ಕುಂದಾಪುರ (ಮಾ.15): ಇಲ್ಲಿನ ಪ್ರತಿಷ್ಠಿತ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ನೇಚರ್ ಕ್ಲಬ್, ರಾಷ್ಟ್ರೀಯ ಸೇವಾ ಯೋಜನಾ ಘಟಕ 1 & 2, ಹೆಚ್.ಸಿ.ಎಲ್. ಫೌಂಡೇಶನ್, ರೀಫ್ ವಾಚ್ ಮರಿನ್ ಕರ್ನ್ಸ್ವೇಶನ್ ಹಾಗೂ ಅರಣ್ಯ ಇಲಾಖೆ, ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಕಡಲಾಮೆಗಳ ಸಂರಕ್ಷಣೆಯ ಕುರಿತು ಬೀದಿನಾಟಕ ಪ್ರದರ್ಶನ ನಡೆಯಿತು.
ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ, ಬೈಕಾಡಿ ಇವರು ಅಳಿವಿನಂಚಿನಲ್ಲಿರುವ ಕಡಲಾಮೆಗಳ ಸಂರಕ್ಷಣೆಯಿoದ ಪರಿಸರಕ್ಕಾಗುವ ಅನುಕೂಲತೆಗಳ ಜಾಗೃತಿ ಮೂಡಿಸುವ ಬೀದಿನಾಟಕವನ್ನು ಪ್ರದರ್ಶಿಸಿದರು.
ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಉಪಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ರೀಫ್ ವಾಚ್ನ ಔಟ್ರೀಚ್ ಆಫೀಸರ್ ವೆಂಕಟೇಶ್ ಶೇರೇಗಾರ್, ನೇಚರ್ ಕ್ಲಬ್ನ ಸಂಯೋಜಕರಾದ ಸುಧೀರ್ ಕುಮಾರ್, ಸತೀಶ್ ಕಾಂಚನ್, ಶ್ವೇತಾ ಭಂಡಾರಿ ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ದೀಪಾ ಪೂಜಾರಿ ಉಪಸ್ಥಿತರಿದ್ದರು. ಕಾಲೇಜಿನ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರದ ಐನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.