ಹೆಮ್ಮಾಡಿ (ಏ.10): ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ, ಉಡುಪಿ, ಮೊಗವೀರ ಯುವ ಸಂಘಟನೆ(ರಿ),ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕ ರಕ್ತನಿಧಿ ಕೆಎಂಸಿ ಆಸ್ಪತ್ರೆ ಮಣಿಪಾಲ ಇವರ ಸಹಯೋಗದೊಂದಿಗೆ ,ಮಹಿಷಮರ್ದಿನಿ ಯುವಕ ಮಂಡಲ(ರಿ ). ಬಗ್ವಾಡಿ ಹಾಗೂ ಬಗ್ವಾಡಿ ಫ್ರೆಂಡ್ಸ್ ಬಗ್ವಾಡಿ ಇವರ ಸಹಾಭಾಗಿತ್ವದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಏ.14 ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ತನಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೂಜಾಡಿ -ಬಗ್ವಾಡಿಯಲ್ಲಿ ನಡೆಯಲಿದೆ.
ಒಂದು ಅಮೂಲ್ಯ ಜೀವ ಉಳಿಸುವ ಈ ಮಾನವೀಯ ನೆಲೆಯ ಶಿಬಿರಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ವಯಂ ಪ್ರೇರಿತ ರಕ್ತ ಧಾನ ಮಾಡುವಂತೆ ಮೊಗವೀರ ಯುವ ಸಂಘಟನೆ(ರಿ),ಉಡುಪಿ ಜಿಲ್ಲೆ ಇದರ ಹೆಮ್ಮಾಡಿ ಘಟಕದ ಅಧ್ಯಕ್ಷರಾದ ದಿನೇಶ್ ಕಾಂಚನ್ ಬಾಳಿಕೆರೆ ವಿನಂತಿಸಿ ಕೊಂಡಿದ್ದಾರೆ.