ಸಮಾಜದ ಎಲ್ಲಾ ವರ್ಗದವರಿಗೂ ಜಾತಿ, ಮತ, ಧರ್ಮ ಭೇಧಭಾವವಿಲ್ಲದೆ ಆರೋಗ್ಯ ಭದ್ರತೆ ನೀಡುವ ಸಲುವಾಗಿ ಪ್ರಾರಂಭಿಸಿದ ಡಾ. ಜಿ. ಶಂಕರ್ ರವರ ಮಹತ್ವಾಕಾಂಕ್ಷೆಯ ಯೋಜನೆಯಾದ ಜಿ. ಶಂಕರ್ ಆರೋಗ್ಯ ಸುರಕ್ಷಾ ವಿಮಾ ಯೋಜನೆಯ ಕಾರ್ಡುಗಳನ್ನು ಮೊಗವೀರ ಯುವ ಸಂಘಟನೆಯ ಪ್ರಧಾನ ಕಛೇರಿ ಮಾಧವ ಮಂಗಲ ಸಮುದಾಯ ಭವನ ಅಂಬಲಪಾಡಿ – ಉಡುಪಿ ಹಾಗೂ ಮೊಗವೀರ ಯುವ ಸಂಘಟನೆಗಳ ವಿವಿಧ ಘಟಕಗಳ ಕಛೇರಿ ಯಲ್ಲಿ ಫೆಬ್ರವರಿ 01 ನೇ ತಾರೀಕಿನಿಂದಲೇ ವಿತರಣೆ ಪ್ರಾರಂಭಿಸಿದ್ದು, ಕಾರ್ಡ ನೊಂದಾವಣೆ ಮಾಡಿಕೊಂಡಿರುವವರು ಕಡ್ಡಾಯವಾಗಿ ತಮಗೆ ನೋಂದಾವಣೆ ಸಮಯದಲ್ಲಿ ನೀಡಿರುವ ಸ್ವೀಕ್ರತಿ ಪ್ರತಿಯನ್ನು ನೀಡಿ ತಮ್ಮ ಆರೋಗ್ಯ ಸುರಕ್ಷಾ ಕಾರ್ಡ್ ನ್ನು ಪಡೆದುಕೊಳ್ಳುವಂತೆ ತಿಳಿಸಲಾಗಿದೆ.










