ಕುಂದಾಪುರ (ಮೇ,16): ಖ್ಯಾತ ದಾದಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನದ ಪ್ರಯುಕ್ತ ಆಚರಿಸಲ್ಪಡುವ ವಿಶ್ವ ದಾದಿಯರ ದಿನವನ್ನು ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಸಭಾಂಗಣದಲ್ಲಿ ಮೇ.13 ರಂದು ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದರ ಪ್ರಯುಕ್ತ ಬಿ. ಎಸ್.ಸಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ‘ಬೇಸಿಕ್ ಲೈಫ್ ಸಪೋರ್ಟ್ ‘(ಬಿ. ಎಲ್.ಎಸ್) ತರಬೇತಿಯನ್ನು ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಶ್ರೀಯುತ ಅನೀಶ್ ಐಸಾಕ್ ರವರು (ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಸರ್ಟಿಫೈಡ್ ಟ್ರೈನರ್) ಫ್ಲಾರೆನ್ಸ್ ನೈಟಿಂಗೇಲ್ ಅವರ ಭಾವಚಿತ್ರಕ್ಕೆ ಪೂಜಿಸಿ, ಪುಷ್ಪವನ್ನು ಸಲ್ಲಿಸಿ ಗೌರವಿಸಿದರು.ಈ ವೇಳೆ ಪ್ರಾಂಶುಪಾಲರಾದ ಪ್ರೊl ಜೆನ್ನಿಫರ್ ಫ್ರೀಡ ಮೆನೆಜೆಸ್ ರವರು”ಸೇವೆ ಕೇವಲ ಕರ್ತವ್ಯಕ್ಕೆ ಮೀಸಲಾಗದೆ ಮಾನವೀಯ ಮೌಲ್ಯಗಳ ತಳಹದಿಯಲ್ಲಿ ತ್ಯಾಗ, ಅನುಕಂಪ, ಮಮತೆ, ಸಹಾನುಭೂತಿ, ಸಹನಶೀಲತೆಗಳಿಂದ ಸಮ್ಮಿಲನಗೊಂಡ ದಾದಿಯರ ಪಾತ್ರ ಮಿಗಿಲಾದದ್ದು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಐ. ಎಂ. ಜೆ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಶ್ರೀಯುತ ರಾಮಕೃಷ್ಣ ಹೆಗಡೆಯವರು ಪಾಲ್ಗೊಂಡು “ದಾದಿಯರೆ ಮುಂದಿನ ದೇಶದ ಭವಿಷ್ಯ , ದಾದಿಯರ ಸೇವೆ ಅಪಾರವಾದದ್ದು” ಎಂದು ತಿಳಿಸಿದರು.ಹಾಗೂ ಉಪ ಪ್ರಾಂಶುಪಾಲರಾದ ಪ್ರೊl ರೂಪಶ್ರೀ ಕೆ. ಎಸ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಬಿಸ್ಮಿ ಬೆನ್ನಿ ಸ್ವಾಗತ ಕೋರಿ ಕಾರ್ಯಕ್ರಮವನ್ನು ನಿರೂಪಿಸಿದರು. ಅಂತಿಮ ವರ್ಷದ ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ಮಾಡಿದರು. ಸೋನಾ ಕಾರ್ಯಕ್ರಮವನ್ನು ವಂದಿಸಿದರು.