ತುಳುನಾಡ ಸಿರಿ ಯ ಬದುಕಿನ ಪೂರ್ವಾರ್ಧ ಭಾಗವೆಲ್ಲಾ ನಡೆದಿರುವುದು ಕರಾವಳಿಯ ಕುಂದಾಪುರದ ಪರಿಸರದಲ್ಲೇ. ಕುಲದೈವ ಬ್ರಹ್ಮರ ವರಪ್ರಸಾದದಿಂದ ಸಿರಿಯ ಜನನವಾಯಿತೆಂಬ ಮಾಹಿತಿ ನಮಗೆ ತಿಳಿದುಬರುತ್ತದೆ. ಹೊದೆದ ಬಟ್ಟೆಯಲ್ಲಿ ಬಿರ್ಮಾಳ್ವರಿಗೆ ನೀಡಿದ ಪ್ರಸಾದವು ಹಿಂಗಾರದ ಹಾಳೆ ( ಪಿಂಗಾರದ ಹೂವಿನ ಗೊಂಚಲು ) ಮತ್ತು ಗಂಧದ ಗುಳಿಗೆ, ಈ ಪ್ರಸಾದದಲ್ಲಿ ಬಿರ್ಮಾಳ್ವರಿಗೆ ಹೆಣ್ಣು ಮಗುವೊಂದು ಜನಿಸುತ್ತದೆ. ಈ ಹೆಣ್ಣು ಮಗುವಿಗೆ ಸಿರಿ, ಅಕ್ಕೆರಸು ಸಿರಿ, ಸತ್ಯನಾಪುರದ ಸಿರಿ, ಸತ್ಯಮಾಲೋಕದ ಸಿರಿ, ಸತ್ಯದ ಮಗಳು ಸಿರಿ ಎಂದು ಬೇರೆ ಬೇರೆ ಹೆಸರಿಂದ ಕರೆದಿದ್ದಾರೆ.
*ನಾಗಬ್ರಹ್ಮ* ಬ್ರಹ್ಮರ ಮತ್ತು ನಾಗ ಬ್ರಹ್ಮರ ಆರಾಧನೆಯ ಬಹುತೇಕ ಸಾಕ್ಷಿಗಳು ಕುಂದಾಪುರ ತಾಲೂಕಿನ ಪರಿಸರದ ಬಹಳಷ್ಟು ಶಾಸನಗಳಲ್ಲಿ ಲಭ್ಯವಿದೆ. ಈ ಶಾಸನಗಳಲ್ಲಿ ಹೆಚ್ಚಿನವು ದಾನ ಶಾಸನಗಳಾಗಿವೆ. ಬ್ರಹ್ಮರನ್ನು ಮತ್ತು ನಾಗ ಬ್ರಹ್ಮರನ್ನು ಭೂದಾನಕ್ಕೆ ಸಂಬಂಧಿಸಿದಂತೆ ಸಾಕ್ಷಿಯಾಗಿರಿಸಿರುವುದು ಬಹುತೇಕ ಶಾಸನಗಳಲ್ಲಿ ಕಂಡುಬರುತ್ತಿದೆ. ಅಲ್ಲದೆ ಇಲ್ಲಿ ನಾಗಬ್ರಹ್ಮರನ್ನು ನಾಗರೆಂದು ಎಂದು ಮತ್ತು ಬ್ರಹ್ಮರನ್ನು ಬ್ರಂಹ್ಮರು ಎಂದು ನಮೂದಿಸಲಾಗಿದೆ. ನಾಗಬ್ರಹ್ಮರನ್ನು ನಾಗರು ಎಂದು ಕರೆದಿರುವುದು ಅಲ್ಲದೆ ನಾಗರನ್ನು ಮತ್ತು ಬ್ರಹ್ಮರನ್ನು ಆಯಾ ಪ್ರಾದೇಶಿಕವಾದ ಹೆಸರಿಂದ ಕರೆದಿರುವುದು ಗಮನಿಸಬಹುದಾದ ವಿಚಾರವಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಬ್ರಹ್ಮರ ಆರಾಧನೆ ಪ್ರಾಚೀನ ಬಸೂರಿನ ಪರಿಸರದ ವಿವಿಧ ಪ್ರದೇಶಗಳಲ್ಲಿ ಬಹು ವ್ಯಾಪಕವಾಗಿತ್ತು. ಎಂಬುದನ್ನು ನಾವು ಗಮನಿಸಬೇಕಾಗಿದೆ. ಶಾಸನಗಳ ಅಧ್ಯಯನದ ದೃಷ್ಟಿಯಿಂದ ನೋಡಿದರೆ ಕುಂದಾಪುರ, ಬೈಂದೂರು, ಬಸೂರು ಮತ್ತು ಬಾರ್ಕೂರಿನ ಶಾಸನಗಳಲ್ಲಿ ಬ್ರಹ್ಮರ ಕುರಿತು ಬಹಳಷ್ಟು ಮಾಹಿತಿಗಳಿವೆ.
ಈ ನಿಟ್ಟಿನಲ್ಲಿ ಕುಂದಾಪುರದ ಬೇಳೂರಿನ ಗುಳ್ಳಾಡಿಯಲ್ಲಿ ದೊರಕಿರುವ ( ಸುಮಾರು 13ನೇ ಶತಮಾನ) ಶಾಸನವು ಬಹಳ ಪ್ರಾಮುಖ್ಯವಾಗಿದೆ.ಗುಳ್ಳಾಡಿಯಲ್ಲಿ ದೊರಕಿರುವ ಅಳುಪರ ಚಕ್ರವರ್ತಿಯಾಗಿದ್ದ ಚಿಕ್ಕಾಯಿ ತಾಯಿಯ ( ಕಿಕ್ಕಾಯಿ ದೇವಿ) ಕಾಲದ ( ಸುಮಾರು 13ನೇ ಶತಮಾನ) ಶಾಸನದಲ್ಲಿ ಬಂದಿರುವ ಉಲ್ಲೇಖದಂತೆ ಗುಳ್ಳಾಡಿಯ ಚಿತ್ತೇರಿ ಬ್ರಹ್ಮನ ಸನ್ನಿಧಿಗೆ 15 ಹೊನ್ನ ದಾರೆಯೆರೆದು ದಾನ ಮಾಡಿರುವ ವಿಚಾರವು ಕಂಡುಬರುತ್ತದೆ.
*ಚಿತ್ತೇರಿ ಪರಿಕಲ್ಪನೆ* ಬ್ರಹ್ಮರ ಆಲಡೆಗಳನ್ನು ತುಳುನಾಡಿನ ಉತ್ತರ ಭಾಗದಲ್ಲಿ ಚಿತ್ತೇರಿಗಳೆಂದು ಕರೆಯುತ್ತಾರೆ. ಈ ಚಿತ್ತೇರಿಗಳ ದೈವ ಸಂಕೀರ್ಣದಲ್ಲಿ ವ್ಯತ್ಯಾಸಗಳಿಲ್ಲದಿದ್ದರೂ, ನಂದಿಗೋಣನ ಬದಲಿಗೆ ಹಾಯ್ದುಳಿ ಮತ್ತು ಸಿರಿ ದೈವಗಳ ಬದಲಿಗೆ ಚಿಕ್ಕು ಪರಿವಾರದ ದೈವಗಳಿರುತ್ತವೆ. ಚಿತ್ತೇರಿ ಎಂಬುದು ಆಲಡೆಯನ್ನೇ ಪ್ರತಿನಿಧಿಸುವುದರಿಂದ, ಅದು ಆಲಡೆಯ ರೂಪದಲ್ಲೇ ಇದೆ. ಜಂಬಿಟ್ಟಿಗೆಗಳಿಂದ ರಚಿಸಿದ ವಿವಿಧ ನೆಲೆಗಳ ಕಟ್ಟಡವನ್ನು ಚಿತ್ತೇರಿಯೆಂದು ಕರೆದಿರಬಹುದು. ಚಿಟ್ಟೆ ಎಂಬುದು ಎತ್ತರದ ಜಗಲಿಯಂತಹ ಪ್ರದೇಶವೆಂಬ ಅರ್ಥ ನೀಡುವುದರಿಂದ ಚಿಟ್ಟೆ ಮತ್ತು ಏರಿ ಸಂಯುಕ್ತವಾಗಿ ಚಿತ್ತೇರಿ ಆಗಿರಬಹುದು. ಆಲಡೆಗಳ ನಿರ್ಮಾಣವು ನೆಲೆಗಳ ರೂಪದಲ್ಲಿರುವುದರಿಂದ ಅದು ಎತ್ತರಕ್ಕೆ ಕಟ್ಟಿದ ಕಟ್ಟಡದ ಮಾದರಿಯಲ್ಲಿದೆ. ಬೆರ್ಮರ್ ಗುಂಡವನ್ನು ಏಳುನೆಲೆಗಳ ಗುಂಡವೆಂದು ಕರೆಯುತ್ತಾರೆ. ಹಾಗಾಗಿ ತುಳುನಾಡಿನ ಉತ್ತರದ ಆಲಡೆಗಳನ್ನು ಚಿತ್ತೇರಿಗಳೆಂದು ಕರೆದಿರುವ ಸಾಧ್ಯತೆಗಳಿವೆ ಎಂಬುದಾಗಿ ತುಳು ಜಾನಪದ ವಿದ್ವಾಂಸರಾದ ಪ್ರೊ. ಶ್ರೀ ಪುರುಷೋತ್ತಮ್ ಬಲ್ಯಾಯರು ಅಭಿಪ್ರಾಯ ಪಟ್ಟಿರುತ್ತಾರೆ.
*ಅಣ್ಣ ತಂಗಿ* ಯ ಶಾಸನ ಗುಳ್ಳಾಡಿಯ(ಗುಳಹಡಿಯ)ಚಿತ್ತೇರಿ(ಚಿತ್ತಾರಿ ಬ್ರಂಮರಿಗೆ)ಬ್ರಹ್ಮಲಿಂಗೇಶ್ವರ ಬಳಿ ಇರುವ ಅಕ್ಕ ತಂಗಿಯ ಶಾಸನವೆಂದೂ ಕರೆದರೂ ಸಹಾ ಹೊಯ್ಸಳ ಅರಸ ವೀರ, ಬಳ್ಳಾಲ 3 ರ ಪಟ್ಟದ ಪಿರಿಯರಸಿ, ಆಳುಪರ ಚಿಕ್ಕಾಯಿ ತಾಯಿ(ಕಿಕ್ಕಾಯಿ)ದೇವಿ ಅಂದರೆ ಆಳುಪರ ರಾಜ ಸೋಯಿ ದೇವ ಅಳುಪೇಂದ್ರ(1315-1335)ರ ತಂಗಿ ಚಿಕ್ಕಾಯಿ ತಾಯಿ ದೇವಿ ಶಾಸನವಾಗಿದೆ. ಎಡ ಭಾಗದ ಶಾಸನ ಆಳುಪರ ರಾಜ ಸೋಯಿದೇವ ಅಳುಪೇಂದರದ್ದಾಗಿದ್ದು,ಬಲ ಭಾಗದ ಶಾಸನ ತಂಗಿ ಚಿಕ್ಕಾಯಿ ತಾಯಿ ಶಾಸನವಾಗಿದೆ. ಈ ಕಾರಣದಿಂದ ಅಣ್ಣ ತಂಗಿಯ ಶಾಸನವೆಂದು ಕರೆಯಲಾಗಿದೆ ಎಂದು ಪ್ರೊ.ಟ ಮುರುಗೇಶಿ ಸಹ
ಪ್ರಾಧ್ಯಾಪಕರು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜು ಶಿರ್ವ ಇವರು ಅಭಿಪ್ರಾಯ ಪಟ್ಟಿದ್ದಾರೆ.
*ಆಳುಪರ ಆರಾಧ್ಯ ದೈವ* ಅಳುಪರ ಆರಾಧ್ಯ ದೈವ ಬ್ರಹ್ಮರು ಎಂಬುದಕ್ಕೆ ಸಾಕಷ್ಟು ಸಾಕ್ಷಿಗಳಿವೆ. ಬ್ರಹ್ಮ ಪಿತಾಮಹನಿಂದ ರಕ್ಷಿಸಲ್ಪಟ್ಟ ಕುಲ ಅಲುಪರದ್ದು ಎಂಬುದನ್ನು ಕ್ರಿ. ಶ. 8ನೇ ಶತಮಾನದ ಬೆಳಣ್ಣು ತಾಮ್ರ ಶಾಸನವು ಪುಷ್ಟಿಕರಿಸುತ್ತದೆ. ಪಾಂಡ್ಯ ಕುಲ ವ್ರದ್ಧಿಸಲಿ ಎಂಬ ಆಶಯವೂ ಈ ಶಾಸನದ ಕೊನೆಯಲ್ಲಿದೆ. ಈ ನಿಟ್ಟಿನಲ್ಲಿ ಬ್ರಹ್ಮರು ಅಳುಪರಸರು ನಂಬಿಕೊಂಡು ಬಂದಿರುವ ಆದಿದೈವ ಎಂದು ತಿಳಿಯಬಹುದಾಗಿದೆ.
ಗುಳ್ಳಾಡಿಯ ಶಾಸನವೂ ಚಕ್ರವರ್ತಿ, ಪ್ರಧಾನರು , ಸಾಹಿಣಿ ಮತ್ತು ಎರಡು ಕೋಲಬಳಿ (ಸೈನ್ಯದ) ಉಪಸ್ಥಿತಿಯಲ್ಲಿ, ಆ ಕಾಲದಲ್ಲಿ ಪ್ರಸಿದ್ಧ ಗುಳ್ಳಾಡಿಯ ಚಿತ್ತೇರಿಯ ಬ್ರಹ್ಮರಿಗೆ ನೀಡಿದ ದಾನವನ್ನು ತಿಳಿಸುತ್ತದೆ. ಈ ಎಲ್ಲಾ ಕಾರಣದಿಂದ ಗುಳ್ಳಾಡಿಯ ಚಿತ್ತೇರಿಯು ಪುರಾತನ ಮೂಲ ಆಲಡೆಯಾಗಿರುವ ಎಲ್ಲಾ ಸಾಧ್ಯತೆಗಳಿವೆ ಎಂಬುದನ್ನು ಪ್ರೊ. ಶ್ರೀ ಪುರುಷೋತ್ತಮ ಬಲ್ಯಾಯರು ಅಭಿಪ್ರಾಯ ಪಟ್ಟಿರುತ್ತಾರೆ.ಇಂದಿಗೂ ಗುಳ್ಳಾಡಿಯ ಹೊಸಮನೆಯ ಕುಟುಂಬಸ್ಥರು ನಂಬಿಕೊಂಡು ಬಂದಿರುವ ಸಾನಿಧ್ಯವು ಇದಾಗಿದ್ದು, ಅನುವಂಶೀಯ ಆಡಳಿತ ಮುಕ್ತೇಸರರು ಡಾ. ರಘುರಾಮ ಶೆಟ್ಟಿಯವರು ಸೇವೆ ಸಲ್ಲಿಸುತ್ತಿದ್ದಾರೆ.
*ಅನುವಂಶೀಯ ಆಡಳಿತ ಮುಕ್ತೇಸರರು ಹೇಳಿಕೆ*:
” ಇದೊಂದು ಪುರಾತನ ದೈವಸ್ಥಾನವಾಗಿದ್ದು, ತಮ್ಮ ಪೂರ್ವಜರು, ಹೊಸಿಮನೆ ಕುಟುಂಬಸ್ಥರು ಹಾಗೂ ಸ್ಥಳೀಯ ಭಕ್ತಾಭಿಮಾನಿಗಳು ಅಪಾರ ಶ್ರದ್ಧೆಯಿಂದ ನಂಬಿಕೊಂಡು ಬಂದಿದ್ದ ಈ ದೈವಸನ್ನಿಧಿಯನ್ನು ಹೇರ್ಗೊದ್ಧಾರ ಮಾಡುವ ಚಿಂತನೆಯು ದೇವ ಪ್ರಶ್ನೆಯಲ್ಲಿ ಕಂಡುಬಂದಂತೆ ಹಾಗೂ ಆಡಳಿತ ಮಂಡಳಿ ನಿರ್ಧರಿಸಿದಂತೆ ಕಾರ್ಯಕೈಂಕರ್ಯ ನಡೆಸಲು ಸಾರ್ವಜನಿಕರ ಸಹಕಾರವನ್ನು ಅನುವಂಶೀಯ ಆಡಳಿತ ಮಂಡಳಿ ಮುಕ್ತೆಸರರು ಡಾ. ರಘುರಾಮ ಶೆಟ್ಟಿ, ಗುಳ್ಳಾಡಿ ಹೊಸಿಮನೆ, ಇವರು ವಿನಂತಿಯನ್ನು ಮಾಡಿರುತ್ತಾರೆ.
ಇವರೊಂದಿಗೆ ಅಧ್ಯಯನಕ್ಕೆ ಸ್ಥಳೀಯವಾಗಿ ಶ್ರೀ ರಮೇಶ್ ಶೆಟ್ಟಿ ಗುಳ್ಳಾರಿ,ಶ್ರೀ ರಘುರಾಮ ಶೆಟ್ಟಿ ಗುಳ್ಳಾಡಿ(ಅಧ್ಯಾಪಕರು) ಶ್ರೀ ಜಯಶೀಲ ಶೆಟ್ಟಿ ಗುಳ್ಳಾಡಿ,ಶ್ರೀ ಮಹಾಬಲ ಶೆಟ್ಟಿ,ಶ್ರೀ ವಿಠಲ ಶೆಟ್ಟಿ,ಶ್ರೀ ಅಜಿತ್ ಶೆಟ್ಟಿ, ಸಹಕರಿಸಿದರು.
ಅಧ್ಯಯನಕ್ಕೆ ಮಾರ್ಗದರ್ಶನವನ್ನು ಶ್ರೀ ಡಾ.ಎಮ್.ಕೊಟ್ರೇಶ್ (ಇತಿಹಾಸ ವಿಭಾಗದ ಮುಖ್ಯಸ್ಥರು ತುಮಕೂರು ವಿಶ್ವವಿದ್ಯಾಲಯ) ಪ್ರೊ.ಟಿ.ಮುರುಗೇಶ್ (ಸಹ ಪ್ರಾಧ್ಯಾಪಕರು ಮರಾಶತ್ವ ಶಾಸ್ತ್ರ ವಿಭಾಗ ಎಮ್.ಎಸ್.ಆರ್.ಎಸ್.ಕಾಲೇಜ ಶಿರ್ವ),ಪ್ರೊ.ಪುರುಷೋತ್ತಮ ಬಲ್ಯಾಯ (ತುಳು ಜಾನಪದ ವಿದ್ವಾಂಸರು) ಇವರು ನೀಡುತ್ತಿದ್ದಾರೆ. ಶ್ರೀ ಸುನೀಲ್ ಕುಮಾರ್ ಗುಲ್ವಾಡಿ, ಶ್ರೀ ಮಹೇಶ್ ಕಿಣಿ (ಖಜಾಂಚಿ ಭಾ.ಇ.ಸ.ಸ.ಕ ಉಡುಪಿ ಜಿಲ್ಲೆ) ಕುಮಾರಿ ಅನುಷ ಶೆಟ್ಟಿ,(ಕಾಲೇಜು ಮಹಿಳಾ ಪ್ರಮುಖರು ಭಾ.ಸ.ಸ.ಕ ಉಡುಪಿ ಜಿಲ್ಲೆ) ಶ್ರೇಯಾಸ್ ಭಟ್ ,ಅಧ್ಯಯನಕ್ಕೆ ಸಹಕಾರ ನೀಡಿರುತ್ತಾರೆ.
ಕೃಪೆ: ತುಳುನಾಡು ವಾರ್ತೆ,ಬೆಳ್ಳಣ್ಣು ತಾಮ್ರ ಶಾಸನ, ಮಾಹಿತಿ:ಹೊಸಿಮನೆ ಕುಟುಂಬಸ್ಥರು ಗುಳ್ಳಾಡಿ
ಶ್ರೀ ಪ್ರದೀಪ ಕುಮಾರ್ ಬಸೂರು
ಜಿಲ್ಲಾ ಸಂಚಾಲಕರುಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕ
ಉಡುಪಿ ಜಿಲ್ಲೆ