ಗಂಗೊಳ್ಳಿ(ಏ,01): ಡಾ.ಬಿ.ಆರ್ ಅಂಬೇಡ್ಕರ್ ಯುವಕ ಮಂಡಲ(ರಿ),ಅಮೃತಾ ಯುವತಿ ಮಂಡಲ (ರಿ) ಮತ್ತು ಅರ್ಚನಾ ಮಹಿಳಾ ಮಂಡಲ ಮೇಲ್ ಗಂಗೊಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ 132ನೇ ಜನ್ಮ ದಿನಾಚರಣೆಯ ಪ್ರಯುಕ್ತ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ವಿಷಯ : ನನ್ನ ಅರಿವಿನ ಅಂಬೇಡ್ಕರ್.
ಸ್ಪರ್ಧೆಯ ನಿಯಮಗಳು
*2022-23 ನೇ ಶೈಕ್ಷಣಿಕ ಸಾಲಿನಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಪದವಿಪೂರ್ವ ಮತ್ತು ಪದವಿ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದು.
*ಪ್ರಬಂಧವನ್ನು ಎ4 ಅಳತೆಯ ಪುಟದಲ್ಲಿ ಮೂರು ಪುಟಗಳಿಗೆ ಮೀರದಂತೆ ಸ್ವ ಹಸ್ತಾಕ್ಷರದಲ್ಲಿ ಕನ್ನಡದಲ್ಲಿ ಬರೆಯಬೇಕು. ಮೂರನೇ ಪುಟದ ಹಿಂಬದಿಯಲ್ಲಿ ಸ್ಪರ್ಧಿಗಳು ತಮ್ಮ ಪೂರ್ಣ ಹೆಸರು, ಊರು. ತರಗತಿ ,ಮೊಬೈಲ್ ನಂಬರ್ ಮತ್ತು ತಾವು ಕಲಿಯುತ್ತಿರುವ ಕಾಲೇಜಿನ ವಿಳಾಸ ಮತ್ತು ಪ್ರಾಂಶುಪಾಲರ ಸಂಪರ್ಕ ಸಂಖ್ಯೆಯನ್ನು ಕಡ್ಡಾಯವಾಗಿ ಬರೆಯತಕ್ಕದ್ದು.
- ಪ್ರಬಂಧದ ಜೊತೆಯಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ವಿದ್ಯಾರ್ಥಿ ಗುರುತಿನ ಚೀಟಿ ಅಥವಾ ವ್ಯಾಸಂಗ ಪ್ರಮಾಣ ಪತ್ರವನ್ನು ಲಗತ್ತಿಸತಕ್ಕದ್ದು.
- ಮೇಲೆ ನೀಡಿದ ವಿಷಯದ ಕುರಿತಾಗಿ ಮಾತ್ರ ಪ್ರಬಂಧವನ್ನು ಬರೆದು ಕೆಳಗೆ ನೀಡಿರುವ ವಿಳಾಸಕ್ಕೆ ಏಪ್ರಿಲ್ 10-2023 ರ ಒಳಗೆ ತಲುಪುವಂತೆ ಪೋಸ್ಟ್ ಮೂಲಕ ಅಥವಾ ಖುದ್ದಾಗಿ ತಲುಪಿಸಬೇಕು. ತಡವಾಗಿ ಬರುವ ಪ್ರಬಂಧಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.
- ವಿಜೇತರಿಗೆ ಬಹುಮಾನವನ್ನು ದಿನಾಂಕ 19-04-2023ರಂದು ನಡೆಯಲಿರುವ ಡಾ.ಬಿ.ಆರ್ ಅಂಬೇಡ್ಕರ್ ಯುವಕ ಮಂಡಲ(ರಿ)ದ ವಾರ್ಷಿಕೋತ್ಸವ ಕರ್ಯಕ್ರಮದಲ್ಲಿ ನೀಡಲಾಗುವುದು.
ಪ್ರಥಮ ಬಹುಮಾನ – ರೂ. 1000 ಮತ್ತು ಪ್ರಮಾಣ ಪತ್ರ
ದ್ವಿತೀಯ ಬಹುಮಾನ – ರೂ. 500 ಮತ್ತು ಪ್ರಮಾಣ ಪತ್ರ.
ಪ್ರಬಂಧ ಸಲ್ಲಿಸಬೇಕಾದ ವಿಳಾಸ :
ಭಾಸ್ಕರ್ ಹೆಚ್. ಜಿ.
ಗೌರವಾಧ್ಯಕ್ಷರು.
ಡಾ. ಬಿ.ಆರ್. ಅಂಬೇಡ್ಕರ್ ಯುವಕ ಮಂಡಲ.
ಮೇಲ್ ಗಂಗೊಳ್ಳಿ. ಗಂಗೊಳ್ಳಿ. ಕುಂದಾಪುರ ತಾಲೂಕು. ಉಡುಪಿ ಜಿಲ್ಲೆ. 576216.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಭಾಸ್ಕರ್ ಹೆಚ್. ಜಿ.9481751521 ರಂಜಿತ್ : 9535633230