ಉಡುಪಿ(ಜೂ,5): ಬೊಡೋಕಾನ್ ಕರಾಟೆ& ಸ್ಪೋರ್ಟ್ಸ್ ಅಸೋಸಿಯೇಷನ್ ಉಡುಪಿ ಇವರು ಅಂಬಲಪಾಡಿಯಲ್ಲಿ ಆಯೋಜಿಸಿದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಕಿರಣ್ಸ್ ಡ್ರಾಗನ್ ಫಿಸ್ಟ್ ಮಾರ್ಷಲ್ ಆರ್ಟ್ ವಿದ್ಯಾರ್ಥಿ ಹಾಗೂ ತರಬೇತುದಾರರಾದ ಟಿ. ಶಶಾಂಕ್ ಶೆಣೈ ಸೀನಿಯರ್ ಕಟಾ ವಿಭಾಗದಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ. ಇವರು ಕಿಯೋಶಿ ಕಿರಣ್ ಕುಂದಾಪುರ ಇವರ ಶಿಷ್ಯ ಹಾಗೂ ಗಂಗೊಳ್ಳಿ ನಿವಾಸಿ ಟಿ.ದಿನಕರ ಶ್ಯಾನುಭಾಗ್ ಮತ್ತು ಉಷಾ ದಿನಕರ್ ರವರ ಪುತ್ರ .
Tag: narendra gangolli
ವೈಷ್ಣವಿ ಗೋಪಾಲ್ ಗೆ 5ನೇ ರ್ಯಾಂಕ್
ಗಂಗೊಳ್ಳಿ ( ಏ.20): ಮಂಗಳೂರು ವಿಶ್ವವಿದ್ಯಾನಿಲಯದ 20020-21 ನೇ ಸಾಲಿನ ಪರೀಕ್ಷೆಯಲ್ಲಿ ಮೂಡಬಿದರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಗಂಗೊಳ್ಳಿಯ ವೈಷ್ಣವಿ ಗೋಪಾಲ ಚಂದನ್ ಬಿಎ ಪದವಿ ಪರೀಕ್ಷೆಯಲ್ಲಿ ಐದನೇ ರ್ಯಾಂಕ್ ಗಳಿಸಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿ ಗುರುತಿಸಿಕೊಂಡಿರುವ ಇವರು ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಸಂಚಲನ ಫೌಂಡೇಶನ್ ಕುಂದಾಪುರ ಇದರ ಉಪಾಧ್ಯಕ್ಷೆ. ಗಂಗೊಳ್ಳಿಯ ಗೋಪಾಲ ಚಂದನ್ ಮತ್ತು ಖ್ಯಾತ ಆಯುರ್ವೇದ ವೈದ್ಯೆ ಡಾ. ವೀಣಾ ಕಾರಂತ್ ದಂಪತಿಯ ಪುತ್ರಿ.
ಶ್ವೇತಾ ಪೂಜಾರಿಗೆ ಚಿನ್ನದ ಪದಕ
ಕುಂದಾಪುರ( ಏ.18): ಬೆಂಗಳೂರಿನ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಬಿಸಿನೆಸ್ ಅಂಡ್ ರಿಸರ್ಚ್ ನ ವಿದ್ಯಾರ್ಥಿನಿ ಶ್ವೇತಾ ಪೂಜಾರಿ ಬೆಂಗಳೂರು ವಿಶ್ವವಿದ್ಯಾನಿಲಯದ 2019- 21 ರ ಎಂಬಿಎ ಪರೀಕ್ಷೆಯ ಮಾರ್ಕೆಟಿಂಗ್ ಮತ್ತು ಫೈನಾನ್ಸ್ ವಿಭಾಗದ ಪರೀಕ್ಷೆಯಲ್ಲಿ ಕಾಲೇಜಿಗೆ ಅತ್ಯಧಿಕ ಅಂಕ ಗಳಿಸುವ ಮೂಲಕ ಚಿನ್ನದ ಪದಕವನ್ನು ಗಳಿಸಿರುತ್ತಾರೆ. ಪಠ್ಯಕ್ರಮದ ಹೊರತಾಗಿ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿರುವ ವಿದ್ಯಾರ್ಥಿಗಳಿಗೆ ನೀಡಲಾಗುವ ಐ ಎಸ್ ಬಿ ಆರ್ ಕಾಲೇಜಿನ ಜೆಮ್ಸ್ ಮತ್ತು […]
ಸಮುದಾಯದತ್ತ ಶಾಲೆಯಲ್ಲಿ ಸಂಜಿತ್ ಸ್ಯಾಕ್ಸೋಫೋನ್ ವಾದನ
ಗಂಗೊಳ್ಳಿ( ಏ.13): ಇಲ್ಲಿನ ಕೊಂಚಾಡಿ ರಾಧಾ ಶೆಣೈ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಖಾರ್ವಿಕೇರಿಯಲ್ಲಿ ಕಳೆದ ಶನಿವಾರ ನಡೆದ ಸಮುದಾಯದತ್ತ ಶಾಲೆ ಕಾರ್ಯಕ್ರಮದಲ್ಲಿ ಈ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿ ಸಂಜಿತ್ ಎಂ ದೇವಾಡಿಗನಿಂದ ಸ್ಯಾಕ್ಸೋಪೋನ್ ವಾದನದ ಕರ್ಯಕ್ರಮ ನಡೆಯಿತು. ಭಕ್ತಿಗೀತೆ, ದೇಶಭಕ್ತಿ ಗೀತೆ, ಭಾವಗೀತೆ, ಚಲನಚಿತ್ರ ಗೀತೆಯ ಜೊತೆಗೆ ರಾಷ್ಟ್ರಗೀತೆಯನ್ನು ನುಡಿಸಿ ಮೆಚ್ಚುಗೆ ಗಳಿಸಿದ ಸಂಜಿತ್ ಎಂ ದೇವಾಡಿಗನನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಎಸ್. […]
ಮೇಲ್ ಗಂಗೊಳ್ಳಿ: ಏ.20 ರಂದು ವಿಶೇಷ ಕಾರ್ಯಕ್ರಮ
ಗಂಗೊಳ್ಳಿ (ಏ .11): ಡಾ. ಬಿ.ಆರ್. ಅಂಬೇಡ್ಕರ್ ಯುವಕ ಮಂಡಲ ಮೇಲ್ ಗಂಗೊಳ್ಳಿ ಇದರ 35 ನೇ ವಾರ್ಷಿಕೋತ್ಸವ ಮತ್ತು ಅಮೃತ ಯುವತಿ ಮಂಡಲ ಹಾಗೂ ಅರ್ಚನಾ ಮಹಿಳಾ ಮಂಡಲ ಮೇಲ್ ಗಂಗೊಳ್ಳಿಯ 29 ನೇ ವಾರ್ಷಿಕೋತ್ಸವ ಹಾಗೂ ಡಾ. ಬಿ ಆರ್. ಅಂಬೇಡ್ಕರ್ ಅವರ 131ನೇ ಜನ್ಮದಿನಾಚರಣೆಯ ಕಾರ್ಯಕ್ರಮವು ಮೇಲ್ ಗಂಗೊಳ್ಳಿಯ ಪೋರ್ಟ್ ಬಂಗ್ಲೆ ಮೈದಾನದಲ್ಲಿ ಏ.20 ರ ಬುಧವಾರದಂದು ಜರಗಲಿರುವುದು. ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀನಿವಾಸ […]
ಯುವ ಲೇಖಕ -ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಗೆ ಸನ್ಮಾನ
ಗಂಗೊಳ್ಳಿ( ಮಾ.29) : ನಾಯಕವಾಡಿ ಗುಜ್ಜಾಡಿಯ ಶ್ರೀ ಸಂಗಮೇಶ್ವರ ದೇವಸ್ಥಾನ, ಶ್ರೀ ಚೆನ್ನಬಸವೇಶ್ವರ ಭಜನಾ ಮಂಡಳಿ ಮತ್ತು ಶ್ರೀ ಚೆನ್ನಬಸವೇಶ್ವರ ಯುವಕ ಮಂಡಲ ಇವರ ವತಿಯಿಂದ ಕಳೆದ ಸೋಮವಾರ ಯುವ ಬರಹಗಾರ ವಾಗ್ಮಿ ನರೇಂದ್ರ ಎಸ್ ಗಂಗೊಳ್ಳಿ ಇವರನ್ನು ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ರಾಜು ಎನ್ ಮಾಸ್ತರ್, ಪ್ರಧಾನ ಕಾರ್ಯದರ್ಶಿ ಜಿ.ಸುಬ್ಬ, ಉಪಾಧ್ಯಕ್ಷರಾದ ಜಿ ಕೆ ಸುರೇಶ್, ಕೋಶಾಧಿಕಾರಿ […]
ರಾಷ್ಟ್ರಮಟ್ಟದ ದೇಹದಾಢ್ಯ ಸ್ಪರ್ಧೆ: ಶರತ್ ಶೇರುಗಾರ್ ಗಂಗೊಳ್ಳಿಗೆ ಚಿನ್ನದ ಪದಕ
ಕುಂದಾಪುರ (ಮಾ.16): ಪಂಜಾಬಿನ ಮೊಹಾಲಿಯಾ ಚಂಡೀಗಢ ಯುನಿವರ್ಸಿಟಿಯಲ್ಲಿ ಇತ್ತೀಚೆಗೆ ನಡೆದ ವಿಶ್ವವಿದ್ಯಾನಿಲಯಗಳ ಅಖಿಲ ಭಾರತ ಮಟ್ಟದ 65 ಕೆ.ಜಿ ವಿಭಾಗದ ದೇಹದಾಢ್ಯ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಶರತ್ ಶೇರುಗಾರ್ ಚಿನ್ನದ ಪದಕವನ್ನು ಗಳಸಿ ವಿಶೇಷ ಸಾಧನೆಗೈದಿದ್ದಾರೆ. ಇಷ್ಟೇ ಅಲ್ಲದೇ ಮಾ. 5 ರಂದು ಉಡುಪಿಯ ಮೌಂಟ್ ರೋಜರಿ ಚರ್ಚೆ ಗ್ರೌಂಡ್ ನಲ್ಲಿ ನಡೆದ ಜಿಲ್ಲಾ ಮಟ್ಟದ 70 ಕೆ.ಜಿ ವಿಭಾಗದ ದೇಹದಾಢ್ಯ ಸ್ಪರ್ಧೆಯಲ್ಲಿ ಮಿಸ್ಟರ್ ಉಡುಪಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಮಾ.6ರಂದು ಸಂತೆಕಟ್ಟೆಯಲ್ಲಿ ನಡೆದ ರಾಜ್ಯ ಮಟ್ಟದ ಮಿಸ್ಟರ್ […]
ನಾಯಕವಾಡಿ : ಸಂಗಮೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ
ನಾಯಕವಾಡಿ (ಮಾ.8 ): ಭಜನೆ ಎನ್ನುವುದು ಧಾರ್ಮಿಕ ಮನ ಶುದ್ಧಿಯನ್ನು ತರುವುದು ಮಾತ್ರವಲ್ಲದೆ ಸಂಘಟನೆಯನ್ನು ಮತ್ತಷ್ಟು ಬಲಿಷ್ಠವಾಗಿಸಲು ಸಹಾಯಮಾಡುತ್ತವೆ. ಆ ಮೂಲಕ ಜನರಲ್ಲಿ ಪರಸ್ಪರ ಸಹಕಾರವನ್ನು ಮೂಡಿಸಿ ಸಮಾಜದಲ್ಲಿ ಶಾಂತಿ ನೆಲೆಸಲು ಅನುಕೂಲವಾಗುತ್ತದೆ ಎಂದು ಕೊಂಕಣ ಕೊಪ್ಪದ ಸನ್ಯಾಸಿನಿ ಪ್ರವಚನ ಕೇಸರಿ ಪದ್ಮಾದೇವಿ ಅವರು ಅಭಿಪ್ರಾಯಪಟ್ಟರು. ಅವರು ನಾಯಕವಾಡಿ ಗುಜ್ಜಾಡಿಯ ಶ್ರೀ ಸಂಗಮೇಶ್ವರ ದೇವಸ್ಥಾನ ಮತ್ತು ಶ್ರೀ ಚೆನ್ನಬಸವೇಶ್ವರ ಭಜನಾ ಮಂಡಳಿಯ 67ನೇ ವಾರ್ಷಿಕೋತ್ಸವ ಮತ್ತು ಶ್ರೀ ಚೆನ್ನಬಸವೇಶ್ವರ ಯುವಕ […]
ಕವನ ಸ್ಪರ್ಧೆ – ನರೇಂದ್ರ ಎಸ್. ಗಂಗೊಳ್ಳಿ ದ್ವಿತೀಯ ಸ್ಥಾನ
ಗಂಗೊಳ್ಳಿ (ಫೆ. 13) : ಕುಂದ ಸಿರಿ ಬಳಗ ತನ್ನ ಜಾಲತಾಣಗಳ ಮೂಲಕ ಆಯೋಜಿಸಿದ್ದ ಕನ್ನಡದಲ್ಲಿ ಕವನ ಸ್ಪರ್ಧೆಯಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾದ ನರೇಂದ್ರ ಎಸ್ ಗಂಗೊಳ್ಳಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಇವರು ರಚಿಸಿದ “ಮೃತ್ಯು” ಕವನವು ಬಹುಮಾನಕ್ಕೆ ಭಾಜನವಾಗಿದ್ದು 1000 ರೂಪಾಯಿ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ಗಂಗೊಳ್ಳಿ: ಶವ ಸ್ನಾನದ ಟೇಬಲ್ ಕೊಡುಗೆ
ಗಂಗೊಳ್ಳಿ(ಫೆ.10): ಇಲ್ಲಿನ ಬಿಲ್ಲವರ ಹಿತರಕ್ಷಣಾ ವೇದಿಕೆಯ ವತಿಯಿಂದ ಗಂಗೊಳ್ಳಿಯ ಸಾರ್ವಜನಿಕರ ಉಪಯೋಗಕ್ಕಾಗಿ ಶವ ಸ್ನಾನಕ್ಕಾಗಿ ಬಳಸುವ ಟೇಬಲನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಗಂಗೊಳ್ಳಿ ಬಿಲ್ಲವರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಜಿ. ಗೋಪಾಲ ಪೂಜಾರಿ, ಗೌರವಾಧ್ಯಕ್ಷರಾದ ಲಕ್ಷ್ಮಣ ಬಿಲ್ಲವ ಮತ್ತು ಶ್ರೀನಿವಾಸ ಜತ್ತನ್, ಉಪಾಧ್ಯಕ್ಷ ಜಿ. ಕೆ.ವೆಂಕಟೇಶ ಕೊಡೇರಿ ಮನೆ, ಕಾರ್ಯದರ್ಶಿ ಜಿ. ಆರ್ .ಲಕ್ಷ್ಮಣ ಬಿಲ್ಲವ, ಕೋಶಾಧಿಕಾರಿ ಮಂಜುರಾಜ್ ಗಂಗೊಳ್ಳಿ ಮತ್ತು ಸದಸ್ಯರು ಉಪಸ್ಥಿತರಿದ್ದರು.










