ಗಂಗೊಳ್ಳಿ (ಸೆ .15): ವಿದ್ಯಾರ್ಥಿಗಳು ಪಠ್ಯದ ಜೊತೆ ವ್ಯವಹಾರ ಜ್ಞಾನ ಮತ್ತು ಸಂವಹನ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು. ಬದುಕಿನಲ್ಲಿ ಯಶಸ್ಸನ್ನು ಕಂಡುಕೊಳ್ಳಲು ಇದು ಅತಿ ಮುಖ್ಯವಾಗುತ್ತದೆ ಎಂದು ಉದ್ಯಮಿ ವಿಠ್ಠಲ ಬಿ ಶಣೈ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಎಸ್.ವಿ. ಕಾಮರ್ಸ್ ಕ್ಲಬ್ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಗಂಗೊಳ್ಳಿಯ ಉದ್ಯಮಿ ರೋಷನ್ ಖಾರ್ವಿ ಎಸ್. ವಿ ಕಾಮರ್ಸ್ ಕ್ಲಬ್ ಲಾಂಛನವನ್ನು […]
Day: September 15, 2025
ಹೇರಂಜಾಲು: 10ನೇ ಆಯುರ್ವೇದ ದಿನಾಚರಣೆ- ಪೌಷ್ಟಿಕ ಮಾಸಾಚರಣೆ
ಹೇರಂಜಾಲು( ಸೆ.15): ಆಯುರ್ವೇದದಲ್ಲಿ ತಿಳಿಸಿರುವ ದಿನಚರ್ಯೆ, ಋತುಚರ್ಯೆ, ಸದ್ವೃತ್ತ ಪಾಲನೆ ಮಾಡುವುದರಿಂದ ಆರೋಗ್ಯವಂತನು ರೋಗ ಬಾರದಂತೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಜೊತೆಯಲ್ಲಿ ರೋಗಿಯ ರೋಗವನ್ನು ಕೂಡ ಗುಣಪಡಿಸಬಹುದು. ನಮ್ಮ ಮನೆಯಂಗಳದಲ್ಲಿ ಇರುವಂತಹ ಅನೇಕ ಸಸ್ಯಗಳನ್ನ ಆಹಾರವಾಗಿ ಉಪಯೋಗಿಸುವುದರಿಂದ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಜೊತೆಯಲ್ಲಿ ಅವುಗಳಿಂದಲೇ ಪೌಷ್ಟಿಕ ಆಹಾರವನ್ನು ಕೂಡ ನಾವು ಹೇಗೆ ತಯಾರಿಸಿ ಸೇವಿಸಬಹುದು ಎಂದು ಸರಕಾರಿ ಆಯುರ್ವೇದ ಚಿಕಿತ್ಸಾಲಯ ಕಾಲ್ತೋಡು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ – […]
ಫುಟ್ಬಾಲ್ : ಕಾರ್ಕಳ ಜ್ಞಾನಸುಧಾದ ಮೂವರು ರಾಜ್ಯ ತಂಡಮಟ್ಟಕ್ಕೆ
ಕಾರ್ಕಳ( ಸೆ.15): ಪದವಿಪೂರ್ವ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಸೈಂಟ್ಮೇರಿಸ್ ಪದವಿ ಪೂರ್ವ ಕಾಲೇಜು ಶಿರ್ವದಲ್ಲಿ ಜರುಗಿದ ಜಿಲ್ಲಾ ಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ದ್ವಿತೀಯ ಸ್ಥಾನವನ್ನು ಪಡೆದು, ಸಂಸ್ಥೆಯ ಅನ್ಸಿತ್ ಎ ಭಂಡಾರಿ, ಮನ್ವಿಶ್ ರಾವ್ ಮತ್ತು ಅಖಿಲ್ ಸಾಯಿ ಕೋಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.
ಜ್ಞಾನಸುಧಾ : ಮೌಲ್ಯಸುಧಾ-40
ಗಣಿತನಗರ( ಸೆ .15): ಒಬ್ಬ ವ್ಯಕ್ತಿಯ ಯಶಸ್ಸಿಗೆ, ಕನಸನ್ನು ನನಸು ಮಾಡಲು ಪರಿಸ್ಥಿತಿ ಮುಖ್ಯವಲ್ಲ ಮನಸ್ಥಿತಿ ಮುಖ್ಯ. ಸಕಾರಾತ್ಮ ಆಲೋಚನೆಗಳಿಗೆ ಸೋಲಿಲ್ಲ. ಯಾರಿಗೆ ಹೆತ್ತವರ ಆಲೋಚನೆಗಳು ಅರ್ಥವಾಗುತ್ತವೆಯೋ ಅಂತವರು ಎಂದೂ ಹಾದಿ ತಪ್ಪಲು ಸಾದ್ಯವಿಲ್ಲ ಎಂದು ಸ.ಪ.ಪೂ.ಕಾಲೇಜು ಸದಲಗ, ಚಿಕ್ಕೋಡಿ ಇಲ್ಲಿನ ಉಪನ್ಯಾಸಕ ಶ್ರೀ ವೀರೇಶ್ ಗದಿಗೆಪ್ಪಗೌಡ ಪಾಟೀಲ್ ಹೇಳಿದರು. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಹಯೋಗದಲ್ಲಿ […]










