ಕೊಲ್ಲೂರು (ಜು,05): ಶ್ರೀ ಮೂಕಾಂಬಿಕಾ ದೇವಳದ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಇತ್ತೀಚೆಗೆ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಗೋಪಾಲಕೃಷ್ಣ ಜಿ ಕೆ ಯವರು ವಹಿಸಿದ್ದರು.ರಾಜ್ಯಮಟ್ಟದ ಯೋಗದ ಸಂಪನ್ಮೂಲ ವ್ಯಕ್ತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೆಟ್ಟಿನಹೊಳೆಯ ಶಿಕ್ಷಕ ಮಂಜುನಾಥ ದೇವಾಡಿಗಯವರು ಉದ್ಘಾಟಿಸಿ ಯೋಗದ ಉಪಯೋಗಗಳು ಹಾಗೂ ಯೋಗವನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.
ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ ಶೆಟ್ಟಿ ಹೊಸಮಠ ಸ್ವಾಗತಿಸಿ ರಾಷ್ಟ್ರೀಯ ಸೇವಾ ಯೋಜನ ಘಟಕದ ಅಧಿಕಾರಿ ರಾಮ ನಾಯಕ್ ಕೆ ಬಿ ಯವರು ವಂದಿಸಿ ಆಂಗ್ಲಭಾಷಾ ಉಪನ್ಯಾಸಕಿ ಪೂರ್ಣಿಮಾ ಎನ್ ಜೋಯಿಸ ನಿರೂಪಿಸಿದರು.