ಕುಂದಾಪುರ(ಮೇ16): ಮೂಡ್ಲಕಟ್ಟೆಯ ಐ.ಎಂ.ಜೆ ವಿದ್ಯಾ ಸಂಸ್ಥೆಯ ಅಂಗಸಂಸ್ಥೆಯಾದ ಐ.ಎಂ.ಜೆ ವಿಜ್ಞಾನ ಮತ್ತು ವಾಣಿಜ್ಯ ವಿದ್ಯಾ ಸಂಸ್ಥೆ ಯ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಮಹಿಳೆಯರ ತ್ರೋ ಬಾಲ್ ಪಂದ್ಯಾಟ ಇದೇ ಮೇ 17 ರಿಂದ 18ರ ತನಕ ನಡೆಯಲಿದೆ.
ಉಡುಪಿ ಜೋನ್ ಮಟ್ಟದ ಪಂದ್ಯಗಳನ್ನು ಆಯೋಜಿಸುವುದರೊಂದಿಗೆ ಅದರ ಮುಂದಿನ ಹಂತವಾಗಿ ಉಡುಪಿ-ಮಂಗಳೂರಿನ ಅಂತರ್ ಜೋನ್ ಪಂದ್ಯಗಳನ್ನು ಸಂಸ್ಥೆ ನಡೆಸಿಕೊಡಲಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರತಿಭಾ ಎಂ.ಪಟೇಲ್ ಹಾಗೂ ಉಪ ಪ್ರಾಂಶುಪಾಲರಾದ ಜಯಶೀಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.