ಪ್ರತಿಭೆ ಮತ್ತು ರೂಪ ಭಗವಂತನ ಕೊಡುಗೆ ಎಂದು ಹೇಳುತ್ತಾರೆ. ಕೀರ್ತಿ ಮತ್ತು ಹಣ ಮನುಷ್ಯನ ಸೃಷ್ಟಿ.ಗೆಲುವಿಗೆ ಪ್ರತಿಭೆ ಬೇಕು. ಪ್ರತಿಯೊಂದು ಮಕ್ಕಳಲ್ಲೂ ಪ್ರತಿಭೆ ಇದ್ದೇ ಇರುತ್ತದೆ. ಕೆಲವರ ಪ್ರತಿಭೆ ಮುಖ್ಯವಾಹಿನಿಗೆ ಬಂದರೆ ಇನ್ನು ಕೆಲವರದು ತೆರೆಮರೆಯಲ್ಲೇ ಇರುತ್ತದೆ.
ನಿಜವಾದ ಪ್ರತಿಭಾವಂತರಿಗೆ ಮತ್ತು ಸಾಧಕರಿಗೆ ಪ್ರಚಾರ ಹಾಗೂ ಪ್ರೋತ್ಸಾಹ ಅಗತ್ಯ. ಆ ನಿಟ್ಟಿನಲ್ಲಿ ತೆರೆಮರೆಯ ಪ್ರತಿಭೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು. ಪ್ರತಿಭಾವಂತರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲಿ ಎನ್ನುವ ಆಶಯದೊಂದಿಗೆ ಕುಂದಾಪುರದ ಯೋಗ ಕುಮಾರಿ ಲಾಸ್ಯ ಮಧ್ಯಸ್ಥ ಸಾಧನೆಯ ಪರಿಚಯವನ್ನು ತಮ್ಮ ಮುಂದಿಡುತ್ತಿದ್ದೇವೆ .
ಅರುಣ್ ಮಧ್ಯಸ್ಥ ಹಾಗೂ ಲತಾ ಮಧ್ಯಸ್ಥರ ಮುದ್ದಿನ ಮಗಳಾದ ಲಾಸ್ಯ ಮಧ್ಯಸ್ಥ ಕುಂದಾಪುರದ ಹೋಲಿ ರೋಸರಿ ಆoಗ್ಲ ಮಾಧ್ಯಮ ಶಾಲೆ ಯಲ್ಲಿ 7 ನೇ ತರಗತಿಯಲ್ಲಿ ಓದುತ್ತಿರುವ ಪ್ರತಿಭಾನ್ವಿತೆ. 12ರ ವಯಸ್ಸಿನ ಈ ಬಾಲ ಪ್ರತಿಭೆಯ ಸಾಧನೆ ಬರೆಯುತ್ತಿರುವ ನನಗೆ ಬಹಳ ಗೌರವದ ಹೆಮ್ಮೆ ಅನಿಸುತ್ತಿದೆ. ಏಕೆಂದರೆ 12 ರ ಎಳೆ ಪ್ರಾಯದಲ್ಲಿ ಶಿಕ್ಷಣ ಜೊತೆಗೆ ಯೋಗ ಕ್ಷೇತ್ರದಲ್ಲಿ ಬಹು ದೊಡ್ಡ ಸಾಧನೆ ಗೈದಿದ್ದಾಳೆ ಈಕೆಯ ಸಾಧನೆಗೆ ಬಹು ದೊಡ್ಡ ಶಕ್ತಿಯಾಗಿ ನಿಂತಿರುವುದು ಈಕೆಯ ತಂದೆ -ತಾಯಿ.
ಯೋಗ ಕ್ಷೇತ್ರದ ಅಪ್ರತಿಮ ಬಾಲ ಪ್ರತಿಭೆಯಾಗಿರುವ ಲಾಸ್ಯ ಮಧ್ಯಸ್ಥ ಚಿಕ್ಕಮಂಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಸ್ನೇಹ ಮಯಿ ವಿವೇಕಾನಂದ ಯೋಗ ಕೇಂದ್ರದ ಯೋಗ ಶಿಕ್ಷಕರಾದ ಡಾ|ನವೀನ್ ಕುಮಾರ್ ಕೆ ಆರ್ ಇವರ ಬಳಿ ಆನ್ಲೈನ್ ಮೂಲಕ ಯೋಗ ತರಬೇತಿ ಹಾಗೂ ಇವರ ಶಿಷ್ಯರಾದ ವಿಷ್ಣು ಪ್ರಸಾದ್ ಶೆಟ್ಟಿ, ರಂಜಿತ್ ಜಿ.ಡಿ ಹಾಗೂ ಶ್ರೀಹರಿ ಐಯ್ಯಂಗಾರ್ ಇವರ ಬಳಿಯು ಯೋಗಾಭ್ಯಾಸವನ್ನು ಮಾಡುತಿದ್ದಾಳೆ .
ಕಲಿಕೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಆಗಿರುವುದರ ಜೊತೆಗೆ ಸಂಗೀತ ಹಾಗು ಭರತನಾಟ್ಯ ಅಭ್ಯಾಸವನ್ನು ಮಾಡುತ್ತಿದ್ದಾರೆ. ಈಕೆಯ ಸಾಧನೆಯ ಪಟ್ಟಿ ನೋಡಿ ನೀವೇ ಬೆರೆಗಾಗಬಹುದು . ಅಮರ ಸಂಘಟನಾ ಸಮಿತಿ ಇವರು ಆಯೋಜಿಸಿದ “ಆರೋಗ್ಯಕ್ಕಾಗಿ ಯೋಗ” “ಸೂರ್ಯ ನಮಸ್ಕಾರ ಸ್ಪರ್ಧೆ” ಯಲ್ಲಿ ಪ್ರಥಮ ಸ್ಥಾನ, ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜು & ಹಾಸ್ಪಿಟಲ್ ಅಮೃತೇಶ್ವರಿ ಎಜುಕೇಶನಲ್ ಟ್ರಸ್ಟ್ ಇವರು ಆಯೋಜಿಸಿದ “yoga at home”ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ,ಸಂದ್ಯೋದಯ ಪಿತ್ರೋಡಿ ಆಯೋಜಿಸಿದ ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ , ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜು & ಹಾಸ್ಪಿಟಲ್ ಅಮೃತೇಶ್ವರಿ ಎಜುಕೇಶನಲ್ ಟ್ರಸ್ಟ್ ಇವರು ಆಯೋಜಿಸಿದ “yoga at home”ಸ್ಪರ್ದೆಯಲ್ಲಿ ಪ್ರಥಮ ಸ್ಥಾನ,ದಸರಾ ಯೋಗಾಸನ ಕ್ರೀಡಾ ಕೂಟ ಆಯೋಜಿಸಿದ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆ, ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ
ರಾಷ್ಟ್ರ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ,ಮೈಸೂರು ವಿಭಾಗ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ರಾಷ್ಟ್ರ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ,ಸ್ನೇಹ ಮಯಿ ವಿವೇಕಾನಂದ ಯೋಗ ಕೇಂದ್ರ ಆಯೋಜಿಸಿದ ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 2022-23 ಸಾಲಿನ ಶಾಲಾ ಶೈಕ್ಷಣಿಕ ಹಾಗು ಕ್ರೀಡ ಇಲಾಖೆ ಆಯೋಜಿಸಿದ ಸ್ಪರ್ದೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆ ಆಯ್ಕೆ ಆಗಿರುತ್ತಾಳೆ ಹಾಗೂ ಮೈಸೂರು ವಿಭಾಗ ಮಟ್ಟದ ಯೋಗ ಕುಮಾರಿ ಪ್ರಶಸ್ತಿಯನ್ನು ಪಡೆದಿರುತ್ತಾರೆ.
ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಆಯೋಜಿಸಿದ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, 2023-24 ಸಾಲಿನ ಶಾಲಾ ಶೈಕ್ಷಣಿಕ ಹಾಗು ಕ್ರೀಡ ಇಲಾಖೆ ಆಯೋಜಿಸಿದ ತಾಲೂಕು ಮಟ್ಟದ ಸ್ಪರ್ದೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆ, ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ದೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆ ಆಗಿರುತ್ತಾಳೆ ಹಾಗೂ “ಯೋಗ ಕುಮಾರಿ”ಪ್ರಶಸ್ತಿಯನ್ನು ಜಿಲ್ಲಾ ಮಟ್ಟದಲ್ಲಿ ಪಡೆದಿರುತ್ತಾರೆ , ವಿಭಾಗ ಮಟ್ಟದ ಸ್ಪರ್ಧೆ ಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆ ಆಗಿರುತ್ತಾಳೆ ಹಾಗೂ “ಯೋಗ ಕುಮಾರಿ” ಪ್ರಶಸ್ತಿಯನ್ನು ಮೈಸೂರು ವಿಭಾಗ ಮಟ್ಟದಲ್ಲಿ ಪಡೆದಿರುತ್ತಾರೆ. ನಾಲ್ಕು ಬಾರಿ ಯೋಗ ಕುಮಾರಿ” ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಮಟ್ಟದಲ್ಲಿ ಪಡೆದಿರುತ್ತಾರೆ.ರಾಜ್ಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ “Best Performer Award”, ಯೋಗೊತ್ಸವ -2022 ರಲ್ಲಿ ” ಯೋಗ ಕಲಾ ಪ್ರತಿಭಾ ಅವಾರ್ಡ್
ಹೀಗೆ ಚಿಕ್ಕ ವಯಸ್ಸಿನಲ್ಲೇ ಯೋಗ ಕ್ಷೇತ್ರದಲ್ಲಿ ದೊಡ್ಡ ಸಾಧನೆಯನ್ನು ಮಾಡಿರುವ ಈಕೆಯ ಸಾಧನೆಯನ್ನು ಮೆಚ್ಚಲೆ ಬೇಕು.ಈಕೆಯ ಮೃದುತ್ವದ ನಡೆ ನುಡಿ ಆಚಾರ ವಿಚಾರಗಳೇ ಭವಿಷ್ಯದಲ್ಲಿ ಇವಳು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಎಲ್ಲಾ ಅರ್ಹತೆ ಇದ್ದು ಇವಳ ನಡೆ ನುಡಿಯಲ್ಲಿ ಇವಳು ಉತ್ತಮ ಅಂತರಾಷ್ಟ್ರೀಯ ಮಟ್ಟದ ಯೋಗ ಪಟು ಆಗುವುದರಲ್ಲಿ ಸಂಶಯವಿಲ್ಲ.
ಲಾಸ್ಯ ಮಧ್ಯಸ್ಥ -8762632156
ವರದಿ :ಈಶ್ವರ್ ಸಿ ನಾವುಂದ