ಗಂಗೊಳ್ಳಿ(ಸೆ,28): ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಡುಪಿ ಜಿಲ್ಲೆ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪದವಿಪೂರ್ವ ಕಾಲೇಜು ಕೊಲ್ಲೂರು ಇವರ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಬಾಲಕರ ನೆಟ್ ಬಾಲ್ ಪಂದ್ಯಾಟದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಬಾಲಕರ ತಂಡದಲ್ಲಿ ವೀರೇಶ್, ಚರಣ್, ನಾಗರಾಜ್, ಆದಿತ್ಯ, ಶಮಿತ್, ಯುವರಾಜ್, ರಿತೇಶ್, ನವೀನ್ ಶರಣ್ ಮತ್ತು ಧನುಷ್ ಪ್ರತಿನಿಧಿಸಿದ್ದರು. ದೈಹಿಕ ಶಿಕ್ಷಣ ಶಿಕ್ಷಕರಾದ ನಾಗರಾಜ್ ಶೆಟ್ಟಿ ತರಬೇತಿ ನೀಡಿದ್ದರು. ವಿದ್ಯಾರ್ಥಿಗಳ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಬೋಧಕ ಮತ್ತು ಬೋಧಕೇತರ ಬಳಗವು ಅಭಿನಂಧಿಸಿದೆ.