ಕುಂದಾಪುರ (ಫೆ.19):ಮೊಗವೀರ ಯುವ ಸಂಘಟನೆ(ರಿ), ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ ಇದರ 2024 ಮತ್ತು 25ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ, ಗೌರವಾರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಕುಂದಾಪುರದ ಮೊಗವೀರ ಭವನದಲ್ಲಿ ಫೆಬ್ರವರಿ 10 ರಂದು ಜರುಗಿತು. ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ (ರಿ),ಅಂಬಲಪಾಡಿ ಉಡುಪಿ ಇದರ ಪ್ರವರ್ತಕರಾದ ನಾಡೋಜ ಡಾ.ಜಿ.ಶಂಕರ್ರವರು ಕಾರ್ಯಕ್ರಮ ಉದ್ಘಾಟಿಸಿಶುಭ ಹಾರೈಸಿ ಯುವ ಸಮುದಾಯ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಕೊಳ್ಳಬೇಕು ಎಂದು ಹೇಳಿದರು. ಮೊಗವೀರ […]
Day: February 20, 2024
ಎಚ್. ಎಮ್. ಎಮ್, ವಿ ಕೆ ಆರ್ ಶಾಲೆ: ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರಿಂದ ಉಪನ್ಯಾಸ
ಕುಂದಾಪುರ (ಫೆ. 14): ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಮತ್ತು ವಿ. ಕೆ ಆರ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಲ್ಲಿ ಫೆಬ್ರವರಿ 12, ಸೋಮವಾರದಂದು 6, 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ “ಮಕ್ಕಳೊಂದಿಗೆ ಮಾತು–ಕತೆ” ಕಾರ್ಯಾಗಾರ ಜರುಗಿತು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಕವಿ, ವಿದ್ವಾಂಸ, ನಿರ್ದೇಶಕ, ನಾಟಕಕಾರರೂ ಆಗಿರುವ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಆಗಮಿಸಿ, ಮಕ್ಕಳಿಗೆ […]
ಅಬಾಕಸ್ನಲ್ಲಿ ಎಚ್. ಎಮ್. ಎಮ್ ಶಾಲೆಯ ವಿದ್ಯಾರ್ಥಿಗಳ ಸಾಧನೆ
ಕುಂದಾಪುರ (ಫೆ,18) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಐಡಿಯಲ್ ಪ್ಲೇ ಅಬಾಕಸ್ ವತಿಯಿಂದ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ 19ನೇ ರಾಷ್ಟ್ರೀಯ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿತ್ಮೆಟಿಕ್ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿರುತ್ತಾರೆ. ವಿದ್ಯಾರ್ಥಿಗಳಾದ ಶ್ರೇಯಸ್ ಆರ್ ರಾವ್, ಪ್ರಣವ್ ದ್ವಿತೀಯ ಸ್ಥಾನವನ್ನು ಮತ್ತು ಪ್ರಥ್ವಿನ್ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಇವರನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ […]
ಯೋಗ ಪಟು ಲಾಸ್ಯ ಮಧ್ಯಸ್ಥಗೆ ಸನ್ಮಾನ
ಕುಂದಾಪುರ(ಫೆ.17): ಅರುಣ್ ಮಧ್ಯಸ್ಥ ಮತ್ತು ಲತಾ ಮಧ್ಯಸ್ಥರ ಪ್ರೀತಿಯ ಕುವರಿ ಕುಂದಾಪುರದ ಹೋಲಿ ರೋಸರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ಈಕೆ ತನ್ನ ಎಳೆಯ ವಯಸ್ಸಿನಲ್ಲಿಯೇ ಮಹತ್ತರವಾದ ಸಾಧನೆಯನ್ನು ಮಾಡಿ ಹಲವರ ಪ್ರಶಂಸೆಗೆ ಪಾತ್ರಲಾಗಿದ್ದಾಳೆ. ಕರಾವಳಿ ಭಾಗದಲ್ಲಿಯ ಹಲವು ಗುರುಗಳಿಂದ ಯೋಗಾಭ್ಯಾಸವನ್ನು ಮಾಡಿರುವುದು ಡಾ. ನವೀನ್ ಕುಮಾರ್, ಕೆ ಆರ್ ವಿಷ್ಣು ಪ್ರಸಾದ್ ಶೆಟ್ಟಿ, ರಂಜಿತ್ ಜಿಡಿ ಹಾಗೂ ಶ್ರೀ ಹರಿ ಅಯ್ಯಂಗಾರ್ ರವರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದಾಳೆ […]
ರಕ್ತದ ಆಪತ್ಬಾಂದವ - ಜೀವ ರಕ್ಷಕ ಸತೀಶ್ ಸಾಲ್ಯಾನ್ ಮಣಿಪಾಲ್
ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಸೇವೆಯಲ್ಲಿ ದೇವರನ್ನು ಕಾಣುವ ವ್ಯಕ್ತಿತ್ವ ಸತೀಶರದ್ದು. ಸತೀಶ್ ಒಬ್ಬ ರಕ್ತದಾನಿ, ರಕ್ತದ ಜೊತೆಗಾರ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಅವರೊಬ್ಬ ಅಪ್ಪಟ ಹೃದಯವಂತ, ಸಂವೇದನಶೀಲ ಮತ್ತು ಮಾನವೀಯತೆ ತುಂಬಿಕೊಂಡಿರುವ ಕರುಣಾಮಯಿ ಮತ್ತು ಮಗುವಿನಂತ ಮನಸ್ಸಿನವರು. ಸತೀಶ್ ಅವರ ಬಳಿ ಬಂದು ಸರ್ ನಿಮ್ಮ ಸಹಾಯವನ್ನು ನಾನು ಜೀವನ ಪರ್ಯಂತ ಮರೆಯುವುದಿಲ್ಲ ಎಂದು ಹೇಳಿದವರು ಅನೇಕರು. ಸಾವಿರಾರು ರೋಗಿಗಳ ಮನೆಯವರು ರಕ್ತದ ಪೂರೈಕೆಯಿಂದ ಸತೀಶರಲ್ಲಿ ಮನವಿ ಮಾಡಿಕೊಂಡಾಗ […]
ಎಚ್.ಎಮ್.ಎಮ್, ವಿ.ಕೆ.ಆರ್ ಶಾಲೆ: ಶಿಕ್ಷಕ ಪುನಶ್ಚೇತನ ಕಾರ್ಯಾಗಾರ
ಕುಂದಾಪುರ (ಫೆ.15) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ ಶಿಕ್ಷಕರಿಗಾಗಿ “ಕಲಿಕಾ ನ್ಯೂನ್ಯತೆಯ ಕಾರಣಗಳು” ಎಂಬ ವಿಷಯಾಧಾರಿತ ಶಿಕ್ಷಕ ಪುನಶ್ಚೇತನ ಕಾರ್ಯಾಗಾರ ಫೆಬ್ರವರಿ 13, ಮಂಗಳವಾರದಂದು ಜರುಗಿತು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ, ಕೇರಳದ, ಕೊಚ್ಚಿನ್ನಲ್ಲಿ ಮಕ್ಕಳ ಮನಶಾಸ್ತ್ರಜ್ಞರು ಮತ್ತು ಹಿರಿಯ ಸಲಹೆಗಾರರಾಗಿರುವ ಡಾ. ಫಿಲಿಪ್ ಜಾನ್ ಆಗಮಿಸಿ, ಮಕ್ಕಳಲ್ಲಿ […]
ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಶಾಲೆ: ರಾಜ್ಯಮಟ್ಟದ ಚೆಸ್ ನಲ್ಲಿ ಪ್ರಥಮ
ಕುಂದಾಪುರ (ಫೆ.16) : ಚಾಣಾಕ್ಷ ಚೆಸ್ ಸ್ಕೂಲ್, ಶಿವಮೊಗ್ಗ ಮತ್ತು ಮೌಂಟ್ ಕ್ಯಾರಮಲ್ ಸ್ಕೂಲ್ ಮತ್ತು ಶ್ರೀ ಶ್ರೀ ಟ್ರಸ್ಟ್ ಸಹಭಾಗಿತ್ವದಲ್ಲಿ ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಚೆಸ್ ಸ್ಪರ್ಧೆ – 2024ರಲ್ಲಿ ಕುಂದಾಪುರದ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿ ಶ್ರೀನಿತ್ ಶೆಟ್ ಭಾಗವಹಿಸಿ ಬಾಲಕರ 7ರ ವಯೋಮಿತಿಯ ವಿಭಾಗದಲ್ಲಿ 7ರಲ್ಲಿ 4 ಪಾಯಿಂಟ್ ಗಳನ್ನು ಗಳಿಸಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ . ಇವರನ್ನು […]
ಡಾ| ಬಿ. ಬಿ. ಹೆಗ್ಡೆ ಕಾಲೇಜು : ಮೊಳಹಳ್ಳಿಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ
ಕುಂದಾಪುರ (ಫೆಬ್ರವರಿ 15): ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೊಳಹಳ್ಳಿಯಲ್ಲಿ ನಡೆಯುತ್ತಿರುವ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಕುತ್ಪಾಡಿ-ಉಡುಪಿ, ಲಯನ್ಸ್ ಕ್ಲಬ್ ಶಿವಶಾಂತಿ ಮೊಳಹಳ್ಳಿ, ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇವರ ಸಂಯುಕ್ತ ಆಶ್ರಯದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಪ್ರಥಮ […]