ಕರೋನಾ ಲಾಕ್ಡೌನ್ ಕಾರಣದಿಂದಾಗಿ ಬಾಕಿಯಾದ ಮಂಗಳೂರು ವಿ. ವಿ. 1, 3, 5 ಸೆಮಿಸ್ಟರ್ ನ ಪರೀಕ್ಷೆಗಳು ಅಗಸ್ಟ್ 2 ರಂದು ಪ್ರಾರಂಭಗೊಂಡಿದ್ದು, ಈಗ ಮತ್ತೆ ಕರೋನಾ ಮೂರನೇ ಅಲೆಯ ಆತಂಕದಿಂದಾಗಿ ಮುಂದೂಡಲಾಗಿದೆ.
Tag: corona
ಇ ಸಿ ಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ : ಕೋವಿಡ್ ಲಸಿಕಾ ಅಭಿಯಾನ
ಮಧುವನ (ಜು, 02) : ಇಲ್ಲಿನ ಇ ಸಿ ಆರ್ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ನಲ್ಲಿ ಕಾಲೇಜು ಪ್ರಾರಂಭಕ್ಕೆ ಮುಂಚಿತವಾಗಿ ವಿದ್ಯಾರ್ಥಿಗಳಿಗೆ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಕೋವಿಡ್ ಲಸಿಕಾಕರಣ ಹಮ್ಮಿಕೊಳ್ಳಲಾಗಿತ್ತು. ಜೂನ್ 30 ಬುಧವಾರದಂದು 100 ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಲಸಿಕೆ ನೀಡಲಾಗಿದೆ ಎಂದು ಪ್ರಾಂಶುಪಾಲರಾದ ಶ್ರೀ ಆಕಾಶ್ ಸಾವಳ ಸಂಗ್ ತಿಳಿಸಿದರು. ಲಸಿಕೆ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ ಸೈಬರಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯವರಿಗೆ ಪ್ರಾಂಶುಪಾಲರು […]
ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು : ಕೋವಿಡ್ ಲಸಿಕಾ ಅಭಿಯಾನ
ಕುಂದಾಪುರ (ಜೂ, 28): ರಾಜ್ಯದಲ್ಲಿ ಪದವಿ ಕಾಲೇಜುಗಳನ್ನು ಶೀಘ್ರದಲ್ಲೇ ಪುನರಾರಂಭಿಸಲು ಸರ್ಕಾರ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ವಿವಿಧ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳಿಗೆ ಆರೋಗ್ಯ ಇಲಾಖೆಯ ವತಿಯಿಂದ ಉಚಿತ ಕರೋನಾ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಕುಂದಾಪುರದ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೂನ್ 28 ರಂದು ಕರೋನಾ ಲಸಿಕಾ ಅಭಿಯಾನ ಪ್ರಾರಂಭವಾಗಿದ್ದು ಮೊದಲ ದಿನದಂದು 200 ಡೋಸ್ ಲಸಿಕೆಯನ್ನು ನೀಡಲಾಗಿದೆ.ಕುಂದಾಪುರ ತಾಲೂಕು ಆರೋಗ್ಯ […]
ಕಾಲೇಜು ಉಪನ್ಯಾಸಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡಿ ಕಾಲೇಜುಗಳು ಪುನರಾರಂಭಿಸಲು ಸರ್ಕಾರದ ಚಿಂತನೆ
ಬೆಂಗಳೂರು (ಜೂ, 22): ರಾಜ್ಯದಲ್ಲಿನ ಕಾಲೇಜು ಉಪನ್ಯಾಸಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ನೀಡಿ ಕಾಲೇಜುಗಳನ್ನು ಪುನರಾರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಜೂನ್ 22 ರ ಮಂಗಳವಾರ ದಂದು ಕರೋನಾ 3 ನೇ ಅಲೆಯ ಕುರಿತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಡಾ|ದೇವಿ ಶೆಟ್ಟಿ ನೇತೃತ್ವದಲ್ಲಿ ನಡೆಸಲಾದ ಉನ್ನತಮಟ್ಟದ ಸಮಿತಿಯ ಸದಸ್ಯರ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ. ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕ ವೃಂದದವರಿಗೆ ಶೀಘ್ರದಲ್ಲಿಯೇ ಕೋವಿಡ್ ಲಸಿಕೆ ನೀಡಲು ಕ್ರಮಗಳನ್ನು […]
ನೀವೊಬ್ಬರೇ ಅಲ್ಲಾ ಲಾಕ್ಡೌನ್ ಓಪನ್ ಆಗೋದಕ್ಕೆ ಕಾಯ್ತಾ ಇರೋದು…. ಕರೋನಾ ವೈರಸ್ ಕೂಡ ಕಾಯ್ತಾ ಇದೆ……. ಜಾಗ್ರತರಾಗಿರಿ!
ರಾಜ್ಯದಲ್ಲಿ ಜೂನ್, 21 ರ ಸೋಮವಾರದಿಂದ ಅನ್ ಲಾಕ್ ಪ್ರಕ್ರಿಯೆ ಪ್ರಾರಂಭವಾಗಿದೆ. 16 ಜಿಲ್ಲೆಗಳಲ್ಲಿ ಕೆಲವೊಂದು ನಿರ್ಬಂಧಗಳನ್ನು ಒಳಗೊಂಡಂತೆ ಸಡಿಲಿಕೆ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಉಳಿದ 13 ಜಿಲ್ಲೆಗಳಲ್ಲಿ ಸೋಂಕು ಪೂರ್ಣಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ 2ರವರೆಗೆ ಮಾತ್ರ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ಆದರೆ ಭಾರತದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆ ಏಮ್ಸ್ ಮುಖ್ಯಸ್ಥ ಡಾ.ರಣದೀಪ್ ಗುಲೇರಿಯಾರವರು ಬೆಚ್ಚಿಬೀಳಿಸುವ ಸಂಗತಿಯೊಂದನ್ನು ಹೊರಹಾಕಿದ್ದಾರೆ. ಭಾರತದಲ್ಲಿ ಮೂರನೇ ಕೋವಿಡ್ ಅಲೆ […]
ಕಾಣದ ಜೀವಿಯ ಕಣ್ಣಾಮುಚ್ಚಾಲೆ
ಕಾಣದ ಜೀವಿಯ ಕಣ್ಣಾಮುಚ್ಚಾಲೆ ಭಯವನು ಹೂಡಿ ಆವರಿಸಿಹುದು ಕತ್ತಲೆಅಪರಿಚಿತರ ಅಪರಾಧಕೆ ಬಲಿಯಾಗಿದೆ ಇಡೀ ವಿಶ್ವವೇ!ನಾಳೆಗೆಂದೂ ಕೂಡಿಟ್ಟ ಕನಸೆಲ್ಲಾ ಕುಸಿದು ಮಣ್ಣಾಯಿತೇ?ಬಿಡದ ಅನಿವಾರ್ಯತೆ ಹುಡುಕುತಿದೆ ಪರಿಹಾರಸ್ವಾಭಿಮಾನ ನಲುಗಿ ಕೈಯೊಡ್ಡುತಿರುವಾಗ, ಆಗೋ ತಿರಸ್ಕಾರಆ ಅಸಹಾಯಕತೆಯಲ್ಲೂ ಸೋತು ಬಡತನ ಮತ್ತಷ್ಟು ಅನುಭವಿಸುತಿದೆ ಬಹಿಷ್ಕಾರದಾರಿ ಕಂಗೆಟ್ಟು ದಾರಿದೀಪವನು ಹುಡುಕಾಡುತಿದೆ.ಬಡವಾಯ್ತು ಬದುಕುಆಶಾವಾದವಷ್ಟೇ ಇನ್ನುಳಿದ ಬೆಳಕು-ಕೊರೊನಾ ಕಥೆ. -ಅರ್ಚನಾ .ಆರ್. ಕುಂದಾಪುರ
ಕರೋನಾದಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಘೋಷಣೆ
ಬೆಂಗಳೂರು (ಜೂ, 14): ಕೋವಿಡ್ 19 ಗೆ ತುತ್ತಾಗಿ ಮೃತಪಟ್ಟ ಬಿಪಿಎಲ್ ಕಾರ್ಡ್ ಹೊಂದಿರುವ ವ್ಯಕ್ತಿಯ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ಧನವನ್ನು ನೀಡುವುದಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಘೋಷಣೆ ಮಾಡಿದರು.ಇದು ಕೋವಿಡ್-19 ಕ್ಕೆ ತುತ್ತಾಗಿ ಮೃತಪಟ್ಟಿರುವ ಕುಟುಂಬದ ಓರ್ವ ಸದಸ್ಯನಿಗೆ ಮಾತ್ರ ಅನ್ವಯಿಸುತ್ತದೆ.
ಚಿತ್ರದುರ್ಗ ರೆಡ್ ಕ್ರಾಸ್ : ಕೋವಿಡ್ ಲಸಿಕಾ ಅಭಿಯಾನ
ಚಿತ್ರದುರ್ಗ (ಜೂ, 11) : ಕರೋನ ಮಹಾಮಾರಿ ಎರಡನೇ ಅಲೆ ತಡೆಗಟ್ಟುವ ಸಲುವಾಗಿ ಚಿತ್ರದುರ್ಗ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಜಿಲ್ಲೆ ಯಲ್ಲಿ ಕೋವಿಡ್ ಲಸಿಕಾ ಅಭಿಯಾನಕ್ಕೆ ಹೆಚ್ಚು ಒತ್ತು ನೀಡಲಾಗಿತ್ತಿದ್ದು, ನಗರದಲ್ಲಿ ವ್ಯಾಕ್ಸಿನ್ ಸಹಾಯವಾಣಿ Vaccine Helpline 24*7 ನ್ನು ನಿರ್ದೇಶಕರಾದ ಶ್ರೀ ಯು ಸಿ ಗಿರೀಶ್ ನೇತೃತ್ವದಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಸಾರ್ವಜನಿಕರಿಗೆ ಕೋವಿಡ್ -19 ಲಸಿಕಾ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸುತ್ತಾ, ಲಸಿಕಾ […]
ಕರೋನಾ ಕಂಟಕ – ಬದುಕಿನ ತಲ್ಲಣ
ಕಣ್ಣಿಗೆ ಕಾಣದ ಒಂದು ಸಣ್ಣ ವೈರಾಣು ಇಡೀ ಪ್ರಪಂಚದ ಮೂಲೆಮೂಲೆಗಳಲ್ಲಿ ಸಂಚರಿಸಿ ಜನರನ್ನು ಭಯದ ವಾತಾವರಣದಲ್ಲಿ ಬದುಕುವಂತೆ ಮಾಡಿದೆ. ಕೆಲವೆ ಕೆಲವೇ ದಿನಗಳಲ್ಲಿ ಕರೋನ ಎನ್ನುವ ಹೆಮ್ಮಾರಿ ಹಲವಾರು ಸಾವು ನೋವುಗಳಿಗೆ ಕಾರಣವಾಯಿತು. ಸದ್ಯದ ಪರಿಸ್ಥಿತಿಯಲ್ಲಿ ತನ್ನ ಕಬಂಧಬಾಹುವನ್ನು ಭಾರತದಾದ್ಯಂತ ಅವರಿಸುವುದರ ಜೊತೆಗೆ ರಾಜ್ಯದ ಮೂಲೆ ಮೂಲೆಗೆ ಸಂಚಾರ ಮುಂದುವರಿಸಿ ಹಲವಾರು ಜನರ ಜೀವನದ ದಾರಿಯನ್ನು ಮುಚ್ಚಿದೆ. ಈ ಕರೋನ ಎನ್ನುವ ರೋಗದಿಂದಾಗಿ ನಮ್ಮ ಬದುಕು ಕಬ್ಬಿಣದ ಕಡಲೆಯಂತೆಯಾಗಿದೆ. ದುಡಿದು […]
ಕೊರೋನಾದಿಂದ ಗುಣಮುಖರಾದ ಕಟ್ ಬೇಲ್ತೂರಿನ ಒಂದೇ ಕುಟುಂಬದ 9 ಮಂದಿ ಸದಸ್ಯರು
ಹೆಮ್ಮಾಡಿ (ಮೇ, 23): ಹೌದು, ಕರೋನಾ ಆತಂಕದಿಂದ ಭಯಭೀತರಾಗುವ ಜನರ ನಡುವೆ ಇದೊಂದು ಪಾಸಿಟಿವ್ ಸ್ಟೋರಿ. ಕುಂದಾಪುರ ತಾಲೂಕಿನ ಕಟ್ ಬೇಲ್ತೂರು ಎಂಬ ಗ್ರಾಮದ ಶಂಕರ್ ನಾಯ್ಕ್ ಎನ್ನುವವರ ಕುಟುಂಬದ 9 ಮಂದಿ ಸದಸ್ಯರು ಕೊರೋನ ಪಾಸಿಟಿವ್ ಗೆ ತುತ್ತಾಗಿದ್ದರು. ಒಂದು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಈ ಕುಟುಂಬ ಎಲ್ಲಾ ಸದಸ್ಯರಿಗೂ ಕೊರೋನಾ ಅಂಟಿಕೊಂಡಿತ್ತು. ಆದರೆ ಈ ಕುಟುಂಬದ ಸದಸ್ಯರು ಧ್ರತಿಗೆಡದೆ ಧೈರ್ಯದಿಂದ ಕರೋನಾ ಗೆದ್ದು ಗುಣಮುಖರಾಗಿದ್ದಾರೆ. ಆತ್ಮಸ್ಥೈರ್ಯದ ಜೊತೆ […]