ಕುಂದಾಪುರ(ಮಾ.,08): ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಕುಂದಾಪುರ ಸಿಟಿ ಜೆಸಿಐ ಹಾಗೂ ಕಾಲೇಜಿನ ಎನ್.ಎಸ್.ಎಸ್. ಘಟಕ, ಮಹಿಳಾ ಸಬಲೀಕರಣ ಘಟಕದ ಆಶ್ರಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಾದ ಶರ್ಮಿಳಾ ಬುತೆಲ್ಲೋ (ಉದ್ಯಮ ಕ್ಷೇತ್ರ), ಜ್ಯೋತಿ (ಕೃಷಿ ಮತ್ತು ಹೈನುಗಾರಿಕೆ), ಶ್ರೀನಿಧಿ ಖಾರ್ವಿ(ಸಾಂಸ್ಕೃತಿಕ), ಅಂಕಿತಾ ಸಿ. ಶೇಟ್ (ಬಹುಮುಖ ಪ್ರತಿಭೆ), ಪ್ರತೀಕ್ಷಾ (ಶೈಕ್ಷಣಿಕ), ದಿವ್ಯಾ (ಕ್ರೀಡೆ) ಇವರನ್ನು ಸನ್ಮಾನಿಸಲಾಯಿತು
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕಿ ಸಂಧ್ಯಾ ನಾಯಕ್ ಮಾತನಾಡಿ ಸಂವಿಧಾನದ ಮಹತ್ವ ಮತ್ತು ಲಿಂಗ ಸಮಾನತೆಯ ಕುರಿತು ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜೆಸಿಐ ಕುಂದಾಪುರ ಸಿಟಿಯ ಅಧ್ಯಕ್ಷೆ ಡಾ| ಸೋನಿ ಡಿ’ಕೋಸ್ಟ ಸ್ವಾಗತಿಸಿದರು. ಜೆಸಿಐ ಕುಂದಾಪುರ ಸಿಟಿಯ ಸ್ಥಾಪಕಾಧ್ಯಕ್ಷ ಹುಸೈನ್ ಹೈಕಾಡಿ ಪ್ರಸ್ತಾವಿಸಿ, ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಆಶಯ ನುಡಿಗಳನ್ನಾಡಿದರು. ಜೇಸಿ ಪ್ರೇಮಾ ಡಿ ಚುನ್ಹಾ, ಜೇಸಿ ಸೌರಭಿ ಪೈ, ಮೆಬಲ್ ಡಿ’ಸೋಜ, ಉಪನ್ಯಾಸಕ ಯೋಗೀಶ್ ಶ್ಯಾನುಭೋಗ್, ವಿದ್ಯಾರ್ಥಿಗಳಾದ ವೈಷ್ಣವಿ ಎಮ್.ಎಸ್., ಶ್ರೀನಾಭ ಉಪಾಧ್ಯ ಸನ್ಮಾನಿತರನ್ನು ಪರಿಚಯಿಸಿದರು.
ಈ ಸಂದರ್ಭ ಜೇಸಿಐ ವಲಯ ಅಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ ಹಾಗೂ ಜೇಸಿಐ ಪದಾಧಿಕಾರಿಗಳು ಉಪಸ್ಥಿತರಿದ್ದರು.ವಿದ್ಯಾರ್ಥಿನಿ ಶ್ರೀನಿಧಿ ಖಾರ್ವಿ ಭಾವಗೀತೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ವೀಣಾ ವಿ. ಭಟ್ ವಂದಿಸಿದರು. ಎನ್.ಎಸ್.ಎಸ್. ಸಹ ಕಾರ್ಯಕ್ರಮಾಧಿಕಾರಿ ದೀಪಾ ಪೂಜಾರಿ ನಿರೂಪಿಸಿದರು.