ಕುಂದಾಪುರ (ಜ.27): ಬೆಂಗಳೂರಿನ ರಾಜಭವನದಲ್ಲಿ ಇತ್ತೀಚೆಗೆ ನಡೆದ ಸ್ಕೌಟ್ ಹಾಗೂ ಗೈಡ್ಸ್ ರಾಜ್ಯ ಪುರಸ್ಕಾರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿದ ಡಾ|ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರೋವರ್ಸ್ ಸ್ವಯಂ ಸೇವಕ ವಿನಯ್ ಇವರಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹೋಟ್ ಅವರು ಪ್ರಶಸ್ತಿ ಪತ್ರ ಪ್ರದಾನ ಮಾಡಿದರು. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರಾದ ಶ್ರೀ ಬಿ.ಎಮ್ ಸುಕುಮಾರ್ ಶೆಟ್ಟಿ ,ಪ್ರಾಂಶುಪಾಲರು, ಬೋಧಕ ಹಾಗೂ ಭೋಧಕೇತರ ಸಿಬ್ಬಂದಿಗಳು ಅಭಿನಂದನೆ […]
Month: January 2024
ಕುಂದಾಪುರದ ಆರ್. ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಗಣರಾಜ್ಯೋತ್ಸವ ಆಚರಣೆ
ಕುಂದಾಪುರ (ಜ.30): ನಮ್ಮ ನಾಗರೀಕ ಜೀವನದ ಪ್ರತಿಯೊಂದು ಹಂತದಲ್ಲಿಯೂ ಅಗತ್ಯವಿರುವ ದಾಖಲೆಯನ್ನು ಅನುಮೋದಿಸುವುದೇ ಘನ ಸರಕಾರ. ಅಂಥ ಸರಕಾರ ನೀಡುವ ಸೌಲಭ್ಯಗಳನ್ನು ಎಲ್ಲರೂ ಇತಿಮಿತಿಯಲ್ಲಿ ಬಳಸಿಕೊಳ್ಳುವುದು ಅವಶ್ಯಕ. ಸ್ವಾರ್ಥ ಮನೋಭಾವದಿಂದ ಇನ್ನೊಬ್ಬರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು ಕೂಡ ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿದಂತೆಯೇ ” ಎಂದು 75 ನೇ ಗಣರಾಜ್ಯೋತ್ಸವದ ಅಂಗವಾಗಿ ಕಾಲೇಜಿನಲ್ಲಿ ಧ್ವಜಾರೋಹಣವನ್ನು ನರವೇರಿಸಿದ ಕುಂದಾಪುರದ ಆರ್. ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ್ ಕುಮಾರ […]
ಜೆ ಸಿ ಐ ಬೈಂದೂರು ಸಿಟಿ ವತಿಯಿಂದ ಯುವ ದಿನಾಚರಣೆ ಪ್ರಯುಕ್ತ ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕಕ್ಕೆ ಯುವ ಪ್ರೇರಣಾ ಪ್ರಶಸ್ತಿ ಪ್ರದಾನ
ಹೆಮ್ಮಾಡಿ(ಜ.30): ಜೆ.ಸಿ. ಐ ಬೈಂದೂರು ಸಿಟಿ ವತಿಯಿಂದ ಯುವ ದಿನಾಚರಣೆ ಪ್ರಯುಕ್ತ ಮೊಗವೀರ ಯುವ ಸಂಘಟನೆ(ರಿ.) ಉಡುಪಿ ಜಿಲ್ಲೆ ಇದರ ಪ್ರತಿಷ್ಠಿತ ಘಟಕವಾದ ಹೆಮ್ಮಾಡಿ ಘಟಕದ ಸೇವಾ ಚಟುವಟಿಕೆಗಳನ್ನು ಗುರುತಿಸಿ ಯುವ ಪ್ರೇರಣಾ ಪ್ರಶಸ್ತಿ ನೀಡಿ ಗುರುತಿಸುವ ಕಾರ್ಯಕ್ರಮವನ್ನು ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಸಭಾಂಗಣದಲ್ಲಿ ಜನವರಿ.30 ರಂದು ಹಮ್ಮಿಕೊಳ್ಳಲಾಯಿತು. ಜೆ.ಸಿ. ಐ ಬೈಂದೂರು ಸಿಟಿ ಅಧ್ಯಕ್ಷರಾದ ಜೆ.ಸಿ.ಎಚ್.ಜಿ.ಎಫ್ ಅನಿತಾ ಆರ್. ಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಹೆಮ್ಮಾಡಿ ಘಟಕದ ಸೇವಾ ಚಟುವಟಿಕೆಯನ್ನು ಶ್ಲಾಘಿಸಿದರು. ಸನ್ಮಾನವನ್ನು ಸ್ವೀಕರಿಸಿ […]
ಪಂಚ ಗಂಗಾವಳಿ ಬಳಗ ಗಂಗೊಳ್ಳಿ: 30ನೇ ವಾರ್ಷಿಕೋತ್ಸವ ಸಮಾರಂಭ
ಗಂಗೊಳ್ಳಿ( ಜ,30): : ಉತ್ತಮ ವಿಚಾರಗಳನ್ನು ಪ್ರೋತ್ಸಾಹಿಸಲು ನಾವು ಸದಾ ಸಿದ್ಧರಿರಬೇಕು. ಆಗ ಮಾತ್ರ ಉತ್ತಮ ಸಮಾಜದ ನಿರ್ಮಾಣವಾಗಲು ಸಾಧ್ಯ ಎಂದು ಉಡುಪಿ ಕರ್ನಾಟಕ ಬ್ಯಾಂಕ್ ಶಾಖೆಯ ಸೀನಿಯರ್ ಮ್ಯಾನೇಜರ್ ರವೀಂದ್ರ ಶ್ಯಾನುಭಾಗ್ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಗಂಗೊಳ್ಳಿಯಲ್ಲಿ ನಡೆದ ಪಂಚಗಂಗಾವಳಿ ಬಳಗದ 30ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಮಾತನಾಡಿ ಸಾಂಸ್ಕೃತಿಕ […]
ಡಾIಬಿ. ಬಿ.ಹೆಗ್ಡೆ ಕಾಲೇಜು ಸಿಬ್ಬಂದಿ ಕ್ಷೇಮಪಾಲನಾ ಸಮಿತಿಯ ವಾರ್ಷಿಕ ಸಭೆ
ಕುಂದಾಪುರ (ಜ,26) : ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳು ಸಮಾನ ಮನಸ್ಕರಾಗಿ ಕರ್ತವ್ಯ ನಿರ್ವಹಿಸುವುದರೊಂದಿಗೆ ತಮ್ಮ ನೋವು-ನಲಿವುಗಳಲ್ಲಿ ಸ್ಪಂದಿಸುವoತಾದಾಗ ಮಾನಸಿಕವಾಗಿ ಒಂದುಗೂಡಿ ಕೆಲಸ ಮಾಡಲು ಸಾಧ್ಯ. ಹೀಗಾಗಿ ಇಂತಹ ಸಂಘಗಳು ನಮ್ಮೊಳಗಿನ ಯೋಚನೆಯನ್ನು ಪ್ರಚುರಪಡಿಸುತ್ತದೆ ಎಂದು ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಹೇಳಿದರು. ಅವರು ಕಾಲೇಜಿನ ಸಿಬ್ಬಂದಿ ಕ್ಷೇಮಪಾಲನಾ ಸಮಿತಿಯ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಣಿತಶಾಸ್ತ್ರ ಉಪನ್ಯಾಸಕಿ […]
ವಿದ್ಯಾ ಅಕಾಡೆಮಿ ಮೂಡ್ಲಕಟ್ಟೆ:ಫೆಬ್ರವರಿ 2ರಂದು ಶಾಲಾ ವಾರ್ಷಿಕೋತ್ಸವ
ಮೂಡ್ಲಕಟ್ಟೆ( ಜ,30): ಇಲ್ಲಿನ ವಿದ್ಯಾ ಅಕಾಡೆಮಿ ವಿದ್ಯಾಸಂಸ್ಥೆಯಲ್ಲಿ ಫೆಬ್ರವರಿ 2ರಂದು ಶಾಲಾ ವಾರ್ಷಿಕೋತ್ಸವ ಸಮಾರಂಭ ಜರುಗಲಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯವರಾಗಿ ಬರಹಗಾರ್ತಿ ಮತ್ತು ವಾಗ್ಮಿ ಶ್ರೀಮತಿ ಪೂರ್ಣಿಮಾ ಭಟ್ ಕಮಲಶಿಲೆ, ಕಾರ್ಯಕ್ರಮದ ಅಧ್ಯಕ್ಷರಾಗಿ ಐಎಂಜೆ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಸಿದ್ದಾರ್ಥ್ ಜೆ ಶೆಟ್ಟಿಯವರು ಉಪಸ್ಥಿತರಿಲಿದ್ದಾರೆ . ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿರುವುದು ಎಂದು ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಡಾ| ಬಿ. ಬಿ. ಹೆಗ್ಡೆ ಕಾಲೇಜು: 75ನೇ ಗಣರಾಜ್ಯೋತ್ಸವ
ಕುಂದಾಪುರ (ಜ,26) : ದೇಶದ ಅಭಿವೃದ್ಧಿ ಜನರ ಏಕತೆ ಮತ್ತು ದೇಶಾಭಿಮಾನದಿಂದ ಸಾಧ್ಯ. ವಿದ್ಯಾರ್ಥಿಗಳು ರಾಷ್ಟ್ರ ಪ್ರೇಮ ಬೆಳೆಸಿಕೊಳ್ಳಬೇಕು ಆ ಮೂಲಕ ಬಲಿಷ್ಟ ರಾಷ್ಟ್ರ ನಿರ್ಮಾಣವಾಗಬೇಕು ಎಂದು ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಬಿ. ಎಮ್. ಸುಕುಮಾರ ಶೆಟ್ಟಿ ಹೇಳಿದರು. ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 75ನೇ ಗಣರಾಜ್ಯೋತ್ಸವದ ಫಥ ಸಂಚಲನದ ಗೌರವವನ್ನು ಸ್ವೀಕರಿಸಿ, ಧ್ವಜಾರೋಹಣ ಮಾಡಿ ಮಾತನಾಡಿದರು. ಈ […]
ಸರಕಾರಿ ಪ್ರೌಢಶಾಲೆ ಆಲೂರು: ರಸಪ್ರಶ್ನೆಯಲ್ಲಿ ರಾಜ್ಯಕ್ಕೆ ಪ್ರಥಮ -ಘನತೆವೆತ್ತ ರಾಜ್ಯಪಾಲರಿಂದ ಗೌರವ
ಕುಂದಾಪುರ ( ಜ,28): ಮುಖ್ಯ ಚುನಾವಣಾಧಿಕಾರಿಗಳ ಕಛೇರಿ, ಬೆಂಗಳೂರು ಮತ್ತು ಚಂದನ ದೂರದರ್ಶನ(ಡಾ.ನಾ.ಸೋಮೇಶ್ವರ ನೆಡೆಸುವ ಥಟ್ ಅಂತ ಹೇಳಿ) ಜಂಟಿಯಾಗಿ ನೆಡೆಸಿದ ಚುನಾವಣಾ ರಸಪ್ರಶ್ನೆಯಲ್ಲಿ ಭಾಗವಹಿಸಿದ 33 ಜಿಲ್ಲೆಗಳ ತಂಡವನ್ನು ಸೋಲಿಸಿ ಪ್ರಥಮ ಸ್ಥಾನ ಪಡೆದ ಸರಕಾರಿ ಪ್ರೌಢಶಾಲೆ ಆಲೂರು ಇದರ ವಿಧ್ಯಾರ್ಥಿಗಳಾದ ಗ್ರೀಷ್ಮ ಮತ್ತು ಪ್ರಜ್ಞಾ ಇವರನ್ನು ಬೆಂಗಳೂರು ಪುರಭವನದಲ್ಲಿ ನೆಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಗೌರವಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಚುನಾವಣಾ ಆಯುಕ್ತರಾದ ಮನೋಜ್ ಕುಮಾರ ಮೀನಾ […]
ಕುಂದಾಪುರ: ವಿ.ಕೆ.ಆರ್.ಶಾಲೆಯ ಗಾರ್ಗಿ ದೇವಿ ಪರೀಕ್ಷಾ ಪೆ ಚರ್ಚಾ 2024 ಕ್ಕೆ ಆಯ್ಕೆ
ಕುಂದಾಪುರ( ಜ,28): ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಗಾರ್ಗಿ ದೇವಿ ಇವಳು ಪರೀಕ್ಷಾ ಪೆ ಚರ್ಚಾ 2024 ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದು ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ಜೊತೆ ಸಂವಾದದಲ್ಲಿ ಪಾಲ್ಗೊಳ್ಳಲಿದ್ದಾಳೆ. ಈಕೆ ದೇವಲ್ಕುಂದದ ಅಶೋಕ್ ಸುವರ್ಣ ಮತ್ತು ನಾಟ್ಯ ವಿದುಷಿ ಪ್ರವಿತಾ […]
ರಾಷ್ಟ್ರಮಟ್ಟದ ಕಂಚಿನ ಪದಕ ವಿಜೇತೆ ಗಾರ್ಗಿದೇವಿಗೆ ಸನ್ಮಾನ
ಕುಂದಾಪುರ (ಜ.23): ಶಿಕ್ಷಣ ಮಂತ್ರಾಲಯ, ಭಾರತ ಸರಕಾರವು ನಡೆಸಿದ ರಾಷ್ಟ್ರ ಮಟ್ಟದ 2023-24ನೇ ಸಾಲಿನ ಕಲೋತ್ಸವದ ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದ ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್. ಆಚಾರ್ಯ ಸ್ಮಾರಕ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಗಾರ್ಗಿ ದೇವಿಯನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗಾರ್ಗಿ ದೇವಿಯ ಪೋಷಕರಾದ ಶ್ರೀ […]