ಕುಂದಾಪುರ( ಸೆ,18): ತೆರೆಮರೆಯಲ್ಲಿ ಹಲವಾರು ಸಮಾಜಮುಖಿ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ.) ಕುಂದಾಪುರ ಸಂಸ್ಥೆ ವತಿಯಿಂದ ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಕುಂದಾಪುರದ ತಲ್ಲೂರಿನ ನಿವಾಸಿ ಮಧುರಾ ಭಂಡಾರಿಯವರ ವೈದ್ಯಕೀಯ ಚಿಕಿತ್ಸೆಗೆ ಸಂಸ್ಥೆಯಿಂದ 5000/-ರೂ ಗಳ ಚೆಕ್ ಸಹಾಯ ಹಸ್ತವನ್ನು ಸೆಪ್ಟೆಂಬರ್ 10 ರಂದು ಕುಂಭಾಶಿಯಲ್ಲಿ ಅವರ ಕುಟುಂಬಕ್ಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಪುಂಡಲೀಕ ಮೊಗವೀರ,ಪದಾಧಿಕಾರಿಗಳಾದ ಮನೀಶ್ ಕುಲಾಲ್, ಶಿವರಾಮ್ ಕೋಡಿ, ಸಂಸ್ಥೆಯ ಪೋಷಕರಾದ ರಾಜು ಮೆಂಡನ್ ಕುಂಭಾಶಿ, ಪ್ರವೀಣ್ ಮೊಗವೀರ ಉಪಸ್ಥಿತರಿದ್ದರು.