ಕುಂದಾಪುರ (ಫೆ.1) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಏಷಿಯನ್ ಶೀಟೋ – ರೂ ಸ್ಪೋರ್ಟ್ಸ್ ಕರಾಟೆ – ಡೊ ಅಸೋಸಿಯೇಷನ್ ವತಿಯಿಂದ ಮುಂಬೈನಲ್ಲಿ ನಡೆದ 7th ಇಂಟರ್ ನ್ಯಾಷನಲ್ ಓಪನ್ ಕರಾಟೆ ಚಾಂಪಿಯನ್ ಶಿಪ್ – 2024 ಏಷ್ಯಾ ಕಪ್ ನಲ್ಲಿ ಭಾಗವಹಿಸಿ ಹಲವು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳಾದ ಆರ್ಯನ್ ಕೆ ಪೂಜಾರಿ, ಅರ್ನೋನ್ ಡಿ ಅಲ್ಮೇಡಾ, ಅಥರ್ವ ಕಟಾ – ಕುಮಿಟೆಯಲ್ಲಿ ಪ್ರಥಮ, ಭುವನ್ ಪೂಜಾರಿ ಕಟಾ ಪ್ರಥಮ, ಕುಮಿಟೆ ದ್ವಿತೀಯ ಹಾಗೂ ಪ್ರತೀಕ ಕಟಾ ದ್ವಿತೀಯ, ಕುಮಿಟೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ. ವಿಜೇತ ಕರಾಟೆ ವಿದ್ಯಾರ್ಥಿಗಳನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಅಭಿನಂದಿಸಿದರು.