ಕುಂದಾಪುರ (ಫೆ. 14): ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಮತ್ತು ವಿ. ಕೆ ಆರ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಲ್ಲಿ ಫೆಬ್ರವರಿ 12, ಸೋಮವಾರದಂದು 6, 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ “ಮಕ್ಕಳೊಂದಿಗೆ ಮಾತು–ಕತೆ” ಕಾರ್ಯಾಗಾರ ಜರುಗಿತು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಕವಿ, ವಿದ್ವಾಂಸ, ನಿರ್ದೇಶಕ, ನಾಟಕಕಾರರೂ ಆಗಿರುವ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಆಗಮಿಸಿ, ಮಕ್ಕಳಿಗೆ ಅನೇಕ ಕಥೆಗಳನ್ನು ಬಹಳ ಅತ್ಯುತ್ತಮವಾದ ಭಾವಾಭಿನಯದ ಮೂಲಕ ಹೇಳಿದರು. ಉಪಾಧ್ಯಾಯರ ಕಥೆಗಳನ್ನು ಕೇಳುತ್ತಾ ಮಕ್ಕಳು ಸಂಭ್ರಮಿಸಿದರು.
ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಶಿಕ್ಷಕ ಶ್ರೀನಿವಾಸ ಬೈಂದೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.