ಮಂಗಳೂರು ವಿಶ್ವವಿದ್ಯಾನಿಲಯದ ಇನ್ ಕ್ಯೂಬೇಶನ್ ಸೆಂಟರ್ ಇವರ ಆಶ್ರಯದಲ್ಲಿ ಫೆಬ್ರವರಿ 12 ಮತ್ತು 13 ರಂದು “Recent Trends in Artificial intelligence & Machine Learning using Python” ಎನ್ನುವ ವಿಷಯದ ಕುರಿತು ಎರಡು ದಿನಗಳ ವಿಶೇಷ ಕಾರ್ಯಗಾರ ನಡೆಯಲಿದ್ದು, ಈ ವಿಶೇಷ ಕಾರ್ಯಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಎನ್.ಎಮ್.ಎ.ಎಮ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ನಿಟ್ಟೆ ಇದರ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಬಾಲಾಜಿ ಹಾಗೂ ಎಚ್ .ಸಿ .ಎಲ್ ಟೆಕ್ನೋಲಜಿಸ್ ಬೆಂಗಳೂರು ಇದರ ಲೀಡ್ ಡಾಟಾ ವಿಜ್ಞಾನಿ ಶ್ರೀ ಚೇತನ್ ಶೆಟ್ಟಿ ಆಗಮಿಸಲಿದ್ದಾರೆ. ಆಸಕ್ತ ಪ್ರಾಧ್ಯಾಪಕರುಗಳು, ಸಂಶೋಧನಾ ವಿದ್ಯಾರ್ಥಿಗಳು, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಈ ವಿಶೇಷ ಕಾರ್ಯಗಾರದಲ್ಲಿ ಭಾಗವಹಿಸಬಹುದು ಎಂದು ಮಂಗಳೂರು ವಿಶ್ವವಿದ್ಯಾಲಯದ ಇನ್ ಕ್ಯೂಬೇಶನ್ ಸೆಂಟರ್ ಇದರ ಸಂಯೋಜಕರಾದ ಡಾ. ನವೀನ್ ಕುಮಾರ್ ಎಸ್. ಕೆ. ತಿಳಿಸಿರುತ್ತಾರೆ.
ಈ ಕಾರ್ಯಗಾರದಲ್ಲಿ ಭಾಗವಹಿಸಲಿಚ್ಛಿಸುವವರು, ಕೆಳಗೆ ತಿಳಿಸಿರುವ ಲಿಂಕ್ ಮೂಲಕ ನೊಂದಾಯಿಸಿಕೊಳ್ಳಬಹುದು.
www.mangaloreuniversity.ac.in/muic