ಹೆಮ್ಮಾಡಿ( ಆ.8): ಇತ್ತೀಚಿಗೆ ಗಂಗೊಳ್ಳಿಯಲ್ಲಿ ನಡೆದ ದೋಣಿ ದುರಂತದಲ್ಲಿ ಮೃತರಾದ ದಿ.ಸುರೇಶ್ ಖಾರ್ವಿಯವರ ಮಗಳಾದ ಕುಮಾರಿ ಶ್ರೀಯಾ ರವರಿಗೆ ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಣೇಶ ಮೊಗವೀರ ಮಾನವೀಯ ನೆಲೆಯ ಸಹಾಯ ಮಾಡಿದ್ದಾರೆ. ಜನತಾ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ.ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಈ ವಿದ್ಯಾರ್ಥಿನಿಯ ತಂದೆ ಮೃತರಾದ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ ಎರಡು ವರ್ಷದ ಸಂಪೂರ್ಣ ಕಾಲೇಜಿನ ಶುಲ್ಕವನ್ನು( ಕಾಲೇಜು ಶುಲ್ಕ,ಸಮವಸ್ತ್ರ, […]
Tag: janatha p u
ಹೆಮ್ಮಾಡಿ: ಅಗಲಿದ ವಿದ್ಯಾರ್ಥಿಯ ಸಂತಾಪ ಸಭೆ
ಹೆಮ್ಮಾಡಿ( ಆ .05): ಇತ್ತೀಚಿಗೆ ನಿಧನ ಹೊಂದಿದ ಹೆಮ್ಮಾಡಿ ಜನತಾ ಪಿಯು ಕಾಲೇಜಿನ ವಿದ್ಯಾರ್ಥಿ ನಮೇಶನ ಸಂತಾಪ ಸಭೆಯನ್ನು ಕಾಲೇಜಿನ ವತಿಯಿಂದ ಆಯೋಜಿಸಲಾಯಿತು. ಸಭೆಯಲ್ಲಿ ಮೃತ ವಿದ್ಯಾರ್ಥಿಯ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನ ಪ್ರಾರ್ಥನೆ ಮಾಡಲಾಯಿತು. ಮೃತ ವಿದ್ಯಾರ್ಥಿ ತಂದೆ ಲವೇಶ ಮಾತನಾಡಿ ಕಾಲೇಜಿನ ವತಿಯಿಂದ ಸಂತಾಪ ಸಭೆ ಮಾಡಿದ್ದಕ್ಕಾಗಿ ಧನ್ಯವಾದಗಳು. ಮಗನನ್ನು ಕಳೆದುಕೊಂಡ ದುಃಖದಲ್ಲಿ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಕಾಲೇಜಿನ ಬಗ್ಗೆ ತಪ್ಪು ಹೇಳಿಕೆ […]
ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ -ಜನತಾ ಪಿಯು ಕಾಲೇಜಿನ ಬಾಲಕರ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ
ಹೆಮ್ಮಾಡಿ( ಸೆ .24): ಪದವಿಪೂರ್ವ ಶಿಕ್ಷಣ ಇಲಾಖೆಯವರು ಆಯೋಜಿಸಿದ ಜಿಲ್ಲಾ ಮಟ್ಟದ ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು, ಬೋಧಕ,ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ತಾಲ್ಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ -ಜನತಾ ಪಿಯು ಜಿಲ್ಲಾ ಮಟ್ಟಕ್ಕೆ ಆಯ್ಕೆ
ಹೆಮ್ಮಾಡಿ( ಸೆ.15): ಪದವಿಪೂರ್ವ ಶಿಕ್ಷಣ ಇಲಾಖೆಯವರು ಆಯೋಜಿಸಿದ ತಾಲ್ಲೂಕು ಮಟ್ಟದ ಬಾಲಕರ ವಾಲಿಬಾಲ್ ಪಂದ್ಯಾಟದಲ್ಲಿ ಜನತಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು, ಬೋಧಕ,ಬೋಧಕೇತರ ವೃಂದದವರು ಅಭಿನಂದನೆ ಕೋರಿದ್ದಾರೆ.
ಜನತಾ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಸತತ 2ನೇ ವರ್ಷವೂ ಕಬ್ಬಡಿ ಪಂದ್ಯಾಟದಲ್ಲಿ ಸಮಗ್ರ ಚಾಂಪಿಯನ್ಸ್
ಹೆಮ್ಮಾಡಿ(ಸೆ .12) ಪದವಿಪೂರ್ವ ಶಿಕ್ಷಣ ಇಲಾಖೆಯವರು ಆಯೋಜಿಸಿದ ತಾಲ್ಲೂಕು ಮಟ್ಟದ ಬಾಲಕ, ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ಜನತಾ ಪದವಿಪೂರ್ವ ಕಾಲೇಜಿನ ಬಾಲಕ, ಬಾಲಕಿಯರ ಎರಡು ತಂಡ ಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಬಾಲಕರ ತಂಡದ ವಿದ್ಯಾರ್ಥಿಗಳಾದ ನಿಹಾಲ್,ಸಾಯಿಮ್ (ಉತ್ತಮ ದಾಳಿಗಾರ)ಓoಕಾರ್, ಯೂನಸ್, ಶಶಾಂಕ್, ಸಾಗರ್ (ಉತ್ತಮ ಹಿಡಿತಗಾರ)ಅಯಾನ್, ಹಾಗೂ ಬಾಲಕಿಯರ ತಂಡದ ನವ್ಯ (ಉತ್ತಮ ದಾಳಿಗಾರ್ತಿ), ರಕ್ಷಾ,ಸಿಂಚನ, ಸಂಜನಾ, ಅನುಷಾ, ಮೋನಿಷಾ (ಉತ್ತಮ ಹಿಡಿತಗಾರ್ತಿ)ಶ್ರಾವ್ಯ ಕ್ರೀಡಾ ಸ್ಫೂರ್ತಿಯಿಂದ […]
ಸಪ್ಟೆಂಬರ್ 20 ರಂದು ಜನತಾ ಕ್ರೀಡಾoಗಣದಲ್ಲಿ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ
ಹೆಮ್ಮಾಡಿ ( ಸೆ .12): ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಜನತಾ ಪದವಿ ಪೂರ್ವ ಕಾಲೇಜು ಇವರ ಜಂಟಿ ಆಶ್ರಯದಲ್ಲಿ ಪದವಿ ಪೂರ್ವ ಕಾಲೇಜು ವಿಭಾಗದ ಬಾಲಕ ಬಾಲಕಿಯರ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ಜನತಾ ಪದವಿ ಪೂರ್ವ ಕಾಲೇಜು ಇಲ್ಲಿಯ ಜನತಾ ಕ್ರೀಡಾoಗಣದಲ್ಲಿ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಮೊಗವೀರರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ತಾಲ್ಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ -ಜನತಾ ಕಾಲೇಜಿನ ಮಡಿಲಿಗೆ ಅವಳಿ ಪ್ರಶಸ್ತಿಗಳು
ಹೆಮ್ಮಾಡಿ(ಸೆ .11): ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಕುಂದಾಪುರದ ಆರ್. ಎನ್ ಶೆಟ್ಟಿ ಪಿಯು ಕಾಲೇಜು ಆಯೋಜಿಸಿದ ತಾಲ್ಲೂಕು ಮಟ್ಟದ ತ್ರೋಬಾಲ್ ಸ್ಪರ್ಧೆಯಲ್ಲಿ ಭಾಗವಹಿಸಿದ ಜನತಾ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಾದ ಸಾನ್ವಿ, ರಿತಿಷಾ, ಅನಘ, ಗ್ರೀಷ್ಮ, ಧೃತಿ , ಐಶು, ಭೂಮಿಕಾ, ದೀಕ್ಷಾ, ಅನಘ, ಸಿಂಚನ, ನಿಶ್ಮಿತಾ ಇವರುಗಳು ಕ್ರೀಡಾ ಸ್ಫೂರ್ತಿ ಮೆರೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಹಾಗೆ […]
ಶಿಕ್ಷಕರ ದಿನಾಚರಣೆ ಪ್ರಯುಕ್ತ ಶ್ರೀ ಗಣೇಶ್ ಮೊಗವೀರರಿಗೆ ಸನ್ಮಾನ
ಹೆಮ್ಮಾಡಿ (ಸೆ. 05): ಮೊಗವೀರ ಯುವ ಸಂಘಟನೆ (ರಿ.), ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ ಇವರ ನೇತೃತ್ವದಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ.),ಅಂಬಲಪಾಡಿ,ಉಡುಪಿ ಇವರ ಸಹಯೋಗದೊಂದಿಗೆ ಶಿಕ್ಷಕ ದಿನಾಚರಣೆ ಪ್ರಯುಕ್ತ ಜನತಾ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಶ್ರೀ ಗಣೇಶ್ ಮೊಗವೀರ ಇವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮೊಗವೀರ ಮಹಾಜನ ಸೇವಾ ಸಂಘ (ರಿ.), ಬಗ್ವಾಡಿ ಹೋಬಳಿ, ಕುಂದಾಪುರ ಶಾಖೆಯ ಅಧ್ಯಕ್ಷರಾದ […]
ಹೆಮ್ಮಾಡಿ: ಜನತಾ ಪಿ ಯು ಕಾಲೇಜಿನ ಮರಿಯಾ ವೈಯೊಲ ಬರೆಟ್ಟೋ ರಾಜ್ಯ ಮಟ್ಟಕ್ಕೆ ಆಯ್ಕೆ
ಹೆಮ್ಮಾಡಿ(ಸೆ .02): ಪದವಿಪೂರ್ವ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ ಆಯೋಜಿಸಿದ ಜಿಲ್ಲಾಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಜನತಾ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ.ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಮರಿಯಾ ವೈಯೊಲ ಬರೆಟ್ಟೋ ಜಿಲ್ಲಾ ಮಟ್ಟದಲ್ಲಿ ವಿಜೇತಳಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಜನತಾ ಪಿ.ಯು ಕಾಲೇಜು ಹೆಮ್ಮಾಡಿ: ದಾಖಲೆಯ 14 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ
ಹೆಮ್ಮಾಡಿ(ಸೆ.2): ಜನತಾ ಪದವಿ ಪೂರ್ವ ಕಾಲೇಜು ಹೆಮ್ಮಾಡಿ, ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗ ಉಡುಪಿ ಇವರ ಆಸರೆಯಲ್ಲಿ ಜಿಲ್ಲಾ ಮಟ್ಟದ ಪದವಿ ಪೂರ್ವ ಬಾಲಕ ಬಾಲಕಿಯರ ಕುಸ್ತಿ ಪಂದ್ಯಾಟವು ಜನತಾ ಪಿಯು ಕಾಲೇಜಿನ ಕ್ರೀಡಾoಗಣದಲ್ಲಿ ನಡೆಯಿತು. ಕುಸ್ತಿ ಪಂದ್ಯಾಟವು ಬಾಲಕರ ವಿಭಾಗದ ಫ್ರಿ ಸ್ಟೆಲ್ ಹಾಗೂ ಗ್ರಿಕೋ ರೋಮನ್ ಮತ್ತು ಬಾಲಕಿಯರ ವಿಭಾಗ ದಲ್ಲಿ ನಡೆಯಿತು. ಉಡುಪಿ ಜಿಲ್ಲೆಯ ವಿವಿಧ ಪದವಿ ಪೂರ್ವ ಕಾಲೇಜುಗಳ ಸುಮಾರು 160ವಿದ್ಯಾರ್ಥಿಗಳು […]










