ಕುಂದಾಪುರ (ಜ.01) : ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ನೇಚರ್ ಕ್ಲಬ್ ಆಶ್ರಯದಲ್ಲಿ ಆಲೂರಿನ ಗುರುವಂದನ ಪೊಟರಿಯಲ್ಲಿ ವಿಸ್ತರಣಾ ಚಟುವಟಿಕೆ ಜರುಗಿತು.
ಸಂಸ್ಥಾಪಕರಾದ ಶ್ರೀ ರಘುರಾಮ್ ಕುಲಾಲ್ ವಿದ್ಯಾರ್ಥಿಗಳಿಗೆ ಕುಂಬಾರಿಕೆಯ ಮೇಲೆ ಆಧುನಿಕತೆಯ ಪರಿಣಾಮವನ್ನು ವಿವರಿಸುವ ಜೊತೆಗೆ, ಸರ್ಕಾರ ಒದಗಿಸುವ ಹಲವಾರು ಯೋಜನೆಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ವರ್ತಮಾನದ ಪ್ಲಾಸ್ಟಿಕ್ ಯುಗದಲ್ಲಿ ಅಳಿಯುವಿಕೆಯ ಅಂಚಿನಲ್ಲಿರುವ ಕುಂಬಾರಿಕೆಗೆ ವಿಶ್ವಮಾನ್ಯತೆ ದೊರೆಯುವಂತೆ ಮಾಡುವ ತಮ್ಮ ಆಶಯವನ್ನು ಈ ಸಂದರ್ಭದಲ್ಲಿ ತಿಳಿಸಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ವೀಣಾ ಭಟ್, ವಾಣಿಜ್ಯ ಪ್ರಾಧ್ಯಾಪಕಿ ದೀಪಾ ಪೂಜಾರಿ, ನೇಚರ್ ಕ್ಲಬ್ ಸಂಯೋಜಕರಾದ ಶ್ರೀ ಸತೀಶ್ ಕಾಂಚನ್, ಶ್ವೇತಾ ಭಂಡಾರಿ, ಬಿ.ಕಾಂ. ಅಂತಿಮ ವರ್ಷದ ವಿದ್ಯಾರ್ಥಿಗಳ ಜೊತೆಗೆ, ನೇಚರ್ ಕ್ಲಬ್ನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.