ಗಂಗೊಳ್ಳಿ (ಮಾ.02) : ಗೌಂಡ್ ರೈಡರ್ಸ್ ಗಂಗೊಳ್ಳಿ ಇವರ ಆಶ್ರಯದಲ್ಲಿ ಬೈಂದೂರು & ಕುಂದಾಪುರ ತಾಲೂಕು ಮಟ್ಟದ ಪುರುಷರ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಗೌಂಡ್ ರೈಡರ್ಸ್ ಪ್ರೀಮಿಯರ್ ಟ್ರೋಫಿ-2023 ಇದೇ ಮಾರ್ಚ್ 05 ರಂದು ಗಂಗೊಳ್ಳಿ ಎಸ್ ವಿ ಕಾಲೇಜಿನ ರೋಟರಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪ್ರವೇಶ ಶುಲ್ಕ 500 ರೂ ನಿಗದಿ ಪಡಿಸಲಾಗಿದ್ದು, ಪ್ರಥಮ ಬಹುಮಾನ 7,007/- + ಶಾಶ್ವತ ಫಲಕ,ದ್ವಿತೀಯ 5,005/- + ಶಾಶ್ವತ ಫಲಕ, ಸೆಮಿಫೈನಲ್ ಹಂತದಲ್ಲಿ ಸೋತ ಎರಡು ತಂಡಗಳಿಗೆ 1,001/- + ಶಾಶ್ವತ ಫಲಕ ನೀಡಲಾಗುತ್ತದೆ. ಹಾಗೆಯೇ ಆರ್ಥಿಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ಸಮಾಜದ ವಿವಿಧ ಕ್ಷೇತ್ರದ ಸಾಧಕರಿಗೆ ಗೌರವಾರ್ಪಣೆ ಸಲ್ಲಿಸುವ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಕರು ತಿಳಿಸಿದ್ದಾರೆ.