ಕಾರ್ಕಳ(ಎ,14): ಸಂವಿಧಾನ ಶಿಲ್ಪಿ ಡಾ| ಬಿ ಆರ್ ಅಂಬೇಡ್ಕರ್ ರವರ 132 ನೇ ಜಯಂತಿಯನ್ನು ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಆಚರಿಸಲಾಯಿತು. ಡಾ| ಬಿ ಆರ್ ಅಂಬೇಡ್ಕರ್ ರವರು ವಿದೇಶದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್ (ಪಿಹೆಚ್ಡಿ) ಪದವಿ ಪಡೆದ ಮೊದಲ ಭಾರತೀಯ. ಸುಮಾರು 64 ವಿಷಯಗಳಲ್ಲಿ ಸ್ನಾತಕೊತ್ತರ ಪದವಿಗಳನ್ನು ಹಾಗೂ ಒಂಬತ್ತು ಭಾಷೆಗಳನ್ನು ಬಲ್ಲವರಾಗಿದ್ದರು. ವಿಶ್ವದರ್ಜೆಯ ವಕೀಲರು, ಸಾಮಾಜ ಸುಧಾರಕರೂ ಆಗಿದ್ದವರು. ಭಾರತದ ದಲಿತ ಚಳವಳಿಗಳ ಹಿಂದಿನ ಶಕ್ತಿ ಎಂಬ […]
Tag: creative pu karkala
ಸಾಹಿತ್ಯಕ್ಕೆ ಭಾವನೆಗಳನ್ನು ಉದ್ದೀಪಿಸುವ ಶಕ್ತಿಯಿದೆ: ಶ್ರೀ ಮುನಿರಾಜ ರೆಂಜಾಳ
ಕಾರ್ಕಳ( ಮಾ.17): ಸಾಹಿತ್ಯ ಸರ್ವವ್ಯಾಪಿಯಾದುದು. ಸಾಹಿತ್ಯದ ರಸಭಾವಗಳನ್ನು ಅರಿತರೆ ಬದುಕಿನ ದಾರಿ ದೀಪವಾಗಬಲ್ಲದು. ಜೀವನದಲ್ಲಿ ನಾವು ಸಾಹಿತ್ಯ ಮತ್ತು ನೈತಿಕ ಮೌಲ್ಯಗಳಿಗೆ ತೆರೆದುಕೊಂಡಾಗ ಹೊಸ ದೃಷ್ಟಿ ಗೋಚರಿಸುತ್ತದೆ. ಮನಸ್ಸಿನ ತೃಪ್ತಿಗಾಗಿ ನಾವೆಲ್ಲ ಪುಸ್ತಕ ಪ್ರೀತಿಯನ್ನು, ಓದುವಿಕೆಯನ್ನು ಅಳವಡಿಸಿಕೊಳ್ಳಬೇಕಾಗಿದೆ. ಎಂದು ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳರು ನುಡಿದರು. ಅವರು ಹಿರ್ಗಾನದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಾಹಿತ್ಯ ಸಾಂಗತ್ಯ ಸರಣಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. […]
ವಿದ್ಯಾರ್ಥಿಗಳು ಸಾಂಸ್ಕೃತಿಕ ಕ್ಷೇತ್ರ ಮತ್ತು ಸಾಹಿತ್ಯದ ಒಲವುಳ್ಳವರಾಗಬೇಕು: ಶ್ರೀ ವಿ.ಸುನೀಲ್ ಕುಮಾರ್
ಕಾರ್ಕಳ ( ಫೆ.11): ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಮಾತ್ರ ಸೀಮಿತರಾಗದೇ ಶ್ರೀಮಂತವಾಗಿರುವ ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೂ ತಮನ್ನು ತೆರೆದುಕೊಳ್ಳಬೇಕು ಎಂದು ಸಚಿವ ಶ್ರೀ ವಿ.ಸುನೀಲ್ ಕುಮಾರ್ ಹೇಳಿದರು. ಅವರು ಕಾರ್ಕಳದ ಉಮಿಕ್ಕಳ ಪರಶುರಾಮ ಥೀಮ್ ಪಾರ್ಕ್ ನಲ್ಲಿ ನಡೆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ ನಡೆದ “ಪರಶುರಾಮ”ನಾಟಕ ಪ್ರದರ್ಶನ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಎಸ್.ವಿ.ಟಿ. ವಿದ್ಯಾಸಂಸ್ಥೆಗಳ […]
ಕ್ರಿಯೇಟಿವ್ ಪಿ ಯು ಕಾಲೇಜು ಕಾರ್ಕಳ :ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ದೀಕ್ಷಾ ಆಚಾರ್ಯ ಹಾಗೂ ಶ್ರಾವ್ಯಾ ಸಿ.ಎಸ್ ಉತ್ತೀರ್ಣ
ಕಾರ್ಕಳ (ಫೆ.06): ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ(ICAI) 2022 ರ ಡಿಸೆಂಬರ್ ನಲ್ಲಿ ನಡೆಸಿದ ಸಿ ಎ ಫೌಂಡೇಶನ್ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪಿ.ಯು ಕಾಲೇಜಿನ ಹಳೆವಿದ್ಯಾರ್ಥಿಗಳಾದ ದೀಕ್ಷಾ ಆಚಾರ್ಯ ಮತ್ತು ಶ್ರಾವ್ಯಾ ಸಿ.ಎಸ್ ಉತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾರೆ. ಕ್ರಿಯೇಟಿವ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಥಮ ಪಿ.ಯು.ಸಿ ಯಿಂದಲೇ ಸಿ.ಎ ಮತ್ತು ಸಿ.ಎಸ್.ಇ.ಇ.ಟಿ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಈ ಹಿಂದೆ […]
ಕ್ರಿಯೇಟಿವ್ ಪಿ ಯು ಕಾಲೇಜಿನ ನಿಧಿ .ಯು .ಆಚಾರ್ ಗೆ ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ
ಕಾರ್ಕಳ ( ಜ,06): ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಡಿ 26 ರಿಂದ 28 ವರೆಗೆ ಇಂಡಿಯಾ ಸ್ಕೂಲ್ ಗೇಮ್ಸ್ ಸ್ಪೋರ್ಟ್ಸ್ ಫೌಂಡೇಶನ್ ನ (S. G. S. D. F India) ವತಿಯಿಂದ ನಡೆಸಲಾದ ಮೂರನೇ ಅಂತರಾಷ್ಟ್ರೀಯ 19 ವರ್ಷದೊಳಗಿನ ಯೋಗ ಚಾಂಪಿಯನ್ ಶಿಪ್ ನಲ್ಲಿ ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಪೂರ್ವ ವಿದ್ಯಾರ್ಥಿನಿ ನಿಧಿ ಯು ಆಚಾರ್ ಭಾರತವನ್ನು ಪ್ರತಿನಿಧಿಸಿ ಬಂಗಾರದ ಪದಕವನ್ನು ಗಳಿಸಿರುತ್ತಾರೆ. ನಿಧಿ ಯು ಆಚಾರ್ […]
ಕಾರ್ಕಳ ಕ್ರಿಯೇಟಿವ್ ಕಾಲೇಜಿನಲ್ಲಿ ಅಪರಾಧ ತಡೆ ಮಾಸಾಚರಣೆ ಜಾಗ್ರತಿ ಕಾರ್ಯಕ್ರಮ
ಕಾರ್ಕಳ( ಜ,02): ಯುವಕರು ಮಾದಕ ವ್ಯಸನಗಳಿಗೆ ದಾಸರಾಗಬಾರದು,ಸಮಾಜದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಬೇಕು ಮತ್ತು ವ್ಯಸನ ಮುಕ್ತ ಜನಾಂಗ ನಿರ್ಮಾಣದಲ್ಲಿ ವಿದ್ಯಾರ್ಥಿಗಳು ಜಾಗ್ರತರಾಗಿರಬೇಕು. ಗಾಂಜಾ, ಅಫೀಮಿನಂತಹ ಮಾದಕ ದ್ರವ್ಯಗಳು ಭವಿಷ್ಯವನ್ನೇ ನಾಶಪಡಿಸುತ್ತದೆ .ಹಾಗೂ ಶಾಲಾ ಕಾಲೇಜಿನ ವಿದ್ಯಾರ್ಥಿಗಳೇ ಈ ದಂಧೆಯಲ್ಲಿರುವವರ ಗುರಿಯಾಗಿದ್ದಾರೆ. ಸುಲಭವಾಗಿ ಹಣ ಗಳಿಸುವ ಕಾರ್ಯಕ್ಕೆ ಮನಸ್ಸು ಮಾಡಿ ಸಿಕ್ಕಿ ಬಿದ್ದರೆ ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ. ಯುವಕರು ಮಾದಕ ವ್ಯಸನದಂತಹ ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಕಾರ್ಕಳ ಎಂದು ಕಾರ್ಕಳ ನಗರ […]
ಕ್ರಿಯೇಟಿವ್ ಪಿ.ಯು. ಕಾಲೇಜು ವಾರ್ಷಿಕೋತ್ಸವ ಆವಿರ್ಭವ್ – 2022
ಕಾರ್ಕಳ (ಡಿ. 26); ಕ್ರಿಯೇಟಿವ್ನಂತಹ ವಿದ್ಯಾಸಂಸ್ಥೆಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಕಾಶ ಕಲ್ಪಿಸುವುದರ ಜೊತೆಗೆ ಪ್ರತಿಭೆಗಳಿಗೆ ಪೂರಕವಾದ ಕಲಿಕಾ ವಾತಾವರಣವನ್ನು ಕಲ್ಪಿಸುವುದು ನಿಜಕ್ಕೂ ಶ್ಲಾಘನೀಯ ಎಂದು ರಾಜ್ಯ ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾದ ವಿ. ಸುನೀಲ್ ಕುಮಾರ್ ಹೇಳಿದರು. ಅವರು ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ನಡೆದ ಕ್ರಿಯೇಟಿವ್ ಆವಿರ್ಭವ್ -2022 ರ ವಾರ್ಷಿಕೋತ್ಸವದಲ್ಲಿ ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳ ಉಚಿತ ಶಿಕ್ಷಣ ವ್ಯವಸ್ಥೆ ʼಕ್ರಿಯೇಟಿವ್ ಹೊಂಗಿರಣʼ […]
ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಪಾಲಕ-ಶಿಕ್ಷಕರ ಸಭೆ
ಕಾರ್ಕಳ(ಡಿ,6): ಇಲ್ಲಿನ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ 2022-23 ನೇ ಸಾಲಿನ ಪಾಲಕರ-ಶಿಕ್ಷಕರ ಸಭೆ ಡಿಸೆಂಬರ್ 04 ರಂದು ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಸ್ಥಾಪಕರಾದ ಅಶ್ವತ್ ಎಸ್ ಎಲ್, ಕ್ರಿಯೇಟಿವ್ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮತ್ತು ವಿವಿಧ ಚಟುವಟಿಕೆಗಳಿಗೆ ಪ್ರಾಧಾನ್ಯತೆ ನೀಡಿ ತರಬೇತಿ ನೀಡಲಾಗುತ್ತಿದೆ. ಆಯಾ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯನ್ನು ಅತ್ಯಂತ ಪಾರದರ್ಶಕವಾಗಿ ಪರಿಶೀಲಿಸಿ, ಲೋಪದೋಷಗಳನ್ನು ಪರಿಹರಿಸಲಾಗುತ್ತಿದೆ. ಮುಂಬರುವ NEET,CET, KVPY, NATA, NDA, IIT ಪರೀಕ್ಷೆಗಳಿಗೆ ನುರಿತ ಅನುಭವಿ ಪ್ರಾಧ್ಯಾಪಕರು […]
ಹಿರಿಯರ ಕನ್ನಡ ಸೇವೆಯು ನಮಗೆ ಮಾದರಿಯಾಗಲಿ – ಡಾ. ಹಿರೇಮಗಳೂರು ಕಣ್ಣನ್
ಕಾರ್ಕಳ ( ನ,30): ಕನ್ನಡದ ಕಂಪು ವಿಶ್ವದೆಲ್ಲೆಡೆ ಪಸರಿಸಲು ನಾವು ಕಟಿಬದ್ಧರಾಗಬೇಕು. ಕನ್ನಡದ ನೆಲ, ಜಲ, ಭಾಷೆಗಳು ಉತ್ತುಂಗಕ್ಕೇರಲು ಇಂದಿನ ಯುವ ಪೀಳಿಗೆ ಪ್ರಯತ್ನಿಸಬೇಕು. ನಮ್ಮ ಪೂರ್ವಿಕರು ನಮಗೆ ದೊರಕಿಸಿಕೊಟ್ಟಿರುವ ಈ ಭವ್ಯ ಭಾಷೆ, ಕಲೆ, ಸಂಪತ್ತನ್ನು ವೃದ್ಧಿಸಬೇಕು. ತಂದೆ-ತಾಯಿಗಳನ್ನು ಪ್ರೀತಿಯಿಂದ ಸಲಹಬೇಕು. ಹಾಗೆಯೇ ನಮ್ಮ ಮಾತೃಭೂಮಿ ತಾಯಿ ಭಾಷೆಯನ್ನು ಬೆಳೆಸಬೇಕು ಎಂದು ಕನ್ನಡದ ಪೂಜಾರಿ ಡಾ. ಹಿರೇಮಗಳೂರು ಕಣ್ಣನ್ ಕರೆ ನೀಡಿದರು. ಅವರು ನವೆಂಬರ್ 29 ರಂದು ಕಾರ್ಕಳದ […]
ಕ್ರಿಯೇಟಿವ್ ಪಿಯು ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ
ಕಾರ್ಕಳ( ನ,26): ಇಲ್ಲಿನ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ನವೆಂಬರ್ 26 ರಂದು ಸಂವಿಧಾನ ದಿನಾಚರಣೆ ನಡೆಯಿತು. ಭಾರತದ ಸಾರ್ವಭೌಮತೆಯ ರಕ್ಷಣೆ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸಲು ಸಂವಿಧಾನದ ರಚನೆಯನ್ನು ಮಾಡಲಾಯಿತು. ದೇಶದ ಪ್ರಜೆಗಳು ದೇಶದ ಕಾನೂನನ್ನು ಗೌರವಿಸಿ ಮತ್ತು ಸಂವಿಧಾನದ ಆಶಯದಂತೆ ಬದುಕನ್ನು ನಡೆಸಬೇಕು ಎಂದು ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್ ವಿದ್ಯಾರ್ಥಿಗಳಿಗೆ ತಿಳಿಸಿದರು. ಸಂವಿಧಾನವನ್ನು ರಚನೆ ಮಾಡಬೇಕಾದರೆ ಅನೇಕ ದೇಶಗಳಲ್ಲಿರುವ ಕಾಯ್ದೆ, ಕಾನೂನುಗಳನ್ನು ಅಳವಾಗಿ ಅಧ್ಯಯನ ನಡೆಸಿ […]