ಕುಂದಾಪುರ (ಜು,13) : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಖಿದ್ಮಾ ಫೌಂಡೇಷನ್ ರಾಜ್ಯ ಸಮಿತಿಯ ವತಿಯಿಂದ ಬೆಂಗಳೂರಿನ ಚಾಮರಾಜಪೇಟೆ ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಜು .09 ರಂದು ನಡೆದ ರಾಜ್ಯ ಮಟ್ಟದ ಖಿದ್ಮಾ ಕಾವ್ಯ ಮತ್ತು ಸಾಂಸ್ಕ್ರತಿಕ ಸಂಭ್ರಮ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಾಡಿನ ಪ್ರಸಿದ್ಧ ಗಾಯಕ ಹಾಗೂ ಸಂಘಟಕ ಕನ್ನಡ ಜಾನಪದ ಪರಿಷತ್ ಉಡುಪಿ ಜಿಲ್ಲೆ ಇದರ ಜಿಲ್ಲಾ ಕಾರ್ಯಾಧ್ಯಕ್ಷ ರಾದ ಡಾ.ಗಣೇಶ್ ಗಂಗೊಳ್ಳಿ ಅವರ 33 ವರ್ಷದ ಕಲಾ ಸೇವೆಯನ್ನು ಗುರುತಿಸಿ ಡಾ. ಏ. ಪಿ. ಜೆ ಅಬ್ದುಲ್ ಕಲಾಂ ಪ್ರಶಸ್ತಿಯನ್ನು ಡಾ. ಎಂ. ಎಂ ಭಾಷಾ ನಂದಿ ರವರು ಅತಿಥಿಗಳ ಸಮ್ಮುಖದಲ್ಲಿ ಪ್ರಧಾನ ಮಾಡಿದರು .
ಶ್ರೀ ಬಿ.ಎನ್ ಸುರೇಶ್ ಬಾಬು , ಶ್ರೀಮತಿ ಅಶ್ವಿನಿ ಅಂಗಡಿ , ಶ್ರೀಮತಿ ಆಶಾ ಶಿವು , ಹಾಗೂ ಮಂಜಪ್ಪ ಟಿ , ಶ್ರೀ ಹಾ ಶಿಂ ಬನ್ನೂರು, ಸಂಘಟಕರು ಕಾರ್ಯಕ್ರಮದ ಸಂಯೋಜಕರು ಆದ ಶ್ರೀ ಆಮಿರ್ ಬನ್ನೂರು ಉಪಸ್ಥಿತರಿದ್ದರು.