ಕುಂದಾಪುರ (ಅ. 15): ಜೆ.ಸಿ.ಐ ಕುಂದಾಪುರ ಘಟಕವು ಜೆ.ಸಿ.ಐ ಸಪ್ತಾಹ -2023 ರ ಪ್ರಯುಕ್ತ ‘ಕಾಮನಬಿಲ್ಲು’ ಎಂಬ ಶೀರ್ಷಿಕೆ ಅಡಿಯಲ್ಲಿ ಆಯೋಜಿಸಿದ್ದ ಅಂತರ್ ಕಾಲೇಜು ಮಟ್ಟದ ಸಾಂಸ್ಕçತಿಕ ಸ್ಪರ್ಧೆಯಲ್ಲಿ ಕುಂದಾಪುರದ ಡಾ|. ಬಿ.ಬಿ. ಹೆಗ್ಡೆ ಕಾಲೇಜು “ಪ್ರಥಮ ಸ್ಥಾನವನ್ನು” ಪಡೆದುಕೊಂಡಿತು.
ವಿದ್ಯಾರ್ಥಿಗಳು ಯಕ್ಷಗಾನ, ಅರೆಶಾಸ್ತ್ರೀಯ , ಜಾನಪದ ನೃತ್ಯ, ಸಿನಿಮಾ ನೃತ್ಯ, ಹಳೆಯ ಸಿನಿಮಾ ಹಾಡು ಸೇರಿದಂತೆ ವೈವಿದ್ಯಮಯ ಸಾಂಸ್ಕçತಿಕ ಕಾರ್ಯಕ್ರಮ ನೀಡಿದರು.
ಜೆ.ಸಿ.ಐ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಜೆ.ಸಿ. ಸದಾನಂದ ನಾವಡ, ಜೆ.ಸಿ.ಐ ಅಧ್ಯಕ್ಷರಾದ ಸುಧಾಕರ್ ಕಾಂಚನ್ ಅವರಿಂದ ಕಾಲೇಜಿನ ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ, ಉಪನ್ಯಾಸಕರಾದ ಪ್ರವೀಣ್ ಮೊಗವೀರ ಗಂಗೊಳ್ಳಿ, ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿ ರಕ್ಷಿತ್ ರಾವ್ ಗುಜ್ಜಾಡಿ, ಹರೀಶ್ ಕಾಂಚನ್, ವಿದ್ಯಾರ್ಥಿಗಳಾದ ರಕ್ಷತ್, ಕಿರಣ್ ಮತ್ತು ವಿಷ್ಣು ಬಹುಮಾನ ಸ್ವೀಕರಿಸಿದರು.
ಕಾಲೇಜಿನ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ. ಬಿ. ಎಮ್. ಸುಕುಮಾರ ಶೆಟ್ಟಿ, ಪ್ರಾಂಶುಪಾಲರಾದ ಪ್ರೊ. ಕೆ. ಉಮೇಶ್ ಶೆಟ್ಟಿ ಅಭಿನಂದನೆ ಸಲ್ಲಿಸಿದರು.