ಬ್ರಹ್ಮಾವರ (ಎ.,06): ಇಲ್ಲಿನ ಜೆಸಿಐ ಬ್ರಹ್ಮಾವರ ಸೇವಾಮೆ ಬ್ರಹ್ಮಾವರ ಸಂಸ್ಥೆಯ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮದ ಅಡಿಯಲ್ಲಿ ಇತ್ತೀಚೆಗೆ ಬ್ರಹ್ಮಾವರದ ಘನ ಮತ್ತು ದ್ರವ ಸಂಪನ್ಮೂಲ ಘಟಕ ದಲ್ಲಿ ಸೇವೆ ಮಾಡುತ್ತಿರುವ 6 ಜನ ಸ್ವಚ್ಚತಾ ಕಾರ್ಯಕರ್ತೆಯರಿಗೆ ಅವರ ಸೇವೆಯನ್ನು ಗುರುತಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ವಾರಂಬಳ್ಳಿ ಗ್ರಾಮ ಪಂಚಾಯತ್ ಅದ್ಯಕ್ಷರಾದ ಶ್ರೀಮತಿ ನಾಗವೇಣಿ ಪಂಡರಿನಾಥ್, ಉಪಾದ್ಯಕ್ಷರಾದ ದೇವಾನಂದ್ ನಾಯಕ್ ಹಂದಾಡಿ ಪಂಚಾಯತ್ ಉಪಾದ್ಯಕ್ಷರಾದ ಶ್ರೀಮತಿ ಶೋಭಾ ಪೂಜಾರಿ , ವಾರಂಬಳ್ಳಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀಮತಿ ಫರ್ಜಾನ ಎಂ, ಹಂದಾಡಿ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾಗಿರುವ ಶ್ರೀ ಉದಯ ಪೂಜಾರಿ, ವಾರಂಬಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾಗಿರುವ ಶ್ರೀ ರಾಜೇಶ್ ಶೆಟ್ಟಿ ಮತ್ತು ಶ್ರೀ ಎಸ್ ನಾರಾಯಣ,ಹಾಗೂ ವಾರಂಬಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಉಮಾ ಬಾಯಿ ಶ್ರೀಮತಿ ಸಂದ್ಯಾ, ಎಸ್ ಆರ್ ಎಲ್ ಎಂ ನ ಮುಖ್ಯ ಕಾರ್ಯನಿವಾಹಣಾಧಿಕಾರಿ ಶ್ರೀಮತಿ ವಿಜಯಲಕ್ಷ್ಮೀ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜೆಸಿಐ ಬ್ರಹ್ಮಾವರ ಸೇವಾಮೆ ಸಂಸ್ಥೆಯ ಅಧ್ಯಕ್ಷರಾಗಿರುವ ಕೃಷ್ಣಮೂರ್ತಿ ಹೈಕಾಡಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸ್ವಾಗತಿಸಿದರು. ವಾರಂಬಳ್ಳಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರು ಮಾತನಾಡಿ ಕಾರ್ಯಕ್ರಮದಲ್ಲಿ ಸ್ವಚ್ಚತಾ ಕಾರ್ಯಕರ್ತರನ್ನು ಗುರುತಿಸಿ ಸನ್ಮಾನಿಸಿರುವುದು ಉತ್ತಮ ಕೆಲಸವಾಗಿದ್ದು ನಿರಂತರವಾಗಿ ಪ್ರೋತ್ಸಾಹವಿರಲಿ ಎಂದರು.

ಜೆಸಿಐ ವಲಯ 15ರ ಪೂರ್ವ ನಿರ್ದೆಶಕರಾಗಿರುವ ಶ್ರೀ ಸುನಿಲ್ ,ಬ್ರಹ್ಮಾವರ ಸೇವಾಮೆ ಖಜಾಂಜಿ ಶ್ರೀಮತಿ ಜ್ಯೋತಿ ರಾವ್, ಶ್ರೀ ಶಶಿಕಾಂತ್ ಜೆಜೆಸಿ ಅಧ್ಯಕ್ಷರಾದ ವೈಷ್ಣವಿ ಹೈಕಾಡಿ, ಕಾರ್ಯದರ್ಶಿ ಕಾವ್ಯ ಹೆಬ್ಬಾರ್, ನಿಶ್ಮೀತಾ, ಅಮಿತ, ಸಹನಾ ಜೆ ಇವರು ಉಪಸ್ಥಿತರಿದ್ದರು. ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಘ ಉಡುಪಿ ಇಲ್ಲಿನ ವಿದ್ಯಾರ್ಥಿಗಳು ಮತ್ತು ಎಸ್ ಆರ್ ಎಲ್ ಎಂ ನ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಶ್ರೀಮತಿ ಸುಮತಿ, ಶ್ರೀಮತಿ ಶಾರದಾ,ಶ್ರೀಮತಿ ಲೀಲಾ, ಶ್ರೀಮತಿ ಕಮಲಿ,ಶ್ರೀಮತಿ ವನಜಾ, ಶ್ರೀಮತಿ ರಾಧಾ ಇವರನ್ನು ಗೌರವಿತವಾಗಿ ಸನ್ಮಾನಿಸಲಾಯಿತು.ಕಾರ್ಯಕ್ರಮದ ಯೋಜನಾಧಿಕಾರಿಗಳು ರೋಷನ್ ಡಿ ಅಲ್ಮೇಡಾ ವಂದಿಸಿದರು.










