ಕುಂದಾಪುರ(ಮಾ.7) : ಮಕ್ಕಳನ್ನು ಮೊಬೈಲ್ ದಾಸರನ್ನಾಗಿ ಮಾಡಬೇಡಿ, ಸಾಧ್ಯವಾದಷ್ಟು ಅವರನ್ನು ಹೊರಗಡೆ ಆಟವಾಡಲು ಬಿಡಿ, ಆಟವಾಡುವಾಗ ಎದ್ದು ಬಿದ್ದು ಕಲಿತ ಪಾಠವೇ ಅವರ ಜೀವನವನ್ನು ರೂಪಿಸಬಲ್ಲುದೇ ಹೊರತು ಮೊಬೈಲ್ ನೋಡುವುದರಿಂದ ಅಲ್ಲ, ಎಂದು ಸಂಸ್ಥೆಯ ಹಳೆ ವಿದ್ಯಾರ್ಥಿಶ್ರೀ ಪವನ್ ಕುಮಾರ್ ಶೆಟ್ಟಿ ಹೇಳಿದರು. ಅವರು ಕುಂದಾಪುರ ಎಜುಕೇಶನ್ ಸೊಸೈಟಿ (ರಿ) ಪ್ರವರ್ತಿತ ಎಚ್. ಎಮ್. ಎಮ್. ಪೂರ್ವ ಪ್ರಾಥಮಿಕ ವಿಭಾಗದ ʼಗ್ರ್ಯಾಜುಯೇಷನ್ ಡೇ ʼಯ ಮುಖ್ಯ ಅತಿಥಿಯಾಗಿ ವಿಧ್ಯಾರ್ಥಿಗಳಿಗೆ ಪ್ರಮಾಣಪತ್ರ ವನ್ನು […]
Day: March 10, 2026
ಬಿ.ಬಿ. ಹೆಗ್ಡೆ ಕಾಲೇಜು ವಿದ್ಯಾರ್ಥಿಗಳಿಂದ ಅಧ್ಯಯನ ಭೇಟಿ
ಕುಂದಾಪುರ (ಮಾರ್ಚ್ 7): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ವಿಸ್ತರಣಾ ಚಟುವಟಿಕೆಯ ಭಾಗವಾಗಿ ಅಧ್ಯಯನಕ್ಕಾಗಿ ವಿದ್ಯಾರ್ಥಿಗಳು ಕೋಟದಲ್ಲಿರುವ ಶಿವರಾಮ ಕಾರಂತ ಥೀಮ್ ಪಾರ್ಕ್ ಗೆ ಭೇಟಿ ನೀಡಿದರು. ವಿದ್ಯಾರ್ಥಿಗಳು ಥೀಮ್ ಪಾರ್ಕ್ ನಲ್ಲಿರುವ ಗ್ರಂಥಾಲಯಕ್ಕೆ ಭೇಟಿ ನೀಡಿ ಪುಸ್ತಕಗಳ ಕುರಿತು ಮಾಹಿತಿ ಪಡೆದರು. ಕಾರಂತರ ಸಾಹಿತ್ಯ ಕೃಷಿಯ ಕುರಿತು ಉಪನ್ಯಾಸಕರ ಜೊತೆ ಸಂವಾದ ನಡೆಸಿದರು. ಈ ಸಂದರ್ಭ ಸಂಸ್ಥೆಯ ಉಪ-ಪ್ರಾಂಶುಪಾಲ […]
ಬಿ. ಬಿ. ಹೆಗ್ಡೆ ಕಾಲೇಜು: ಮಾರ್ಚ್ 14 ರಿಂದ ‘ವಿ-ಗ್ರೋ’ಬ್ಯುಸಿನೆಸ್ ಡೇ
ಕುಂದಾಪುರ (ಮಾರ್ಚ್ 09): ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ವಿ-ಗ್ರೋ ಬ್ಯುಸಿನೆಸ್ ಡೇ ಕಾರ್ಯಕ್ರಮ ಮಾರ್ಚ್ 14, 17 ಮತ್ತು 20 ರಂದು ಮೂರು ಹಂತದಲ್ಲಿ ನಡೆಯಲಿದೆ. ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದ ಜೊತೆಗೆ, ಉದ್ಯಮಶೀಲತಾ ಕೌಶಲ್ಯಗಳನ್ನು ಬೆಳೆಸಿಕೊಂಡು ಜಾಗತಿಕ ಮಾರುಕಟ್ಟೆಯ ಪ್ರಾಯೋಗಿಕ ಜ್ಞಾನವನ್ನು ಪಡೆದರೆ ಭವಿಷ್ಯದಲ್ಲಿ ದೊಡ್ಡ ಉದ್ಯಮಿಗಳಾಗಬಹುದು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮೊದಲನೇ ಹಂತ ವ್ಯವಹಾರ […]
ರಾಷ್ಟ್ರ ಮಟ್ಟದ UCEED ಪರೀಕ್ಷೆ-ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜಿಗೆ 179 ರ್ಯಾoಕ್
ಹೆಮ್ಮಾಡಿ(ಮಾ.10) : ದೇಶದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಯಾದ ಐಐಟಿ ಬಾಂಬೆ ನಡೆಸುವ ಬ್ಯಾಚುಲರ್ ಆಫ್ ಡಿಸೈನ್ (B.Des) ಕೋರ್ಸ್ ಪ್ರವೇಶ ಪಡೆಯಲು ನಡೆಯುವ ಯುಸೀಡ್ (UCEED) 2026 ಪ್ರವೇಶ ಪರೀಕ್ಷೆಯಲ್ಲಿ ಹೆಮ್ಮಾಡಿ ಜನತಾ ಪಿಯು ಕಾಲೇಜಿನ ವಿದ್ಯಾರ್ಥಿ ಸುಜಲ್ ತೋಳಾರ್ ಅಮೋಘ ಸಾಧನೆ ಮಾಡಿದ್ದಾರೆ. ಜನವರಿ 2026 ರಲ್ಲಿ ನಡೆದ ಈ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಸುಜಲ್ ತೋಳಾರ್ ಪ್ರಥಮ ಪ್ರಯತ್ನದಲ್ಲೇ ರಾಷ್ಟ್ರಮಟ್ಟದಲ್ಲಿ ಕೆಟಗರಿ ವಿಭಾಗದಲ್ಲಿ 179ನೇ Rank ಪಡೆದು […]










