ತ್ರಾಸಿ(ಸೆ.18): ಯೋಗ ಕೇವಲ ದೈಹಿಕ ಕಸರತ್ತು ಮಾತ್ರವಲ್ಲದೇ ದೇಹ ಮತ್ತು ಮನಸ್ಸನ್ನು ಸದೃಢಗೊಳಿಸುವ ಒಂದು ಸಾಧನ. ಯೋಗ ಬಲ್ಲವನು ನಿರೋಗಿಯಾಗಿ ಆರೋಗ್ಯಪೂರ್ಣ ಬದುಕನ್ನು ಸಾಗಿಸಬಹುದು ಆ ನಿಟ್ಟಿನಲ್ಲಿ ತ್ರಾಸಿಯಲ್ಲಿ ಆರಂಭಗೊಂಡಿರುವ ಆರಾಧ್ಯ ಯೋಗ ಕೇಂದ್ರದ ಸುದುಪಯೋಗವನ್ನು ಪಡೆದುಕೊಳ್ಳಿ ಎಂದು ಖ್ಯಾತ ಯೋಗ ಗುರು ಸುಬ್ಬಯ್ಯ ದೇವಾಡಿಗ ಅರೆಹೊಳೆ ಹೇಳಿದರು.
ಅವರು ತ್ರಾಸಿ ಕಲ್ಲಾಣಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಆರಾಧ್ಯ ಯೋಗ ಕೇಂದ್ರ ದ ಉದ್ಘಾಟನೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ತರಬೇತಿ ಕೇಂದ್ರವನ್ನು ತ್ರಾಸಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಿಥುನ್ ಎಂ ಡಿ ಬಿಜೂರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಯೋಗ ಗುರು ಸುಬ್ಬಯ್ಯ ದೇವಾಡಿಗ ಅರೆಹೊಳೆಯವರನ್ನು ಸನ್ಮಾನಿಸಲಾಯಿತು.ಅಥರ್ವ ಯೋಗ ಶಾಲೆ ಮೈಸೂರು ಇದರ ಯೋಗ ಶಿಕ್ಷಕ ರೋಶನ್ ಅರೆಹೊಳೆ ಪ್ರಸ್ತಾವಿಕ ಮಾತುಗಳನ್ನಾಡಿದರು.ತ್ರಾಸಿ ಗ್ರಾಮ ಪಂಚಾಯತ್ ಸದಸ್ಯರಾದ ವಿಜಯ್ ಪೂಜಾರಿ,ಪ್ರವೀಣ್ ಮೊಗವೀರ ಗಂಗೊಳ್ಳಿ ಉಪಸ್ಥಿತರಿದ್ದರು. ಆರಾಧ್ಯ ಯೋಗ ಕೇಂದ್ರದ ಮುಖ್ಯಸ್ಥರಾದ ಶ್ರೀ ಸಂದೀಪ ಪೂಜಾರಿ ತ್ರಾಸಿ ವಂದಿಸಿದರು. ಸತೀಶ್ ಗಂಗೊಳ್ಳಿ ಸ್ವಾಗತಿಸಿ ನಿರೂಪಿಸಿದರು.
ತ್ರಾಸಿಯ ಅಂಬೇಡ್ಕರ್ ಭವನದಲ್ಲಿ ಆರಾಧ್ಯ ಯೋಗ ತರಬೇತಿ ಕೇಂದ್ರದ ತರಗತಿಗಳು ನಡೆಯಲಿದೆ ಎಂದು ಸಂಯೋಜಕರಾದ ಯೋಗ ಪಟು ಶ್ರೀ ಸಂದೀಪ್ ಪೂಜಾರಿ ತಿಳಿಸಿದ್ದಾರೆ.