ಕುoದಾಪುರ ಎಜ್ಯುಕೇಶನ್ ಸೊಸೈಟಿಯ ಅಂಗ ಸಂಸ್ಥೆಯಾಗಿರುವ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು (ಬಿಬಿಎಚ್ಸಿ) ಉಡುಪಿ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿದ್ದು, ವಾಣಿಜ್ಯ (ಬಿ.ಕಾಂ.), ವ್ಯವಹಾರ ಆಡಳಿತ (ಬಿಬಿಎ) ಮತ್ತು ಗಣಕ ವಿಜ್ಞಾನ (ಬಿಸಿಎ) ವ್ಯಾಸಂಗ ಮಾಡಲು ಇಚ್ಛಿಸುವ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಣ ಕೇಂದ್ರವಾಗಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟಿರುವ ಈ ವಿದ್ಯಾಸಂಸ್ಥೆ ಕಳೆದ 14 ವರ್ಷಗಳಿಂದ ಬಿ.ಕಾಂ., ಬಿ.ಬಿ.ಎ. ಮತ್ತು ಬಿ.ಸಿ.ಎ. ಪದವಿಗಳನ್ನು ಪಡೆಯಲಿಚ್ಛಿಸುವ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಬೇಕಾಗುವ ಎಲ್ಲಾ ಪ್ರಾಕಾರಗಳನ್ನು ಅಳವಡಿಸಿಕೊಂಡು, ಅತ್ಯಂತ ವಿಶಿಷ್ಠ ಮತ್ತು ವೈವಿಧ್ಯಮಯವಾಗಿ ಕೆಲಸ ನಿರ್ವಹಿಸುತ್ತಿರುವ ವಿದ್ಯಾದೇಗುಲವಾಗಿ ಅಭಿವೃದ್ಧಿ ಹೊಂದುತ್ತಿದೆ.
130 ವಿದ್ಯಾರ್ಥಿಗಳೊಂದಿಗೆ 2010ರಲ್ಲಿ ಶ್ರೀ ಬಿ.ಎಂ. ಸುಕುಮಾರ ಶೆಟ್ಟಿಯವರ ಮುಂದಾಳತ್ವದಲ್ಲಿ ಆರಂಭಗೊoಡ ಈ ಸಂಸ್ಥೆ 2021ರಲ್ಲಿ NAACನಿoದ ಪ್ರಥಮ ಆವರ್ತದಲ್ಲಿ B++ ಮಾನ್ಯತೆಯನ್ನು ಪಡೆದಿರುವ ಅತ್ಯಂತ ಕಿರಿಯ ಪ್ರಾಯದ ಸಂಸ್ಥೆಯಾಗಿದ್ದು, UGCಯಿಂದ 2(f) ಮಾನ್ಯತೆ ಪಡೆದಿದ್ದು, ಕರ್ನಾಟಕ ಸರಕಾರದಿಂದ ಬಿ.ಕಾಂ., ಬಿ.ಬಿ.ಎ. ಮತ್ತು ಬಿ.ಸಿ.ಎ. ಪದವಿಗಳಿಗೆ ಶಾಶ್ವತ ಸಂಯೋಜನೆಗೊಳಪಟ್ಟಿರುವುದು ಕೂಡ ವಿಶೇಷವಾಗಿರುತ್ತದೆ. ಅತ್ಯುತ್ತಮ ಆಡಳಿತ ಮಂಡಳಿ, ದಕ್ಷ ಪ್ರಾಂಶುಪಾಲರು, ಯುವ-ಅನುಭವೀ ಪ್ರಾಧ್ಯಾಪಕ ವೃಂದ, ಪ್ರಕೃತಿದತ್ತವಾದ ಮತ್ತು ಶಿಸ್ತುಬದ್ಧವಾದ ಕಾಲೇಜ್ ಕ್ಯಾಂಪಸ್, ಸಮೃದ್ಧ ಲೈಬ್ರರಿ, ಕಂಪ್ಯೂಟರ್ ಲ್ಯಾಬ್ಗಳು, ಕ್ರೀಡಾಂಗಣಗಳು, ಶುಚಿ-ರುಚಿಯಾದ ಕ್ಯಾಂಟೀನ್ ವ್ಯವಸ್ಥೆ, 1500 ಜನರು ಕುಳಿತುಕೊಳ್ಳಬಹುದಾದ ವಿಶಾಲವಾದ ಸಭಾಂಗಣ, ವಿದ್ಯಾರ್ಥಿಗಳಿಗೆ ವಿಶ್ರಾಂತಿ ಕೊಠಡಿಗಳು, ಕಾಲೇಜ್ ಬಸ್ಸಿನ ವ್ಯವಸ್ಥೆ, ಸಂಪೂರ್ಣವಾಗಿ ಸಿಸಿ ಕ್ಯಾಮರಾದ ಕಣ್ಗಾವಲಿರುವ ಕ್ಯಾಂಪಸ್ ಹೀಗೆ ಹಲವಾರು ವ್ಯವಸ್ಥೆಗಳನ್ನು ಹೊಂದಿರುವ ಈ ಕಾಲಘಟ್ಟಕ್ಕೆ ಬೇಕಾಗುವ ವಿದ್ಯಾಸಂಸ್ಥೆಯಾಗಿದೆ.
ಈ ವಿದ್ಯಾಸಂಸ್ಥೆ ಕಳೆದ 14 ವರ್ಷಗಳಿಂದ ಪಠ್ಯ ಮತ್ತು ಪಠ್ಯಪೂರಕ ಚಟುವಟಿಕೆಗಳಿಗೆ ಸಮಾನವಾಗಿ ಪ್ರಾಮುಖ್ಯತೆಯನ್ನು ನೀಡುತ್ತಾ ಬಂದಿದ್ದು, ಶೈಕ್ಷಣಿಕ-ಸಾಂಸ್ಕೃತಿಕ-ಸಾಹಿತ್ಯಿಕ-ಕ್ರೀಡೆ-ಕ್ಯಾoಪಸ್ ಪ್ಲೇಸ್ಮೆಂಟ್ ಮತ್ತು Start up ಕಾರ್ಯಕ್ರಮಗಳನ್ನು ಮುಖ್ಯವಾಗಿ ಕೇಂದ್ರಿಕರಿಸಿಕೊoಡು, ಕಡಿಮೆ ದರದಲ್ಲಿ ಅತ್ಯುತ್ತಮವಾದ ಶಿಕ್ಷಣವನ್ನು ಸಮಾಜದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೀಡುತ್ತಾ ಬರುತ್ತಿದೆ. ಶುಲ್ಕ ರಿಯಾಯಿತಿ, ವಿದ್ಯಾರ್ಥಿಗಳ ದತ್ತು ಸ್ವೀಕಾರ, ಮಧ್ಯಾಹ್ನದ ಉಚಿತ ಊಟದ ವ್ಯವಸ್ಥೆ ಹೀಗೆ ಹಲವಾರು ವಿದ್ಯಾರ್ಥಿ-ಸ್ನೇಹಿ ಕಾರ್ಯಕ್ರಮಗಳ ಮೂಲಕ ಅದೆಷ್ಟೋ ವಿದ್ಯಾರ್ಥಿಗಳ ಜೀವನಕ್ಕೆ ಬೆನ್ನೆಲುಬಾಗಿ ಸದಾ ಸಹಕರಿಸುತ್ತಿರುವ ವಿದ್ಯಾಸಂಸ್ಥೆಯಾಗಿದೆ.
ಬದಲಾದ ಕಾಲಘಟ್ಟಕ್ಕೆ ಸರಿಯಾಗಿ B.Com.ನೊಂದಿಗೆ CA, CS, CMA, KAS, IAS ಮತ್ತು ಇನ್ನಿತರ UPSC ಪರೀಕ್ಷೆಗಳಿಗೆ ನುರಿತ ಪ್ರಾಧ್ಯಾಪಕರಿಂದ ನಿರಂತರ ತರಬೇತಿ ನೀಡುವುದರೊಂದಿಗೆ B.Com. ವಿದ್ಯಾರ್ಥಿಗಳಿಗೆ IBM Pvt. Ltd. ಕಂಪೆನಿಯ ಜೊತೆಗಿನ ಒಡಂಬಡಿಕೆಯೊoದಿಗೆ Data Science ವಿಷಯವನ್ನು ಕೂಡ ಬೋಧಿಸಲಾಗುತ್ತಿದೆ. BBAನೊoದಿಗೆ PGCET, CAT, MAT ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತರಬೇತುಗೊಳಿಸಲಾಗುತ್ತಿದೆ. BCAನೊoದಿಗೆ IBM Pvt. Ltd.. ತರಬೇತಿ ನೀಡುವ Artificial Intelligence ವಿಷಯವನ್ನು ಕೂಡಾ ಬೋಧಿಸುತ್ತಿರುವುದು ಸಂಸ್ಥೆಯ ಹೆಮ್ಮೆಯಾಗಿರುತ್ತದೆ.
ಅಲ್ಲದೇ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ NSS, NCC, Rovers-Rangers, Youth Red Cross, Rotaract Clubನಂತಹ 16 ವೇದಿಕೆಗಳು ಕರ್ತವ್ಯ ನಿರ್ವಹಿಸುತ್ತಿವೆ. ವಿದ್ಯಾರ್ಥಿಗಳು ಕೇವಲ ಪದವಿ ಪಡೆದರೆ ಸಾಕಾಗಲಾರದು ಎಂಬ ನಿಟ್ಟಿನಲ್ಲಿ ಬೇರೆ ಬೇರೆ ಬಗೆಯ Certificate Courseಗಳಿಗೆ ಕೂಡಾ ತರಬೇತಿಯನ್ನು ನೀಡಲಾಗುತ್ತಿದೆ.
ಮಂಗಳೂರು ವಿ.ವಿ. ನಡೆಸುತ್ತಿರುವ ಬಿ.ಕಾಂ., ಬಿಬಿಎ ಮತ್ತು ಬಿಸಿಎ ಪದವಿ ಪರೀಕ್ಷೆಗಳಲ್ಲಿ ಹಲವಾರು ರ್ಯಾಂಕ್ಗಳು ಮತ್ತು ಚಿನ್ನದ ಪದಕಗಳನ್ನು ಗಳಿಸುವುದರೊಂದಿಗೆ ದಾಖಲೆಯ ಫಲಿತಾಂಶ ನಿರಂತರವಾಗಿ ಬರುತ್ತಿರುವುದು ಕೂಡ ವಿಶೇಷವಾಗಿದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ವಿ.ವಿ. ಮತ್ತು ಇತರ ಸಂಸ್ಥೆಗಳು ನಡೆಸುತ್ತಿರುವ ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ನಿರಂತರವಾಗಿ ಬಹುಮಾನಗಳನ್ನು ಗಿಟ್ಟಿಸಿಕೊಳ್ಳುತ್ತಿರುವುದು ಕೂಡಾ ಅತ್ಯಂತ ಸಂತಸದ ವಿಷಯವಾಗಿರುತ್ತದೆ.
ಮಂಗಳೂರು ವಿ.ವಿ. ನಡೆಸುವ ಅಂತರ್-ಕಾಲೇಜು ವಾರ್ಷಿಕಾಂಕ ಸ್ಪರ್ಧೆಯಲ್ಲಿ ನಿರಂತರವಾಗಿ 4 ವರ್ಷಗಳ ಕಾಲ ಪ್ರಥಮ ಬಹುಮಾನವನ್ನು ಪಡೆದಿರುವುದು ಒಂದು ದಾಖಲೆಯಾಗಿ ಉಳಿದಿದೆ. ವಿ.ವಿ. ನಡೆಸುವ ಕ್ರೀಡಾ ರ್ಯಾಂಕಿoಗ್ನಲ್ಲಿ 9ನೇ ಸ್ಥಾನ, ಉಡುಪಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಕೂಡ ಉಲ್ಲೇಖಾರ್ಹವಾಗಿದೆ. ಅಲ್ಲದೇ, ಜಿಲ್ಲೆಯಾದ್ಯಂತ ಬೇರೆ ಬೇರೆ ವಿಶೇಷ ಸಂದರ್ಭಗಳಲ್ಲಿ ಸುಮಾರು 2 ಗಂಟೆಗಳ ಕಾಲ ಪ್ರೇಕ್ಷಕರು ನಿಬ್ಬೆರಗಾಗುವಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವ ಬಲಿಷ್ಠವಾದ ತಂಡ ಈ ವಿದ್ಯಾಸಂಸ್ಥೆಯಲ್ಲಿರುವುದು ಅತ್ಯಂತ ಹೆಚ್ಚುಗಾರಿಕೆಯ ವಿಷಯವಾಗಿರುತ್ತದೆ.
ಈ ವಿದ್ಯಾಸಂಸ್ಥೆಯನ್ನು ಸಮರ್ಥವಾಗಿ ಪ್ರೋತ್ಸಾಹಿಸುವ Parent-Teacher Association ಮತ್ತು Alumni Associationಗಳು ಸಂಸ್ಥೆಯ ಬೆನ್ನೆಲುಬಾಗಿರುತ್ತದೆ.
ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕೌಶಲ್ಯಗಳನ್ನು ಕಲಿಸುವ ದೃಷ್ಟಿಯಿಂದ ಮೌಲ್ಯ ಶಿಕ್ಷಣ, Commerce Laboratory, Business Day, Management Fest, IT Fest ಇಂತಹ ಹತ್ತು-ಹಲವಾರು ಕೌಶಲ್ಯ ವರ್ಧಿತ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರುತ್ತಿರುವುದು ಈ ವಿದ್ಯಾಸಂಸ್ಥೆಯ ವಿಶೇಷತೆಯಾಗಿರುತ್ತದೆ. ಅಲ್ಲದೇ ವಿದ್ಯಾರ್ಥಿಗಳು ಬಾಹ್ಯ ಪ್ರಪಂಚವನ್ನು ಅರ್ಥೈಸಿಕೊಳ್ಳುವ ದೃಷ್ಟಿಯಿಂದ Industrial Visits, Extension Activities, Out-reach programmeಗಳನ್ನು ಕೂಡಾ ಆಯೋಜಿಸುತ್ತಿದ್ದು, ವಿದ್ಯಾರ್ಥಿಗಳು ಬಹಳಷ್ಟು ಸಂತೋಷದಿoದ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸಮಾಜಮುಖಿ ಚಿಂತನೆಗಳನ್ನು ತಮ್ಮ ವಿದ್ಯಾಭ್ಯಾಸದೊಂದಿಗೆ ಅಳವಡಿಸಿಕೊಳ್ಳುತ್ತಿರುವುದು ಕೂಡಾ ಸ್ತುತ್ಯಾರ್ಹವಾಗಿದೆ.
ಈ ವಿದ್ಯಾಸಂಸ್ಥೆಯಲ್ಲಿ 2024-25ನೇ ಸಾಲಿನ ಪ್ರವೇಶಾತಿ ಆರಂಭವಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಕಾಲೇಜು ಕಛೇರಿಯಿಂದ ಅರ್ಜಿಗಳನ್ನು ಪಡೆದು ಸೇರ್ಪಡೆಗೊಳ್ಳಬಹುದು ಅಲ್ಲದೇ ಇನ್ನೂ ಹೆಚ್ಚಿನ ಮಾಹಿತಿಗಾಗಿ ಕಾಲೇಜಿನ Website: www.bbhegdecollege.comನ್ನು ನೋಡಬಹುದಾಗಿ ಈ ಮೂಲಕ ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.