ಹೆಮ್ಮಾಡಿ (ಏ,07): ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ 1941) ಇದರ ಆಶ್ರಯದಲ್ಲಿ ಮೊಗವೀರ ಸಮುದಾಯದ ಬಗ್ವಾಡಿ ಹೋಬಳಿ ವ್ಯಾಪ್ತಿಯ ಗುರಿಕಾರರ ಸಭೆ ಎಪ್ರಿಲ್, 07 ರಂದು ಬಗ್ವಾಡಿಯ ಶ್ರೀ ಮಹಿಷಾಸುರಮರ್ದಿನಿ ಸಭಾಭವನದಲ್ಲಿ ಜರುಗಿತು.
ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ 1941) ಮುಂಬೈ ಇದರ ಅಧ್ಯಕ್ಷರಾದ ರಾಜು ಮೆಂಡನ್ ವಂಡ್ಸೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಮೊಗವೀರ ಮಹಾಜನ ಸೇವಾ ಸಂಘ( ಬಗ್ವಾಡಿ ಹೋಬಳಿ 1941) ಇದರ ಕುಂದಾಪುರ ಶಾಖೆಯ ಉಪಾಧ್ಯಕ್ಷರಾದ
ಸದಾನಂದ ಬಳ್ಕುರು ಸ್ವಾಗತಿಸಿದರು.ಶಾಖಾಧ್ಯಕ್ಷರಾದ ಉದಯಕುಮಾರ್ ಹಟ್ಟಿಯಂಗಡಿ ಪ್ರಸ್ತಾವಿಕ ಮಾತುಗಳನ್ನಾಡಿ ಗುರಿಕಾರರ ಸಭೆ ಹಾಗೂ ಏಪ್ರಿಲ್ 23 ರಂದು ನಡೆಯಲಿರುವ ಬಗ್ವಾಡಿ ದೇಗುಲದ ಬ್ರಹ್ಮ ರಥೋತ್ಸದ ಕುರಿತಾಗಿ ಮಾತನಾಡಿದರು.
ಮೊಗವೀರ ಮಹಾಜನ ಸೇವಾ ಸಂಘ( ಬಗ್ವಾಡಿ ಹೋಬಳಿ) ಮುಂಬೈ ಮಾಜಿ ಅಧ್ಯಕ್ಷರಾದ ಏನ್. ಎಚ್ ಬಗ್ವಾಡಿ, ಸದಸ್ಯರಾದ ರಘುರಾಮ್ ಮಂಡನ್ , ಕುಂದಾಪುರ ಶಾಖೆಯ ಮಾಜಿ ಅಧ್ಯಕ್ಷರುಗಳಾದ ಕೆ. ಕೆ ಕಾಂಚನ್ ಎಂ.ಎಂ ಸುವರ್ಣ,ಉಪಾಧ್ಯಕ್ಷರಾದ ಜಗದೀಶ್ ಮಾರ್ಕೊಡು, ನಾಗೇಶ್ ಕಾಂಚನ್ ನಾಡಾ ,ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಇದರ 5 ಘಟಕಗಳ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ,ಮುಂಬೈ ಇದರ ಅಧ್ಯಕ್ಷರಾದ ರಾಜು ಮೆಂಡನ್,ಪ್ರಧಾನ ಕಾರ್ಯದರ್ಶಿ ಗಣೇಶ್ ಮೆಂಡನ್, ಬೆಣ್ಣೆ ಕುದ್ರು ಹೋಬಳಿಯ ಅಧ್ಯಕ್ಷರಾದ ಸತೀಶ್ ಅಮೀನ್,ಮೊಗವೀರ ಯುವ ಸಂಘಟನೆ(ರಿ ),ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾದ ಜಯಂತ್ ಅಮೀನ್ ಕೋಡಿ, ಸ್ತ್ರೀಶಕ್ತಿ ಬಗ್ವಾಡಿ ಅಧ್ಯಕ್ಷರಾದ ಶ್ಯಾಮಲ ಚಂದನ್, ಗುರಿಕಾರರುಗಳಾದ ರಾಮಣ್ಣ ಕೋಟೆ ಬಾಗಿಲು, ರಘುರಾಮ ಹುಣ್ಸೆಮಕ್ಕಿ,ಶಾಂತ ಪುತ್ರನ್, ಆನಂದ ಮೊಗವೀರ ಕೂಕನಾಡು ಹಾಗೂ ಮಿಣ್ಕು ನಾಗ ನಾಯ್ಕ್ ಇವರನ್ನು ಸನ್ಮಾನಿಸಲಾಯಿತು.ಹಾಗೆಯೇ ಗುರಿಕಾರರುಗಳಿಗೆ ಗೌರವ ಧನ ವಿತರಿಸಲಾಯಿತು.
ಹಾಗೆಯೇ ಇತ್ತೀಚೆಗೆ ಮೃತರಾದ ಶಾಖಾ ಮಾಜಿ ಕೋಶಾಧಿಕಾರಿ ಹಾಗೂ ಬಗ್ವಾಡಿ ದೇಗುಲದ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ ಬಚ್ಚು ಸಿ ಕುಂದರ್ ರವರಿಗೆ ನುಡಿನಮನ ಸಲ್ಲಿಸಲಾಯಿತು.
ಬಗ್ವಾಡಿ ಹೋಬಳಿ ವ್ಯಾಪ್ತಿಯ ಗುರಿಕಾರರು ಹಾಗೂ ಸಮಿತಿಯ ಸದಸ್ಯರುಗಳು ಮೊಗವೀರ ಯುವ ಸಂಘಟನೆ(ರಿ) ಉಡುಪಿ ಜಿಲ್ಲೆ ಇದರ ವಿವಿಧ ಶಾಖೆಗಳ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಏಪ್ರಿಲ್ 23 ರಂದು ಜರುಗಲಿರುವ ಬಗ್ವಾಡಿ ಮಹಿಷಾಸುರ ಮರ್ದಿನಿ ದೇವಿಯ ಬ್ರಹ್ಮರಥೋತ್ಸವದ ಪ್ರಚಾರದ ಪೋಸ್ಟರ್ ಅನ್ನು ಬಿಡುಗಡೆಗೊಳಿಸಲಾಯಿತು.
ಶಾಖಾ ಕಾರ್ಯದರ್ಶಿ ಪ್ರಭಾಕರ ಸೇನಾಪುರ ರವರು ಗುರಿಕಾರರ ಸಭೆಯ ವಾರ್ಷಿಕ ವರದಿಯನ್ನು ವಾಚಿಸಿ ಧನ್ಯವಾದಗೈದರು. ಪ್ರವೀಣ್ ಮೊಗವೀರ ಗಂಗೊಳ್ಳಿ ಪ್ರಾರ್ಥಿಸಿದರು. ಶಾಖೆಯ ಮಾಜಿ ಕೋಶಾಧಿಕಾರಿ ಸುಧಾಕರ್ ಕಾಂಚನ್ ನಿರೂಪಿಸಿದರು.