಿಟ್ಟಿನಲ್ಲಿ ಕ್ರಿಯಾಶೀಲವಾಗಬೇಕು. ಗಿಡ ಹಸ್ತಾಂತರ ಸಮಾರಂಭವನ್ನು ಕೇವಲವಾಗಿ ಪರಿಗಣಿಸದೆ ಅದು ಜವಾಬ್ದಾರಿಯ ಹಸ್ತಾಂತರ ಎಂದು ಭಾವಿಸಿ, ಮುಂದಿನ ಪೀಳಿಗೆಗೆ ಹಸಿರು ಹೊನ್ನಿನ ಹೂಡಿಕೆಯಾಗಿಸಬೇಕು ಎಂದು ಮೈಸೂರು ಮರ್ಕಂಟೈಲ್ಸ್ ಕಂಪೆನಿ ಲಿಮಿಟೆಡ್ ಬೆಂಗಳೂರಿನ ಆಡಳಿತ ನಿರ್ದೇಶಕ ಶ್ರೀ ಎಚ್.ಎಸ್. ಶೆಟ್ಟಿ ಹೇಳಿದರು. ಅವರು ಜೂನ್ 28ರ ಬುಧವಾರ ಕುಂದಾಪುರದ ಆರ್ ಎನ್ ಶೆಟ್ಟಿ ಸಭಾಭವನದಲ್ಲಿ ಕುಂದಾಪುರ ತಾಲೂಕು […]
ಡಾ| ಬಿ. ಬಿ. ಹೆಗ್ಡೆ ಕಾಲೇಜು: ಬಿ ಸಿ ಎ ವಿಭಾಗದಿಂದ ವಿಸ್ತರಣಾ ಚಟುವಟಿಕೆ
ಕುಂದಾಪುರ (ಜು ,02): ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮದರ್ಜೆ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಗಳಿಂದ ವಿಸ್ತರಣಾ ಚಟುವಟಿಕೆಯನ್ನು ನಿವೇದಿತಾ ಪ್ರೌಢಶಾಲೆ ಬಸ್ರೂರಿನಲ್ಲಿ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು. ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿಗಳು ನಡೆಸಿಕೊಟ್ಟ ಈ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಗಣಕಯಂತ್ರ ಮತ್ತು ಅದರ ಉಪಯೋಗಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಕಂಪ್ಯೂಟರ್ ಹೇಗೆ ತನ್ನ ಕಾರ್ಯ ನಿರ್ವಹಿಸುತ್ತದೆ ಮತ್ತು ಕಂಪ್ಯೂರ ನ ಅಗತ್ಯತೆ ಮತ್ತು […]
ಡಾ| ಬಿ. ಬಿ. ಹೆಗ್ಡೆ ಕಾಲೇಜು, ಕುಂದಾಪುರ: ಪ್ರಿ ಪ್ಲೇಸ್ಮೆಂಟ್ ಟಾಕ್
ಕುಂದಾಪುರ (ಜೂನ್ 17): ಕಾಲೇಜಿನ ವೃತ್ತಿ ಮಾರ್ಗದರ್ಶನ ಘಟಕದ ನೇತೃತ್ವದಲ್ಲಿ ಅಂತಿಮ ವರ್ಷದ ಬಿಸಿಎ ಮತ್ತು ಬಿಎಸ್ಸಿ. ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ Smart Sight Innovations ವತಿಯಿಂದ ಕಾಲೇಜಿನಲ್ಲಿ ಪ್ರಿ ಪ್ಲೇಸ್ಮೆಂಟ್ ಟಾಕ್ ನೆರವೇರಿತು. Smart Sight Innovations ಸಂಸ್ಥೆಯ ಸಿಬ್ಬಂದಿಗಳಾದ ಶ್ರೀ ರಾಘವೇಂದ್ರ ಆಚಾರ್ಯ, ಶ್ರೀ ಶ್ರೀವತ್ಸ್, ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಉಪ ಪ್ರಾಂಶುಪಾಲರಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ, ವೃತ್ತಿ ಮಾರ್ಗದರ್ಶನ ಘಟಕದ ಅಧಿಕಾರಿಗಳಾದ […]
ರೋಟರಿ ಕ್ಲಬ್ ಕೋಟೇಶ್ವರ: ಅಧ್ಯಕ್ಷರಾಗಿ ಜಗದೀಶ್ ಮೊಗವೀರ ಮಾರ್ಕೋಡು ಆಯ್ಕೆ
ಕೋಟೇಶ್ವರ(ಜು,02):ರೋಟರಿ ಕ್ಲಬ್ ಕೋಟೇಶ್ವರ ಇದರ 2023-24 ನೇ ಸಾಲಿನ ನೂತನ ಅಧ್ಯಕ್ಷರಾಗಿ ಉದ್ಯಮಿ ಶ್ರೀ ಜಗದೀಶ್ ಮೊಗವೀರ ಆಯ್ಕೆಯಾಗಿದ್ದಾರೆ. ಹಾಗೂ ಕಾರ್ಯದರ್ಶಿಯಾಗಿ ರಾಜು ಮೊಗವೀರ ರವರು ಆಯ್ಕೆಯಾಗಿದ್ದಾರೆ.