ಗುಜ್ಜಾಡಿ (ಫೆ. 5): ಉದಯೋನ್ಮುಖ ಕಲಾವಿದ ಪ್ರಶಾಂತ್ ಆಚಾರ್ಯ ಗುಜ್ಜಾಡಿ ತಮ್ಮ ಕೈಚಳಕದಿಂದ ಮಾರಣಕಟ್ಟೆ ಮೇಳದ ರಂಗಸ್ಥಳ ಮಾದರಿಯ ಚಿಕ್ಕ ರಂಗಮಂಠಪವನ್ನು ರಚಿಸಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಮಾರಣಕಟ್ಟೆ ಇದರ ಆಡಳಿತ ಮೊಕ್ತೇಸರರಾದ ಸದಾಶಿವ ಶೆಟ್ಟಿ ಯವರ ಮೂಲಕ ಶ್ರೀ ದೇವರ ಸನ್ನಿಧಿಗೆ ಹಸ್ತಾಂತರಿಸಿದರು.
ಪ್ರಶಾಂತ್ ಆಚಾರ್ಯ ತೆಂಕಮನೆ ಗುಜ್ಜಾಡಿ , ವೃತ್ತಿಯಲ್ಲಿ ಪ್ಲೈವುಡ್ ,ಅಲ್ಯೂಮಿನಿಯಂ ಹಾಗೂ ಫೈಬರ್ ಡೋರ್ ವರ್ಕ್ ,ರಂಗಸ್ಥಳ ಮಾದರಿಯ ಮಂಟಪ ,ರಬ್ಬರ್ ಮರ,ಬಟ್ಟೆ ,ರೇಡಿಯಂ ಸ್ಟಿಕ್ಕರ್ ,ಬಟ್ಟೆ ,ಪ್ಲಾಸ್ಟಿಕ್ ಹಾಗೂ ಪೇಂಟಿಂಗ್ ವಸ್ತುಗಳಿಂದ ಈ ರಂಗಸ್ಥಳವನ್ನು ರಚಿಸಿದ್ದಾರೆ. ಮೂಲತಃ ಗುಜ್ಜಾಡಿಯವರಾದ ಇವರು ,ತಂದೆ ದಿವಂಗತ ಕೃಷ್ಣಯ್ಯ ಆಚಾರ್ಯ ಮತ್ತು ಶ್ರೀಮತಿ ಆಚಾರ್ಯ ಇವರ ಪುತ್ರ.