ಕುಂದಾಪುರ(ಡಿ,24): ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಎಲ್ಲರ ಕಷ್ಟಕ್ಕೆ ಸ್ಪಂದಿಸಿದ ಕುಂದಾಪುರ ಸಿಟಿ ಜೇಸಿಸ್ ಸ್ಥಾಪಕಾ ಅಧ್ಯಕ್ಷ ನಮ್ಮ ನಾಡ ಒಕ್ಕೂಟ (ರಿ ) ಕೇಂದ್ರ ಸಮಿತಿಯ ಸಂಘಟನ ಕಾರ್ಯದರ್ಶಿ ಹುಸೇನ್ ಹೈಕಾಡಿ ಅವರನ್ನು ಬುಧವಾರ ಕುಂದಾಪುರದ ಆರ್..ಎನ್..ಶೆಟ್ಟಿ ಸಭಾಂಗಣದಲ್ಲಿ ನಡೆದ ಹಂಗಳೂರು ಸ್ಟೆಪ್ ಆನ್ ಸ್ಟೆಪ್ ಡಾನ್ಸ್ ಅಕಾಡೆಮಿಯ 25ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನಿಸಲಾಯಿತು.

ಕೊರೋನಾ ಲಾಕ್ ಡೌನ್ ಸಮಯದಲ್ಲಿ ಕುಂದಾಪುರ ಪರಿಸರದಲ್ಲಿ ಜೇಸಿಐ ಕುಂದಾಪುರ ಸಿಟಿಯ ಆಶ್ರಯದಲ್ಲಿ ಸುಮಾರು 15ಸಾವಿರ ಮಂದಿ ಹಸಿದವರಿಗೆ ಮಧ್ಯಾಹ್ನ ಹಾಗು ಸಂಜೆ ಊಟ, ಬೆಳಿಗ್ಗೆ ತಿಂಡಿ ಹಾಗು 500 ಮನೆಗಳಿಗೆ ಕಿಟ್. 7000ಮಾಸ್ಕ್ ಗಳನ್ನು ತಮ್ಮ ಸಂಸ್ಥೆಯನ್ನು ಕೂಡಿಕೊಂಡು ತೊಡಗಿಸಿಕೊಂಡ ಇವರ ಕಾರ್ಯ ವೈಖರಿಯನ್ನು ಇಲ್ಲಿ ಸ್ಮರಿಸಲಾಯಿತು.

ಶಿಕ್ಷಣ,ಆರೋಗ್ಯ ಉದ್ಯೋಗ ಮುಂತಾದ ಸಮಾಜ ಸೇವಾ ಕಾರ್ಯದಲ್ಲಿ ಇವರು ತಮ್ಮನ್ನು ತೊಡಗಿಸಿಕಂಡಿರುವುದನ್ನು ನೆನಪಿಸಲಾಯಿತು. ಈ ಸಂದರ್ಭದಲ್ಲಿ ಕುಂದಾಪುರ ಸ್ಟೆಪ್ ಆನ್ ಸ್ಟೆಪ್ ನ ಮುಖ್ಯಸ್ಥ ಜಯಂತ್ ಪೂಜಾರಿ ಹಾಗು ಅಕಾಡಮಿಯ ಸದಸ್ಯರು ಉಪಸ್ಥಿತರಿದ್ದರು.











