ಕುಂದಾಪುರ (ಜೂನ್ 07) : ಮಂಗಳೂರು ವಿಶ್ವವಿದ್ಯಾನಿಲಯ, ಅಂತರ್ ಕಾಲೇಜು ಮತ್ತು ಕಾಲೇಜು ಮಟ್ಟದಲ್ಲಿ ಕ್ರೀಡಾ ಸಾಧನೆಗೈದ ವಿದ್ಯಾರ್ಥಿಗಳಾದ ಸಾಫ್ಟ್ ಬಾಲ್ನಲ್ಲಿ ತೃತೀಯ ಬಿ.ಕಾಂ. ‘ಎ’ ಚರಣ್, ಪ್ರಥಮ ಬಿ.ಕಾಂ. ‘ಎ’ ಲಕ್ಷ್ಮೀ , ಚೆಸ್ನಲ್ಲಿ ತೃತೀಯ ಬಿ.ಸಿ.ಎ. ದಿವ್ಯಾ, ಕುಸ್ತಿಯಲ್ಲಿ ತೃತೀಯ ಬಿ.ಕಾಂ. ‘ಸಿ’ ಪ್ರಥಮ್, ಪ್ರಥಮ ಬಿ.ಕಾಂ. ‘ಸಿ’ ಆರ್ಯ ಸಿ. ಪುತ್ರನ್, ಕರಾಟೆಯಲ್ಲಿ ದ್ವಿತೀಯ ಬಿ.ಕಾಂ. ‘ಡಿ’ ಆಕಾಶ್ ಶೆಟ್ಟಿ ಇವರನ್ನು ವಾರ್ಷಿಕ ಗೇಮ್ಸ್ ಫೆಸ್ಟ್ ಸಮಾರಂಭದಲ್ಲಿ ಪುರಸ್ಕರಿಸಲಾಯಿತು.
ಈ ಸಂದರ್ಭದಲ್ಲಿ ಎಸ್.ಎಮ್.ಎಸ್. ಪದವಿ ಪೂರ್ವ ಕಾಲೇಜಿನ ಸಮಾಜಶಾಸ್ತç ಪ್ರಾಧ್ಯಾಪಕ ಮತ್ತು ಪ್ರಸಿದ್ಧ ಕ್ರಿಕೆಟ್ ತರಬೇತುದಾರ ಶ್ರೀ ವಿಜಯ್ ಆಳ್ವ, ಕ್ರೋಢ ಬೈಲೂರಿನ ಶ್ರೀ ಶಂಕರನಾರಾಯಣ ಕ್ಯಾಶ್ಯೂ ಇಂಡಸ್ಟಿçÃಸ್ನ ಆಡಳಿತ ನಿರ್ದೇಶಕ ಶ್ರೀ ಎಚ್. ಶಶಿಧರ್ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ. ಉಮೇಶ್ ಶೆಟ್ಟಿ, ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ರಂಜಿತ್ ಟಿ. ಎನ್. ಉಪಸ್ಥಿತರಿದ್ದರು.