ಇ . ಸಿ. ಆರ್. ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಮಧುವನ ಇದರ ಎನ್. ಎಸ್. ಎಸ್. ಘಟಕ, ಮಹಿಳಾ ದೌರ್ಜನ್ಯ ತಡೆ ಘಟಕ ಮತ್ತು ಐ.ಕ್ಯೂ.ಎ.ಸಿ ಘಟಕದ ಸಂಯುಕ್ತ ಆಶ್ರಯದಲ್ಲಿ ಜನವರಿ 29 ರಂದು ಸಾಮಾಜಿಕ ಜಾಗೃತಿ ಕಾರ್ಯಕ್ರಮವಾದ “ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ” ವನ್ನು ಆಯೋಜಿಸಲಾಗಿತ್ತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಆಕಾಶ್ ಸವಳಸಂಗ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಶ್ರೀ ಸಂತೋಷ್ ಬಿ .ಪಿ, ಸಬ್ ಇನ್ಸ್ಪೆಕ್ಟರ್ ಆಫ್ ಪೋಲಿಸ್ ಮತ್ತು ಶ್ರೀಮತಿ ಮುಕ್ತ ಬಾಯಿ ಅಸಿಸ್ಟೆಂಟ್ ಸಬ್ಇನ್ಸ್ಪೆಕ್ಟರ್ ಆಫ್ ಪೋಲಿಸ್, ಕೋಟ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತಾ ಮಾರ್ಗಗಳನ್ನು ಪಾಲಿಸುವ ಕುರಿತು ಅರಿವು ಮೂಡಿಸಿದರು. ಶ್ರೀ ಮಿರ್ ತಾಜ್ದಾರ್ ಹುಸೇನ್ ಏವಿಯೇಷನ್ ವಿಭಾಗ ಮುಖ್ಯಸ್ಥರು, ಶ್ರೀಮತಿ ಚಂದ್ರಕಲಾ ಎಸ್ ಉಪಪ್ರಾಂಶುಪಾಲರು, ಪ್ರೊ. ನಟರಾಜ್ ಪ್ರಾಂಶುಪಾಲರು ಕೆನರಾ ಕಾಲೇಜ್ ಆಫ್ ನರ್ಸಿಂಗ್, ಪ್ರೊ. ಅಸಾ ಅಯೋ ಪ್ರಾಂಶುಪಾಲರು, ಸೌಖ್ಯ ಕಾಲೇಜ್ ಆಫ್ ನರ್ಸಿಂಗ್, ಸಂಸ್ಥೆಯ ಎನ್.ಎಸ್.ಎಸ್ ಯೋಜನಾಧಿಕಾರಿ ಶ್ರೀ ಅಶೋಕ್ ಜೋಗಿ, ಸಹ ಯೋಜನಾಧಿಕಾರಿ ಕುಮಾರಿ ನಿಧಿ, ಮಹಿಳಾ ದೌರ್ಜನ್ಯ ಘಟಕದ ಸಂಯೋಜಕರು,ಐಕ್ಯೂಎಸಿ ಸೆಲ್ ಸಂಯೋಜಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಕುಮಾರಿ ವಿಜೇತಾ ಸ್ವಾಗತಿಸಿ, ಕುಮಾರಿ ಮೇಘನಾ ವಂದಿಸಿದರು. ಕುಮಾರಿ ಶ್ರೇಯಾ ಕಾರ್ಯಕ್ರಮವನ್ನು ನಿರೂಪಿಸಿದರು.