ಕುಂದಾಪುರ( ಜ,02): ಶಿಸ್ತು, ಸಮಯಪಾಲನೆ, ಶ್ರಮದಾನ, ಊಟೋಪಚಾರ, ಶೈಕ್ಷಣಿಕ, ಸಾಂಸ್ಕೃತಿಕ ಈ ಎಲ್ಲಾ ವಿಚಾರಗಳನ್ನು ಸವಿಸ್ತಾರವಾಗಿ ಕಲಿಯುವ ವೇದಿಕೆಯಾದ ಎನ್.ಎಸ್.ಎಸ್. ಗರಡಿಮನೆಯಂತೆ ವಿದ್ಯಾರ್ಥಿಗಳನ್ನು ಪಳಗಿಸುವುದು ಈ ಎನ್.ಎಸ್.ಎಸ್. ವಾರ್ಷಿಕ ಶಿಬಿರದ ವಿಶೇಷತೆ ಎಂದು ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಪ್ರಸಾದ್ ಪಿ. ಬೈಂದೂರು ಹೇಳಿದರು.
ಅವರು ಇಲ್ಲಿನ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ‘ಎನ್.ಎಸ್.ಎಸ್. ಎಂಬ ಗರಡಿಮನೆ’ ಎಂಬ ವಿಷಯದ ಕುರಿತು ಮಾತನಾಡಿದರು.
ಈ ಸಂದರ್ಭ ಬವಳಾಡಿ ಶಾಲೆಯ ಶಿಕ್ಷಕ ಶ್ರೀ ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದು, ಮುಖ್ಯ ಅತಿಥಿಗಳಾದ ಶ್ರೀ ಉಮೇಶ್ ದೇವಾಡಿಗ, ಮಕ್ಕಿ ದೇವಸ್ಥಾನ, ಶ್ರೀಮತಿ ಮೂಕಾಂಬು, ಹಿರಿಯ ನಾಗರಿಕರು, ಶ್ರೀ ಭೋಜರಾಜ ಶೆಟ್ಟಿ, ಎಸ್.ಡಿ.ಎಮ್.ಸಿ. ಸದಸ್ಯ, ಶ್ರೀ ಮಂಜು ಪೂಜಾರಿ, ಸೃಷ್ಟಿ ಇನ್ಫೋಟೆಕ್ನ ಮಾಲಕರಾದ ಶ್ರೀ ಹರ್ಷವರ್ಧನ್ ಶೆಟ್ಟಿ, ಶ್ರೀ ದೇವರಾಜ ಪೂಜಾರಿ, ಕಾಲೇಜಿನ ಗ್ರಂಥಪಾಲಕ ಶ್ರೀ ಮಹೇಶ್ ನಾಯ್ಕ್, ಎನ್.ಎಸ್.ಎಸ್. ಕಾರ್ಯಕ್ರಮಾಧಿüಕಾರಿಗಳಾದ ಶ್ರೀ ಚೇತನ್ ಶೆಟ್ಟಿ ಕೋವಾಡಿ, ದೀಪಾ ಪೂಜಾರಿ ಉಪಸ್ಥಿತರಿದ್ದರು. ಶಿಬಿರಾರ್ಥಿಗಳಾದ ಅನುಷಾ ಸ್ವಾಗತಿಸಿ, ಶರತ್ ಅತಿಥಿಗಳನ್ನು ಪರಿಚಯಿಸಿ, ಸೌಜನ್ಯ ವಂದಿಸಿ, ಸುವರ್ಣಾ ನಿರೂಪಿಸಿದರು.