ಕುಂದಾಪುರ (ಫೆ. 25): ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ ನಡೆಸುವ ಎಕ್ಸಿಕ್ಯೂಟಿವ್ ಗ್ರೂಪ್ 1 ಪರೀಕ್ಷೆಯಲ್ಲಿ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಪ್ರಥಮ ಹಂತದಲ್ಲಿಯೇ ಉತ್ಕೃಷ್ಟ್ಟ ಸಾಧನೆಗೈದಿದ್ದಾರೆ. ಜಪ್ತಿಯ ಶಶಿಧರ ಉಡುಪ ಹಾಗೂ ಕಾವೇರಿ ಉಡುಪ ಅವರ ಪುತ್ರನಾದ ಶ್ರೀಕಾಂತ್ ಉಡುಪ ಹಾಗೂ ಶಿರೂರಿನ ರಾಜು ಪೂಜಾರಿ ಹಾಗೂ ಸುಶೀಲ ಪೂಜಾರಿ ಅವರ ಪುತ್ರನಾದ ನಿಖಿಲ್ ಆರ್. ಪೂಜಾರಿ […]
Tag: bbhc
ಸಿ.ಎಸ್. ಎಕ್ಸಿಕ್ಯೂಟಿವ್ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಬಿ. ಬಿ. ಹೆಗ್ಡೆ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿನಿ
ಕುಂದಾಪುರ (ಫೆ. 25): ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ ನಡೆಸುವ ಎಕ್ಸಿಕ್ಯೂಟಿವ್ ಪರೀಕ್ಷೆಯಲ್ಲಿ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿನಿ, ಹಾಲಾಡಿಯ ಸಂಜೀವ ಹಾಗೂ ಹೇಮಾವತಿ ದಂಪತಿಗಳ ಪುತ್ರಿಯಾದ ಸುಷ್ಮಾ ಇವರು ಸಿ.ಎಸ್. ಎಕ್ಸಿಕ್ಯೂಟಿವ್ ಗ್ರೂಪ್ 1 ಹಾಗೂ ಗ್ರೂಪ್ 2 ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುತ್ತಿರುವಾಗಲೇ ಪದವಿಯ ಜೊತೆಗೆ ಅSಇಇಖಿ […]
ಕುಂದಾಪುರ: ಮಹಿಳೆಯರಿಗಾಗಿ ಫಿಟ್ಬಿಟ್ಸ್ ಯೋಗ ಮತ್ತು ಫಿಟ್ನೆಸ್ ಡ್ಯಾನ್ಸ್ ಕ್ಲಾಸ್
ಕುಂದಾಪುರ(ಫೆ. 26):ಇಲ್ಲಿನ ಚರ್ಚ್ ರೋಡ್ ಸಮೀಪದ ಮಾತೃಛಾಯಾ ಕಟ್ಟಡದ ಪ್ರಥಮ ಮಹಡಿಯಲ್ಲಿ ಮಹಿಳೆಯರಿಗಾಗಿ ಫಿಟ್ಬಿಟ್ಸ್ ಯೋಗ ಮತ್ತು ಫಿಟ್ನೆಸ್ ಡ್ಯಾನ್ಸ್ ಕ್ಲಾಸ್ ಪ್ರಾರಂಭಗೊಂಡಿದೆ. ದೈಹಿಕ ಹಾಗೂ ಮಾನಸಿಕ ಅರೋಗ್ಯ ವೃದ್ಧಿಸಿಕೊಳ್ಳುವ ಸಲುವಾಗಿ ಪ್ರಾರಂಭಗೊಂಡ ಈ ಫಿಟ್ಬಿಟ್ಸ್ ಯೋಗ ಮತ್ತು ಫಿಟ್ನೆಸ್ ಡ್ಯಾನ್ಸ್ ಕ್ಲಾಸ್ ನ ಪ್ರಯೋಜನವನ್ನು ಮಹಿಳೆಯರು ಪಡೆದುಕೊಳ್ಳುವಂತೆ ತರಬೇತುದಾರರಾದ ಶ್ರೀಮತಿ ರೇವತಿ ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬೆಳಿಗ್ಗೆ ಯ ಬ್ಯಾಚ್ :ಸಮಯ 6 ರಿಂದ 7 ಗಂಟೆ ತನಕಸಂಜೆ […]
ಬಿ. ಬಿ. ಹೆಗ್ಡೆ ಕಾಲೇಜು: ಪ್ರಾಕ್ತನ ವಿದ್ಯಾರ್ಥಿಗಳಿಂದ ವೆಹಿಕಲ್ ಶೆಲ್ಟರ್ ಕೊಡುಗೆ
ಕುಂದಾಪುರ( ಫೆ.24): ಕುಂದಾಪುರ ಎಜುಕೇಷನ್ ಸೊಸೈಟಿಯ ಸುವರ್ಣ ಸಂಭ್ರಮದ ಅಂಗವಾಗಿ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜಿಗೆ ಕೊಡ ಮಾಡಿದ ವೆಹಿಕಲ್ ಶೆಲ್ಟರ್ ಅನ್ನು ಕುಂದಾಪುರದ ನಿವೃತ್ತ ಪ್ರಾಂಶುಪಾಲರಾದ ಡಾ. ಜಿ. ಎಚ್. ಪ್ರಭಾಕರ ಶೆಟ್ಟಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕುಂದಾಪುರ ಎಜುಕೇಷನ್ ಸೊಸೈಟಿಯ ಕಾರ್ಯದರ್ಶಿಗಳಾದ ಸೀತಾರಾಮ ನಕ್ಕತ್ತಾಯ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ, ಉಪ ಪ್ರಾಂಶುಪಾಲರಾದ […]
ಬಿ .ಬಿ ಹೆಗ್ಡೆ ಕಾಲೇಜಿನ ಬ್ರಾಹ್ಮಿ ಗೆ ರಾಜ್ಯ ಯುವಜನೋತ್ಸವದಲ್ಲಿ ಪ್ರಶಸ್ತಿ
ಕುಂದಾಪುರ (ಫೆ.22): ರಾಜ್ಯ ಎನ್ಎಸ್ಎಸ್ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರ ಇವರ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ನಾಗಾವಿ ಗದಗ ಇಲ್ಲಿ ಫೆಬ್ರವರಿ 18 ರಿಂದ 22 ರವರೆಗೆ ನಡೆದ ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಕುಂದಾಪುರದ ಡಾ Iಬಿ ಬಿ .ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್ .ಎಸ್ ಸ್ವಯಂ ಸೇವಕಿ ಬ್ರಾಹ್ಮಿ ಮಂಗಳೂರು ವಿಶ್ವವಿದ್ಯಾನಿಲಯದ ತಂಡವನ್ನು ಪ್ರತಿನಿಧಿಸಿ […]
ವಡ್ಡರ್ಸೆಯಲ್ಲಿ ಬಿ.ಬಿ. ಹೆಗ್ಡೆ ಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ಸಂಪನ್ನ
ಬ್ರಹ್ಮಾವರ, (ಫೆ,12): ಇಲ್ಲಿನ ವಡ್ಡರ್ಸೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ.ಎಂ. ಸುಕುಮಾರ ಶೆಟ್ಟಿ ಅವರು ಸಮಾರೋಪ ನುಡಿಗಳನ್ನಾಡಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವ ಗುಣ, ಸಮಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಇಂತಹ ಕ್ಯಾಂಪುಗಳು ದೊಡ್ಡ ಮಟ್ಟದಲ್ಲಿ ಸಹಕಾರಿಯಾಗುತ್ತದೆ. ಶಿಬಿರದ ಯಶಸ್ಸಿಗೆ ಸಹಕರಿಸಿದ ಊರಿನ […]
ಬಿ. ಬಿ. ಹೆಗ್ಡೆ ಕಾಲೇಜು: ಜೀವನ ಮೌಲ್ಯ–ಉಪನ್ಯಾಸ
ಕುಂದಾಪುರ (ಫೆ.20): ಜೀವನ ಮೌಲ್ಯಗಳು ಕಲಿಯುವುದಲ್ಲ, ಪಾಲಿಸುವಂತದದ್ದು. ಹೀಗಾಗಿ ತಂದೆ, ತಾಯಿ, ಗುರುಗಳು ಜೀವನದ ಅತ್ಯಮೂಲ್ಯ ಮೌಲ್ಯ. ಅವರ ಆದರ್ಶ ಬದುಕು ವಿದ್ಯಾರ್ಥಿಗಳ ಬದುಕಿಗೆ ದಾರಿದೀಪವಾಗಬೇಕು. ಅದರೊಂದಿಗೆ ವ್ಯಕ್ತಿತ್ವಪೂರ್ಣ ಜೀವನವನ್ನು ಪ್ರಾಮಾಣಿಕವಾಗಿ ರೂಢಿಸಿಕೊಂಡಾಗ ವ್ಯಕ್ತಿಯ ಬದುಕಿಗೆ ಬೆಲೆ ಬರುತ್ತದೆ ಎಂದು ಆಳ್ವಾಸ್ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ| ವಿನಾಯಕ್ ಭಟ್ ಹೇಳಿದರು. ಇವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ […]
ಬಿ.ಬಿ. ಹೆಗ್ಡೆ ಕಾಲೇಜು: ದೇಸಿ ಗೋ ಉತ್ಪನ್ನಗಳ ಕುರಿತು ಉಪನ್ಯಾಸ
ಕುಂದಾಪುರ(ಫೆ.20): ಭಾರತೀಯ ಪರಂಪರೆಯಲ್ಲಿ ಗೋವಿಗೆ ಮಹತ್ತರವಾದ ಸ್ಥಾನವಿದೆ. ಭಾರತೀಯ ದೇಸಿಯ ಗೋ ತಳಿಗಳಲ್ಲಿ ಪಂಚಗವ್ಯ ಔಷಧೀಯ ಗುಣಗಳಿದೆ. ವಿದ್ಯಾರ್ಥಿಗಳು ದಿನನಿತ್ಯದ ಬಳಕೆಯಲ್ಲಿ ದೇಸಿ ಗೋ ಉತ್ಪನ್ನಗಳನ್ನು ಹೆಚ್ಚು ಬಳಸಬೇಕಾಗಿರುವುದು ವರ್ತಮಾನದ ತುರ್ತು ಎಂದು ಕಪಿಲೆ ಗೋ ಸಮೃದ್ಧಿ ಟ್ರಸ್ಟ್ ಇದರ ಪ್ರವರ್ತಕರಾದ ಕುಮಾರ್ ಎಸ್. ಕಾಂಚನ್ ಹೇಳಿದರು. ಅವರು ಕಾಲೇಜಿನ ಕನ್ನಡ ವಿಭಾಗ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ಜಂಟಿ ಆಶ್ರಯದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ “ದೇಸಿ ಗೋ […]
ವಡ್ಡರ್ಸೆ ಎನ್.ಎಸ್.ಎಸ್. ಶಿಬಿರ: “ಪರಿಸರ ನಮಗೊಂದಿಷ್ಟುಉಳಿಸಿ” – ಬೀದಿನಾಟಕ ಪ್ರದರ್ಶನ
ಬ್ರಹ್ಮಾವರ(ಫೆ, 10): ಇಲ್ಲಿನ ವಡ್ಡರ್ಸೆ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಕುಂದಾಪುರದ ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರದಲ್ಲಿ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ “ಪರಿಸರ ನಮಗೊಂದಿಷ್ಟು ಉಳಿಸಿ” ಎಂಬ ಬೀದಿ ನಾಟಕವನ್ನು ಶಿಬಿರಾರ್ಥಿಗಳು ಪ್ರದರ್ಶಿಸಿದರು. ಎನ್.ಎಸ್.ಎಸ್. ಸ್ವಯಂಸೇವಕಿ ಪವಿತ್ರಾ ಪೈ ನಿರ್ದೇಶಿಸಿ, ಪ್ರಾಧ್ಯಾಪಕ ಪ್ರವೀಣ್ ಮೊಗವೀರ್ ಗಂಗೊಳ್ಳಿ ಸಂಯೋಜಿಸಿದರು.ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ […]
ಬನ್ನಾಡಿ ನೈರಿಬೆಟ್ಟು ದಿ| ಕಿಶೋರ್ ಹೆಗ್ಡೆ ಸಂಸ್ಮರಣೆ- “ಕಿಶೋರ ನೆನಪು”
ಬ್ರಹ್ಮಾವರ,(ಫೆ. 9): ವಡ್ಡರ್ಸೆಯ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಕುಂದಾಪುರದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನರಾಷ್ಟ್ರೀಯ ಸೇವಾ ಯೋಜನಾ ಘಟಕಗಳ ವಾರ್ಷಿಕ ವಿಶೇಷ ಶಿಬಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಡೆದ ಯಕ್ಷಗಾನ ಪ್ರದರ್ಶನದ ಪೂರ್ವದಲ್ಲಿ ಬನ್ನಾಡಿ ನೈರಿಬೆಟ್ಟು ದಿ| ಕಿಶೋರ್ ಹೆಗ್ಡೆ ಸಂಸ್ಮರಣೆ ಕಾರ್ಯಕ್ರಮ ‘ಕಿಶೋರ ನೆನಪು’ ನಡೆಯಿತು. ದಿ| ಕಿಶೋರ್ ಹೆಗ್ಡೆ ಅವರು ಶ್ರೀ ಸಿದ್ದೇಶ್ವರ ಯಕ್ಷರಂಗ, ಬನ್ನಾಡಿ ಇದರ ಪ್ರಧಾನ ಕಲಾವಿದರಾಗಿದ್ದರು. ಯಕ್ಷಗಾನದ […]