ಕೋಟೇಶ್ವರ (ಮಾ.27): ಮೌಲ್ಯಯುತ, ಪಠ್ಯ ಪಠ್ಯೇತರ ರಂಗದಲ್ಲಿಯೂ ಶಿಸ್ತುಬದ್ದ ಶಿಕ್ಷಣವನ್ನು ನೀಡಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ದಾರಿದೀಪವಾಗಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗೆ ಪೂರಕವಾಗುವಂತಹ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಒಂದಾದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಇತ್ತೀಚೆಗೆ ನಡೆಯಿತು.
ಸುಜ್ಞಾನ ಎಜುಕೇಶನ್ ಟ್ರಸ್ಟ ನ ಅಧ್ಯಕ್ಷರಾದ ಶ್ರಿ ರಮೇಶ್ ಶೆಟ್ಟಿಯವರು ಸಮಾರಂಭದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ “ವಿದ್ಯಾರ್ಥಿಗಳು ಪರೀಕ್ಷೆಯ ಸಂದರ್ಭದಲ್ಲಿ ಹೆಚ್ಚಿನ ಸಮಯ ಹಾಳು ಮಾಡದೇ ಅದನ್ನು ಓದಲು ಮೀಸಲಿಟ್ಟು ಸಾಧಕರಾಗಬೇಕು,ನಮ್ಮ ಶಿಕ್ಷಣ ಸಂಸ್ಥೆಯು ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾಕ್ಷೇತ್ರದಲ್ಲಿ ಹೆಸರು ಮಾಡಿದ್ದು ಎಕ್ಸಲೆಂಟ್ ಎಂದರೆ ಶೈಕ್ಷಣಿಕ ಪ್ರಗತಿಯ ಜ್ಞಾನ ದೇಗುಲವಾಗಿದೆ” ಎಂದು ಹೇಳಿದರು.
ಸುಜ್ಞಾನ ಎಜುಕೇಶನ್ ಟ್ರಸ್ಟ ನ ಖಜಾಂಚಿಯಾದ ಶ್ರಿಯುತ ಭರತ್ ಶೆಟ್ಟಿಯವರು ಪ್ರಸ್ತಾವಿಕ ನುಡಿಗೈಯುತ್ತಾ “ವಿದ್ಯಾರ್ಥಿಗಳು ತಮ್ಮ ಬೀಳ್ಕೊಡುಗೆ ಸಮಾರಂಭವನ್ನು ಸಂಭ್ರಮಿಸುವoತೆ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಸಂಭ್ರಮಿಸಬೇಕು ಅವರ ಮುಂದಿನ ಜೀವನದ ಗುರಿ ಸ್ಪಷ್ಟವಾಗಿದ್ದಾಗ ಏಕಾಗ್ರತೆಯು ಸಾಧ್ಯವಾಗುತ್ತದೆ ಎಂದರು.
ಎಕ್ಸಲೆಂಟ್ನ ಪ್ರಾಂಶುಪಾಲರಾದ ಶ್ರಿಯುತ ಅಗಸ್ಟಿನ್ ರವರು “ವಿದ್ಯಾರ್ಥಿಗಳ ಜೀವನದಲ್ಲಿ 10ನೇತರಗತಿ ಮಹತ್ತರವಾದ ಘಟ್ಟವಾಗಿದೆ. ಶಿಸ್ತು ಬದ್ಧವಾದ ಅಧ್ಯಯನದಿಂದ ಯಶಸ್ಸು ಸಾಧ್ಯವೆಂದು ವಿದ್ಯಾರ್ಥಿಗಳನ್ನು ಹರಸಿದರು”. ಶಿಕ್ಷಕರ ಪರವಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶ್ರೀಮತಿ ಪ್ರೇಮಾ ಮತ್ತು ಶ್ರೀಮತಿ ಸುದಕ್ಷಿಣಾ ಆರ್. ಉಡುಪ ರವರು ಶುಭ ಹಾರೈಸಿದರು. ಕನ್ನಡ ಉಪನ್ಯಾಸಕರಾದ ಗುರುಪ್ರಸಾದ್ ರವರು ವಿದ್ಯಾರ್ಥಿಗಳಿಗೆ ಪರೀಕ್ಷೆಯ ಪೂರ್ವತಯಾರಿ ಹೇಗಿರಬೇಕು ಎಂದು ತಮ್ಮ ದಿಕ್ಸೂಚಿ ಭಾಷಣದಲ್ಲಿ ತಿಳಿಸಿದರು.
10ನೇ ತರಗತಿ ವಿದ್ಯಾರ್ಥಿಗಳಾದ ಶಮನ, ಸ್ವಸ್ತಿಕ್ ರವರು ವಿದ್ಯಾರ್ಥಿ ಜೀವನದ ಅನುಭವವನ್ನು ಹಂಚಿಕೊoಡರು. ಆದ್ಯಾ, ತೃಪ್ತಿಕ್ ಗಾನದೊಂದಿಗೆ ಸಭಿಕರನ್ನು ರಂಜಿಸಿದರು. ಶ್ರೀಮತಿ ಸರೋಜಿನಿ ಆಚಾರ್ಯ ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಚಿತ್ರಕಲಾ ಶಿಕ್ಷಕ ಗಿರೀಶ್ ರವರು ಕಾರ್ಯಕ್ರಮ ಸಂಯೋಜಿಸಿದರು. ಮುಖ್ಯ ಶಿಕ್ಷಕಿಯಾದ ಶ್ರೀಮತಿ ಸುರೇಖಾ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.