ಹೆಮ್ಮಾಡಿ( ಮಾ.20): ಸಮಾಜದ ಎಲ್ಲಾ ವರ್ಗದವರಿಗೂ ಜಾತಿ, ಮತ, ಧರ್ಮ ಭೇಧಭಾವವಿಲ್ಲದೆ ಆರೋಗ್ಯ ಭದ್ರತೆ ನೀಡುವ ಸಲುವಾಗಿ ಪ್ರಾರಂಭಿಸಿದ ಡಾ. ಜಿ. ಶಂಕರ್ ರವರ ಮಹತ್ವಾಕಾಂಕ್ಷೆಯ ಯೋಜನೆಯಾದ ಜಿ. ಶಂಕರ್ ಆರೋಗ್ಯ ಸುರಕ್ಷಾ ವಿಮಾ ಯೋಜನೆಯ ಕಾರ್ಡುಗಳನ್ನು ಮೊಗವೀರ ಯುವ ಸಂಘಟನೆ( ರಿ )ಉಡುಪಿ ಜಿಲ್ಲೆ ಇದರ ಹೆಮ್ಮಾಡಿ ಘಟಕ ವ್ಯಾಪ್ತಿಯಲ್ಲಿ ನೊಂದಣಿ ಮಾಡಿಕೊಂಡವರಿಗೆ ಹೆಮ್ಮಾಡಿಯ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಇದರ ಕಟ್ಟಡದಲ್ಲಿ ಇರುವ ಬ್ಲೂ ಸ್ಕೈ ಸ್ಟುಡಿಯೋ ದಲ್ಲಿ ಮಾರ್ಚ್ 20 ರಿಂದ ಆರೋಗ್ಯ ಕಾರ್ಡ್ ವಿತರಣೆ ಮಾಡಲಾಗುತ್ತದೆ.
ಹೆಮ್ಮಾಡಿ ಘಟಕ ವ್ಯಾಪ್ತಿಯಲ್ಲಿ ಕಾರ್ಡ್ ನೋಂದಣಿ ಮಾಡಿಕೊಂಡವರು ಕಡ್ಡಾಯವಾಗಿ ತಮಗೆ ನೋಂದಾವಣೆ ಸಮಯದಲ್ಲಿ ನೀಡಿರುವ ಸ್ವೀಕ್ರತಿ ಪ್ರತಿಯನ್ನು ನೀಡಿ ತಮ್ಮ ಆರೋಗ್ಯ ಸುರಕ್ಷಾ ಕಾರ್ಡ್ ನ್ನು ಪಡೆದುಕೊಳ್ಳುವಂತೆ ಘಟಕದ ಅಧ್ಯಕ್ಷರಾದ ದಿನೇಶ್ ಕಾಂಚನ್ ಬಾಳಿಕೆರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.