ಗಂಗೊಳ್ಳಿ(ಮೇ,26): ಪಿಯುಸಿ ಎರಡನೇ ಹಂತದ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟದ ಅಗ್ರ 10 ರ್ಯಾಂಕ್ ಗಳಲ್ಲಿ ಸ್ಥಾನ ಪಡೆಯುವ ಮುಖೇನ ಒಟ್ಟಾರೆ ಮೂರು ರ್ಯಾಂಕ್ಗಳನ್ನು ಕಾಲೇಜು ಗಳಿಸಿಕೊಂಡಿದೆ. ವಿಜ್ಞಾನ ವಿಭಾಗದಲ್ಲಿ 600ರಲ್ಲಿ 591 ಅಂಕಗಳನ್ನು ಪಡೆದ ಹರ್ಷಿತಾ ಎಸ್ ಪೂಜಾರಿ ಎಂಟನೇ ರ್ಯಾಂಕ್ ಗಳಿಸಿದರೆ ಇಂಚರ ಆರ್ ದೇವಾಡಿಗ 600 ರಲ್ಲಿ 589 ಅಂಕಗಳನ್ನು ಪಡೆದು ರಾಜ್ಯಮಟ್ಟದಲ್ಲಿ ಹತ್ತನೇ […]
Tag: narendra gangolli
ಬಿಲ್ಲವರ ಹಿತರಕ್ಷಣಾ ವೇದಿಕೆ ಗಂಗೊಳ್ಳಿ:ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ಗಂಗೊಳ್ಳಿ(ಮೇ,23):ಗಂಗೊಳ್ಳಿಯಲ್ಲಿ ವಾಸ್ತವ್ಯವಿರುವ ಮತ್ತು ಗಂಗೊಳ್ಳಿಯ ಪ್ರೌಢ ಶಾಲೆಯಲ್ಲಿ ಕಲಿತು 2023-24 ನೇ ಸಾಲಿನ ಎಸ್ಸೆಸ್ಸೆಲ್ಸಿ ಪ್ರಥಮ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ 70 ಕ್ಕೂ ಅಧಿಕ ಅಂಕ ಗಳಿಸಿರುವ ಬಿಲ್ಲವ ಸಮುದಾಯದ ವಿದ್ಯಾರ್ಥಿಗಳು ಮತ್ತು ಪ್ರಸ್ತುತ ಗಂಗೊಳ್ಳಿಯ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮಾಡುತ್ತಿರುವ 2023-24 ನೇ ಸಾಲಿನ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ 70 ಕ್ಕೂ ಅಧಿಕ ಅಂಕ ಗಳಿಸಿರುವ ಬಿಲ್ಲವ ಸಮುದಾಯದ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ […]
ಪಂಚ ಗಂಗಾವಳಿ ಬಳಗ ಗಂಗೊಳ್ಳಿ: 30ನೇ ವಾರ್ಷಿಕೋತ್ಸವ ಸಮಾರಂಭ
ಗಂಗೊಳ್ಳಿ( ಜ,30): : ಉತ್ತಮ ವಿಚಾರಗಳನ್ನು ಪ್ರೋತ್ಸಾಹಿಸಲು ನಾವು ಸದಾ ಸಿದ್ಧರಿರಬೇಕು. ಆಗ ಮಾತ್ರ ಉತ್ತಮ ಸಮಾಜದ ನಿರ್ಮಾಣವಾಗಲು ಸಾಧ್ಯ ಎಂದು ಉಡುಪಿ ಕರ್ನಾಟಕ ಬ್ಯಾಂಕ್ ಶಾಖೆಯ ಸೀನಿಯರ್ ಮ್ಯಾನೇಜರ್ ರವೀಂದ್ರ ಶ್ಯಾನುಭಾಗ್ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಗಂಗೊಳ್ಳಿಯಲ್ಲಿ ನಡೆದ ಪಂಚಗಂಗಾವಳಿ ಬಳಗದ 30ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಮಾತನಾಡಿ ಸಾಂಸ್ಕೃತಿಕ […]
ಗಂಗೊಳ್ಳಿ: ಶಿಕ್ಷಕ ಉಮೇಶ್ ಕರ್ಣಿಕ್ ಬೀಳ್ಕೊಡುಗೆ ಸಮಾರಂಭ
ಗಂಗೊಳ್ಳಿ( ಜ.08): ಇಲ್ಲಿನ ಸರಸ್ವತಿ ವಿದ್ಯಾಲಯ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ 24 ವರ್ಷ ಹಾಗೂ ಉಪ ಪ್ರಾಂಶುಪಾಲರಾಗಿ ಆರು ವರ್ಷ ಸೇವೆ ಸಲ್ಲಿಸಿದ್ದು ಮಾತ್ರವಲ್ಲದೆ 20 ವರ್ಷಗಳ ಕಾಲ ಎನ್ ಸಿ ಸಿ ಅಧಿಕಾರಿಯಾಗಿ ಕಾರ್ಯವನ್ನು ನಿರ್ವಹಿಸಿ ವಯೋನಿವೃತ್ತಿ ಹೊಂದಿದ ಉಮೇಶ್ ಕರ್ಣಿಕ್ ಎಸ್ ಅವರ ಬೀಳ್ಕೊಡುಗೆ ಸಮಾರಂಭವು ಸರಸ್ವತಿ ವಿದ್ಯಾಲಯದ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಜಿಎಸ್ವಿಎಸ್ ಅಸೋಸಿಯೇಷನ್ ಅಧ್ಯಕ್ಷ ಡಾ. ಕಾಶಿನಾಥ್ […]
ಗಂಗೊಳ್ಳಿಯಲ್ಲಿ ಮನ ಸೆಳೆದ ಮೃಡ ನಾಟಕ
ಗಂಗೊಳ್ಳಿ(ಡಿ.22): ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿನ ವಿದ್ಯಾರ್ಥಿಗಳು ಅಭಿನಯಿಸಿದ “ಮೃಡ” – ಒಂದು ಸತ್ಯದ ಕಥೆ ನಾಟಕ ತನ್ನ ಭಿನ್ನವೆನಿಸುವ ಕಥಾ ವಸ್ತು ಮತ್ತು ವಿಶೇಷ ಪ್ರಸ್ತುತಿಯಿಂದ ಗಮನ ಸೆಳೆಯಿತು. ಮರಣ ಹೊಂದುವ ಮೊದಲು ಶಿವನನ್ನು ನೋಡಬೇಕು ಆ ಮೂಲಕ ಜನರ ಕಣ್ಣಲ್ಲಿ ಆರಾಧಿಸಲ್ಪಡಬೇಕು ಎನ್ನುವ ಬಯಕೆಯೊಂದಿಗೆ ಶಿವನನ್ನು ನೋಡ ಹೊರಟ ಚಾರುಕೀರ್ತಿ ಎನ್ನುವ ಧನಿಕ ಅಂತಿಮವಾಗಿ ತನ್ನ ತಪ್ಪುಗಳಿಗೆ ಅಹಂಕಾರಕ್ಕೆ ಬಲಿಯಾಗುವ […]
ಕುಂದಾಪುರ: ಗಮಕ ವಾಚನ ವ್ಯಾಖ್ಯಾನ
ಕುಂದಾಪುರ( ಡಿ,4): ಪುರಾಣ ಹಾಗೂ ಆಧುನಿಕ ಕಾವ್ಯಗಳ ಸುಲಭ ಅರ್ಥೈಸುವಿಕೆಗೆ ಗಮಕ ಕಲೆ ಪೂರಕವಾದುದು. ಕಾವ್ಯಗಳಲ್ಲಿನ ಸಾಂದರ್ಭಿಕವಾದ ಸಾಹಿತ್ಯ ಶ್ರೀಮಂತಿಕೆಗೆ ರಸಬದ್ಧವಾದ ರಾಗಗಳ ಸಂಯೋಜನೆಯಿಂದ ಶೋತೃಗಳಿಗೆ ಹೃದ್ಯವಾಗುತ್ತದೆ. ಮನೆಮನೆಗಳಲ್ಲಿ ಗಮಕ ಕಲೆ ಪ್ರಸ್ತುತಗೊಳ್ಳಬೇಕು ಯುವ ಮನಸುಗಳನ್ನು ಅರಳಿಸಬೇಕು ಎಂದು ಕುಂದಾಪುರದ ಖ್ಯಾತ ನ್ಯಾಯವಾದಿ ಎ ಎಸ್ ಎನ್ ಹೆಬ್ಬಾರ್ ಅಭಿಪ್ರಾಯಪಟ್ಟರು. ಅವರು ಕುಂದಾಪುರದ ‘ನುಡಿ’ ಯಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಉಡುಪಿ ಜಿಲ್ಲೆ ಮತ್ತು ಕರ್ನಾಟಕ ಗಮಕ ಕಲಾ […]
ವೈಷ್ಣವಿ ಖಾರ್ವಿಗೆ ರಾಷ್ಟ್ರ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ
ಕುಂದಾಪುರ ( ನ.29): ಬೆಂಗಳೂರಿನಲ್ಲಿ ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಆಶ್ರಯದಲ್ಲಿ ನಡೆದ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಇಕ್ಯುಪ್ಡ್ ಬೆಂಚ್ ಪ್ರೆಸ್ ಸ್ಪರ್ಧೆಯ 69 ಕೆಜಿ ಸಬ್ ಜೂನಿಯರ್ ವಿಭಾಗದಲ್ಲಿ ಗಂಗೊಳ್ಳಿಯ ವೈಷ್ಣವಿ ಖಾರ್ವಿ ಗಂಗೊಳ್ಳಿ ಇವರು ತೃತೀಯ ಸ್ಥಾನವನ್ನು ಪಡೆದು ಕಂಚಿನ ಪದಕವನ್ನು ಗಳಿಸಿರುತ್ತಾರೆ. ಈಕೆ ಕುಂದಾಪುರದ ನ್ಯೂ ಹರ್ಕ್ಯುಲೆಸ್ ಜಿಮ್ (ರಿ )ಹಾಗೂ ಕಿಂಗ್ ಫಿಷರ್ ಸ್ಪೋರ್ಟ್ಸ್ ಕ್ಲಬ್( ರಿ ) ಈ ಸಂಸ್ಥೆಯ ಸದಸ್ಯರಾಗಿದ್ದು ಗಂಗೊಳ್ಳಿಯ […]
ಸರಸ್ವತಿ ವಿದ್ಯಾಲಯ ಪಿ ಯು ಕಾಲೇಜು ಗಂಗೊಳ್ಳಿ :ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಸಂಪನ್ನ
ಗಂಗೊಳ್ಳಿ ( ನ,21): ವಿದ್ಯಾರ್ಥಿಗಳಲ್ಲಿ ಭಾವೈಕ್ಯತೆ ಮತ್ತು ಸಾಮಾಜಿಕ ಕಳಕಳಿ ಉಂಟು ಮಾಡುವಲ್ಲಿ ರಾಷ್ಟ್ರೀಯ ಸೇವಾ ಯೋಜನೆಯಾ ಇಂತಹ ಯೋಜನೆಗಳು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ವಂಡ್ಸೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲಕರಾದ ರಾಜೀವ್ ನಾಯ್ಕ್ ಅಭಿಪ್ರಾಯಪಟ್ಟರು. ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕೊಲ್ಲೂರಿನ ಧರ್ಮಪೀಠದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಕವಿತಾ ಎಂ ಸಿ ರವರು […]
ಗಂಗೊಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವ
ಗಂಗೊಳ್ಳಿ( ನ.02): ನಮ್ಮ ಮಾತೃಭಾಷೆಯಾದ ಕನ್ನಡದ ಬಗೆಗೆ ನಿರಂತರವಾದ ಪ್ರೀತಿ ಕಾಳಜಿಯನ್ನು ಇಟ್ಟುಕೊಂಡು ಅದನ್ನು ನಿತ್ಯದ ಜೀವನದಲ್ಲಿ ಹೆಚ್ಚು ಬಳಸೋಣ ಎಂದು ನಿವೃತ್ತ ಪೋಸ್ಟ್ ಮಾಸ್ಟರ್ ಸೀತಾರಾಮ ಗಾಣಿಗ ಅಭಿಪ್ರಾಯಪಟ್ಟರು ಅವರು ಬೆಂಗಳೂರು ಹೋಟೆಲ್ ನ್ಯೂಸ್ ಮಾಸಪತ್ರಿಕೆ ಮತ್ತು ಕರ್ನಾಟಕ ಕರಾವಳಿ ನಾಗರಿಕ ಹಿತರಕ್ಷಣಾ ವೇದಿಕೆಯ ವತಿಯಿಂದ ಗಂಗೊಳ್ಳಿಯಲ್ಲಿ ನಡೆದ 68ನೇ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಂದು ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶಂಕರ ಜಿ.ಭಾಸ್ಕರ, ಲಕ್ಷ್ಮಣ, ಗುರು ಪಟೇಲ್, […]
ಗಂಗೊಳ್ಳಿ ಶಾರದೋತ್ಸವದಲ್ಲಿ ಸಂಜಿತ್ ಎಮ್ ದೇವಾಡಿಗರಿಂದ ಸ್ಯಾಕ್ಸೋಫೋನ್ ವಾದನ ಸೇವೆ
ಗಂಗೊಳ್ಳಿ(ಆ,27): ಸೇವಾ ಸಂಘ(ರಿ.) ಗಂಗೊಳ್ಳಿಯ 49 ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ವೇದಿಕೆಯಲ್ಲಿ ಗಂಗೊಳ್ಳಿಯ ಸ್ಯಾಕ್ಸೋಫೋನ್ ವಾದನದ ಬಹುಮುಖ ಬಾಲ ಪ್ರತಿಭೆ ಸಂಜಿತ್ ಎಮ್ ದೇವಾಡಿಗ ತಮ್ಮ ತಂಡದೊಂದಿಗೆ ಸ್ಯಾಕ್ಸೋಫೋನ್ ವಾದನ ಸೇವೆಯನ್ನು ಸಲ್ಲಿಸಿದರು. ಶಾರದೆ ದಯೆ ತೋರಿದೆ, ಡೀ ಡೀ ಆಡ್ಯಾನೇ ರಂಗ , ಆವ ಕುಲವೋ ರಂಗ, ಕಣ್ಣುಗಳೆರಡು ಸಾಲದಮ್ಮ, ಕಮಲದ ಮೊಗದೋಳೆ, ತುಳುವನಾಡ ಧರ್ಮ ತುಡರ್, ಎಂಥ ಅಂದ ಎಂಥ ಚಂದ, ತಂಬೂರಿ ಮೀಟಿದವ […]










