ಕುಂದಾಪುರ(ಜ.7):ಕುಂದಾಪುರ ಎಜ್ಯುಕೇಶನ್ ಸೊಸೈಟಿ(ರಿ.) ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಆಂಗ್ಲ ಮಾಧ್ಯಮ ಶಾಲೆಗಳ ಪ್ರಾಥಮಿಕ ವಿಭಾಗದ 4ನೇ ತರಗತಿಯ ವಿದ್ಯಾರ್ಥಿ ಆರ್ಯನ್ ಕೆ ಪೂಜಾರಿ, ನಿಹೊನ್ಸಿಕಿ ಕರಾಟೆ ಆಂಡ್ ಸ್ಪೋರ್ಟ್ಸ ಫೆಡರೇಶನ್ ನ ವತಿಯಿಂದ ಕರಾಟೆಯಲ್ಲಿ ಕೊಡಮಾಡುವ 2024 ನೇ ಸಾಲಿನ ದಿ ಬೆಸ್ಟ್ ಸ್ಟೂಡೆಂಟ್ʼ ಪ್ರಶಸ್ತಿಗೆ ಪಾತ್ರನಾಗಿದ್ದಾನೆ. ವಿಜೇತ ವಿದ್ಯಾರ್ಥಿಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಹಾಗೂ ಎಲ್ಲಾ ವಿಭಾಗಗಳ ಮುಖ್ಯಸ್ಥರು ಅಭಿನಂದಿಸಿದರು.
Tag: hmm vkr
ಎಚ್. ಎಮ್. ಎಮ್ ಶಾಲೆಯ ಅವನಿ ಮತ್ತು ಶ್ರೇಯಸ್ ಗೆ ಕಾರಂತ ಬಾಲ ಪುರಸ್ಕಾರ
ಕುಂದಾಪುರ(ಜ.8): ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ 4ನೇ ತರಗತಿಯ ವಿದ್ಯಾರ್ಥಿ ಶ್ರೇಯಸ್. ಎಸ್. ರಾವ್ ಮತ್ತು 7ನೇ ತರಗತಿಯ ವಿದ್ಯಾರ್ಥಿನಿ ಅವನಿ ಎ ಶೆಟ್ಟಿಗಾರ್ ತಮ್ಮ ವಿಶಿಷ್ಟ ಸಾಧನೆಗಾಗಿ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ (ರಿ.) ಕೋಟ ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ ಮತ್ತು ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ಕೊಡಮಾಡುವ ʼಕಾರಂತ ಬಾಲ […]
ಎಚ್. ಎಮ್. ಎಮ್ ಶಾಲೆಯ ಶ್ರೀನಿತ್ಗೆ ಚೆಸ್ನಲ್ಲಿ ಬಹುಮಾನ
ಕುಂದಾಪುರ(ಜ.10): ಕುಂದಾಪುರ ಎಜ್ಯುಕೇಶನ್ ಸೊಸೈಟಿ (ರಿ.) ಪ್ರವರ್ತಿತ ಎಚ್. ಎಮ್. ಎಮ್ ಮತ್ತು ವಿ.ಕೆ.ಆರ್ ಶಾಲೆಗಳ ಪ್ರಾಥಮಿಕ ವಿಭಾಗದ 2ನೇ ತರಗತಿಯ ವಿದ್ಯಾರ್ಥಿ ಶ್ರೀನಿತ್ ಶೇಟ್ ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಕಾಪು, ಉಡುಪಿಯ ವತಿಯಿಂದ ಕಾಪುವಿನಲ್ಲಿ ನಡೆದ 25ನೇ ಶ್ರೀ ನಾರಾಯಣ ಗುರು ಟ್ರೋಫಿ- ಓಪನ್ ಆಂಡ್ ಯೇಜ್ ಕ್ಯಾಟಗರಿ ರ್ಯಾಪಿಡ್ ಚೆಸ್ ಟೂರ್ನಮೆಂಟ್-2025, 9ರ ವಯೋಮಾನದ ಚೆಸ್ ಸ್ಪರ್ಧೆಯಲ್ಲಿ ಭಾಗವಹಿಸಿ 6 ರೌಂಡ್ಸ್ ಗಳಲ್ಲಿ […]
ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳಲ್ಲಿ ರುಗ್ಮಯಾನ: ಸುವರ್ಣ ರಥದತ್ತ ಸಂಭ್ರಮದ ಪಥ
ಕುಂದಾಪುರ (ಜ.03): ಇಂದಿನ ಕಾಲಘಟ್ಟದ ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆಗೆ ಮಾತ್ರವೇ ಸೀಮಿತವಾಗಿರದೇ ಪಠ್ಯೇತರ ಚಟುವಟಿಕೆಗಳತ್ತ ಗಮನ ಹರಿಸಬೇಕು. ಅಂತಹ ಪ್ರಯತ್ನವನ್ನು ಈ ಸಂಸ್ಥೆ ಉತ್ತಮ ಶಿಕ್ಷಕರ ತಂಡದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಂಸ್ಥೆಯ ಹಳೆ ವಿದ್ಯಾರ್ಥಿ ಚಿಕಾಗೊ ಯು.ಎಸ್.ಎ ನ, ಜೆ.ಪಿ.ಮೊರ್ಗಾನ್ ಚೇಸ್ ಅಂಡ್ ಕಂಪೆನಿ ಇದರ ಉಪಾಧ್ಯಕ್ಷರಾದ ಭಾಸ್ಕರ್ ಎಚ್. ಮಾರುತಿ ಹೇಳಿದರು. ಅವರು ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ […]
ಎಚ್. ಎಮ್. ಎಮ್. ವಿ.ಕೆ.ಆರ್ ನ ಕಂಚಿನ ಹುಡುಗ- ಅಥರ್ವಖಾರ್ವಿ
ಕುಂದಾಪುರ (ದಿ.30): ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ವಿಭಾಗದ 6ನೇ ತರಗತಿಯ ವಿಧ್ಯಾರ್ಥಿ ಅಥರ್ವ ಖಾರ್ವಿ ನವದೆಹಲಿಯಲ್ಲಿ ಜರುಗಿದ ಆಲ್ ಇಂಡಿಯಾ ಸಬ್ ಜೂನಿಯರ್ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ, ಕಂಚಿನ ಪದಕವನ್ನು ಗಳಿಸಿರುತ್ತಾನೆ. ಕಂಚಿನ ಪದಕ ವಿಜೇತ ಕರಾಟೆ ಪಟುವನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಅಭಿನಂದಿಸಿದರು.
ಚೆಸ್ನಲ್ಲಿ ಎಚ್. ಎಮ್. ಎಮ್ ನ ಶ್ರೀನಿತ್ಗೆ ದ್ವಿತೀಯ ಸ್ಥಾನ
ಕುಂದಾಪುರ (ಡಿ.31): ಶ್ರೀ ಸಿದ್ಧಿವಿನಾಯಕ ಚೆಸ್ ಅಕಾಡೆಮಿ(ರಿ.) ಉಪ್ಪುಂದ ಇದರ ವತಿಯಿಂದ ಬ್ರಹ್ಮಾವರದಲ್ಲಿ ಡಿ.22 ರಂದು ನಡೆದ ಶ್ರೀ ಸಿದ್ಧಿವಿನಾಯಕ ಟ್ರೋಫಿ 2024 ರ ಚೆಸ್ ಪಂದ್ಯಾಟದಲ್ಲಿ ಕುಂದಾಪುರದ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳ ಪ್ರಾಥಮಿಕ ವಿಭಾಗದ ಎರಡನೇ ತರಗತಿ ವಿದ್ಯಾರ್ಥಿ ಶ್ರೀನಿತ್ ಶೇಟ್ 7ರ ವಯೋಮಾನದ ವಿಭಾಗದಲ್ಲಿ ಸ್ಪರ್ಧಿಸಿ 6 ರೌಂಡ್ಸ್ ಗಳಲ್ಲಿ 5 ಪಾಯಿಂಟ್ಸ್ ಗಳನ್ನು ಗಳಿಸಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾನೆ. ಈ ವಿಜೇತ ವಿದ್ಯಾರ್ಥಿಯನ್ನು ಸಂಸ್ಥೆಯ […]
ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳಲ್ಲಿ 49ರ ಸಂಭ್ರಮ- ರುಗ್ಮಯಾನ
ಕುಂದಾಪುರ (ಡಿ. 27): ವಿದ್ಯಾರ್ಥಿ ಜೀವನ ಎಂದರೆ ಕೇವಲ ಕಟ್ಟುನಿಟ್ಟಿನ ಜೀವನವಲ್ಲ. ಅಲ್ಲಿ ತಮಾಷೆ, ಸಂತೋಷ, ಗೆಳೆತನದ ಜೊತೆಗೆ ಕಲಿಕೆಯು ಮುಖ್ಯವಾಗಿರುತ್ತದೆ. ನಮಗೆ ಮತ್ತೊಮ್ಮೆ ಶಾಲಾ ಜೀವನ ಸಿಗುವುದಿಲ್ಲ. ನಾವು ಕಲಿತ ಶಾಲೆಗೆ ಮರಳಬೇಕಾದರೆ ಏನಾದರು ಒಂದು ಉತ್ತಮ ಸಾಧನೆ ಮಾಡಿದರೆ ಇಂತಹ ವೇದಿಕೆ ಸಿಗುತ್ತದೆ ಎಂದು ಸಂಸ್ಥೆಯ ಪ್ರಾಕ್ತನ ವಿದ್ಯಾರ್ಥಿಯಾದ, ಸರ್ವೇಯರ್ ಎ.ಡಿ.ಎಲ್.ಆರ್ ಆಫೀಸ್ ಕುಂದಾಪುರ ಶ್ರೀಯುತ ಶಶಾಂಕ್ ಬಿ. ಜೋಗಿ ಹೇಳಿದರು. ಅವರು ಕುಂದಾಪುರ ಎಜ್ಯುಕೇಶನ್ ಸೊಸೈಟಿ […]
ಕುಂದಾಪುರ : ಬಾಕ್ಸಿಂಗ್ ನಲ್ಲಿ ಕಂಚಿನ ಪದಕ ವಿಜೇತ ಎಚ್.ಎಮ್.ಎಮ್ ಶಾಲೆಯ ಸದ್ವಿನ್
ಕುಂದಾಪುರ (ಡಿ.12) : ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಮತ್ತು ಗ್ಲಾಡಿಯೇಟರ್ಸ್ ಬಾಕ್ಸಿಂಗ್ ಅಕಾಡೆಮಿ (ರಿ). ಜಂಟಿ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲ್ಪಟ್ಟ ಇಂಟರ್ ಕ್ಲಬ್ ಬಾಕ್ಸಿಂಗ್ ಚಾಂಪಿಯನ್ ಶಿಪ್ 2024ರಲ್ಲಿ ಕುಂದಾಪುರದ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳ ಪ್ರಾಥಮಿಕ ವಿಭಾಗದ 7ನೇ ತರಗತಿ ವಿದ್ಯಾರ್ಥಿ ಸದ್ವಿನ್ ಶೆಟ್ಟಿ 48ರಿಂದ 50ಕೆ.ಜಿ ಕಬ್ಸ್ ವಿಭಾಗದ ಬಾಕ್ಸಿಂಗ್ ನಲ್ಲಿ ಭಾಗವಹಿಸಿ, ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿಜೇತ ವಿದ್ಯಾರ್ಥಿಯನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ […]
“ಸೈನ್ಸ್ ಟೀಚಿಂಗ್ ಸ್ಕಿಲ್ಸ್” ವಿಶೇಷ ಕಾರ್ಯಾಗಾರ
ಕುಂದಾಪುರ (ಡಿ. 4): ಟೀಚರ್ ಟ್ರೈನಿಂಗ್ ಅಕಾಡೆಮಿ, ಕುಂದಾಪುರ ಇಲ್ಲಿನ ಶಿಕ್ಷಕ ವಿದ್ಯಾರ್ಥಿಗಳಿಗೆ “ಸೈನ್ಸ್ ಟೀಚಿಂಗ್ ಸ್ಕಿಲ್ಸ್” ಕುರಿತ ವಿಶೇಷ ತರಬೇತಿ ಕಾರ್ಯಾಗಾರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕವಿತಾ ಭಟ್ ಮತ್ತು ರವಿಚಂದ್ರರು ಪಾಲ್ಗೊಂಡು ತಮ್ಮ ಅನುಭವನ್ನು ಹಂಚಿಕೊಂಡರು. ಪ್ರೀಸ್ಕೂಲ್ ಶಿಕ್ಷಕರಿಗೆ ಮಕ್ಕಳಿಗೆ ವಿಜ್ಞಾನ ಕಲಿಸುವುದು ಹೇಗೆ ಸರಳ ಮತ್ತು ಆಕರ್ಷಕವಾಗಿರಬಹುದು ಎಂಬುದರ ಬಗ್ಗೆ ತರಬೇತಿ ನೀಡುವುದರ ಮೂಲಕ ತಮ್ಮ ಪ್ರಸ್ತುತಿಯಲ್ಲಿ, “ಚಿಕ್ಕ ಮಕ್ಕಳಿಗೆ ಕಲಿಕೆ […]
ವಿದ್ಯಾರ್ಥಿಗಳ ಸರ್ವಾಂಗಿಣ ಅಭಿವೃದ್ಧಿ ಶಿಕ್ಷಣ ಮತ್ತು ಕ್ರೀಡೆಯಿಂದ ಸಾಧ್ಯ – ಶ್ರೀ ಕುಸುಮಾಕರ್ ಶೆಟ್ಟಿ
ಕುಂದಾಪುರ( ಡಿ 3): ಇಂದಿನ ವಿದ್ಯಾರ್ಥಿಗಳಿಗೆ ಓದು ಎಷ್ಟು ಮುಖ್ಯವೋ ಅಷ್ಟೇ ದೈಹಿಕ ಚಟುವಟಿಕೆಗಳು ಮುಖ್ಯ. ಮಕ್ಕಳ ಆರೋಗ್ಯ ಸ್ಥಿತಿ ಮತ್ತು ಶಕ್ತಿ ಸಾಮರ್ಥ್ಯ ತುಂಬಾ ಕಡಿಮೆ ಮಟ್ಟದಲ್ಲಿದೆ. ಅದನ್ನು ಕ್ರೀಡೆಯಿಂದ ಮಾತ್ರ ಉತ್ತಮಪಡಿಸಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಶಿಕ್ಷಣ ಮತ್ತು ಆರೋಗ್ಯದಿಂದ ಮಾತ್ರ ಸಾಧ್ಯ ಎಂದು ಯುವ ಸಬಲೀಕರಣ ಕ್ರೀಡಾ ಸಂಸ್ಥೆಯ ಅಧಿಕಾರಿ ಶ್ರೀ ಕುಸುಮಾಕರ್ ಶೆಟ್ಟಿ ಹೇಳಿದರು. ಅವರು ಕುಂದಾಪುರ ಎಜುಕೇಶನ್ ಸೊಸೈಟಿ(ರಿ.) ಪ್ರವರ್ತಿತ ಎಚ್. […]










