ದಾನದಲ್ಲೇ ಅತ್ಯಂತ ಶ್ರೇಷ್ಠ ದಾನ ಅದು ರಕ್ತದಾನ ಎಂದು ನಂಬಿದ ವ್ಯಕ್ತಿ ರಕ್ತದ ಆಪತ್ಪಾಂಧವ ಶ್ರೀ ಸತೀಶ್ ಸಾಲ್ಯಾನ್ ಮಣಿಪಾಲ್ . ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಸೇವೆಯಲ್ಲಿ ದೇವರನ್ನು ಕಾಣುವ ವ್ಯಕ್ತಿತ್ವ ಸತೀಶರದ್ದು. ಸತೀಶ್ ಸಾಲ್ಯಾನ್ ಓರ್ವ ರಕ್ತದಾನಿ, ರಕ್ತದ ಜೊತೆಗಾರ ಎನ್ನುವುದು ಎಷ್ಟು ಸತ್ಯವೋ ಅಷ್ಟೇ ಅವರೊಬ್ಬ ಅಪ್ಪಟ ಹೃದಯವಂತ, ಸಂವೇದನಶೀಲ ಮತ್ತು ಮಾನವೀಯತೆ ತುಂಬಿಕೊಂಡಿರುವ ಕರುಣಾಮಯಿ ಮತ್ತು ಮಗುವಿನಂತ ಮನಸ್ಸಿನವರು ಎಂದರೆ ಅತೀಶಯೋಕ್ತಿ ಆಗದು.
ಸತೀಶ್ ಅವರ ಬಳಿ ಬಂದು ಸರ್ ನಿಮ್ಮ ಸಹಾಯವನ್ನು ನಾನು ಜೀವನ ಪರ್ಯಂತ ಮರೆಯುವುದಿಲ್ಲ ಎಂದು ಹೇಳಿದವರು ಅನೇಕರು. ಏಕೆಂದರೆ ತುರ್ತು ಸಂಧರ್ಭದಲ್ಲಿ ರಕ್ತದ ಅಗತ್ಯತೆ ಕುರಿತು ಸತೀಶರಲ್ಲಿ ಮನವಿ ಮಾಡಿಕೊಂಡಾಗ ಧಾವಿಸಿ ಬಂದು ಸಹಸ್ರಾರು ಜನರಿಗೆ ಸಹಾಯ ಮಾಡಿರುವುದೇ ಅದಕ್ಕೆ ಸಾಕ್ಷಿ . ಸತೀಶರನ್ನು ನಡೆದಾಡುವ ಬ್ಲಡ್ ಬ್ಯಾಂಕ್ ಅಂತ ಕರೆದರೂ ತಪ್ಪಿಲ್ಲ . ಅನಾರೋಗ್ಯ ಪೀಡಿತರಿಗಾಗಿ ರಕ್ತ ಪೂರೈಕೆ ಮತ್ತು ಆಸ್ಪತ್ರೆ ಸೇರುವಲ್ಲಿಂದ ಹಿಡಿದು ಬಿಡುಗಡೆಯಾಗುವ ತನಕವೂ ರೋಗಿಗಳ ಮನೆ ಮಗನಂತೆ ಸದಾ ಸಹಾಯ ,ಸಹಕಾರವನ್ನು ನೀಡುವ ಹೃದಯವಂತ ಸತೀಶ್ ಸಾಲಿಯಾನ್.
ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ).ಉಡುಪಿ ಇದರ ಅಧ್ಯಕ್ಷರಾದ ಸತೀಶ್ ಸಾಲ್ಯಾನ್ ಮಣಿಪಾಲ್ ಚಂದು ಮರಕಾಲ ,ಗಿರಿಜಾರವರ ಮೂರು ಮಕ್ಕಳಲ್ಲಿ ಇಬ್ಬರು ಅಕ್ಕಂದಿರ ಮುದ್ದಿನ ತಮ್ಮ. ಡಿಪ್ಲೋಮೋ ಇನ್ ಆಟೋಮೊಬೈಲ್ ಇಂಜಿನಿಯರಿಂಗ್ ಆಗಿರುವ ಸತೀಶ್ ಮಣಿಪಾಲದ ನಿವಾಸಿ.
ನಾಡೋಜ ಡಾ.ಜಿ.ಶಂಕರ್ ಅವರಿಂದ ಪ್ರೇರಣೆ ಪಡೆದು 2007ರಲ್ಲಿ ಮೊಗವೀರ ಯುವ ಸಂಘಟನೆ (ರಿ.), ಉಡುಪಿ ಇದರ ಸಕ್ರೀಯ ಸದಸ್ಯರಾಗಿ 2020 ರ ವರೆಗೆ ಯಾವುದೇ ಪದವಿ ಇಲ್ಲದೆ ವಿವಿಧ ಸಂಘಟನೆಗಳ ಸಹಕಾರದಲ್ಲಿ ಹಲವು ರಕ್ತದಾನ ಶಿಬಿರವನ್ನು ಉಡುಪಿ ಹಾಗೂ ದ.ಕ ಜಿಲ್ಲೆಯಲ್ಲಿ ಆಯೋಜಿಸಿದ್ದಾರೆ .ಶ್ರೀಯುತ ಸತೀಶ್ ಸಾಲ್ಯಾನ್ ಅವರು ಒರ್ವ ರಕ್ತದಾನಿಯಾಗಿದ್ದು ಇದುವರೆಗೆ 50 ಬಾರಿ ರಕ್ತದಾನ ಮಾಡಿದ ಬ್ಲಡ್ ಮ್ಯಾನ್ ಆಗಿದ್ದಾರೆ.
ಮಣಿಪಾಲ ಕಸ್ತೂರ್ ಬಾ ಆಸ್ಪತ್ರೆ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಹಾಗೂ ಕರ್ನಾಟಕದ ವಿವಿಧ ಆಸತ್ರೆ ಗಳಿಗೆ ಬರುವ ಬಡ ರೋಗಿಗಳಿಗೆ ಯಾಮದೇ ಪ್ರತಿಫಲಾಪೇಕ್ಷೆ ಇಲ್ಲದೇ ಕಳೆದ 17 ವರ್ಷಗಳಿಂದ ಸೂಕ್ತ ಸಮಯದಲ್ಲಿ ರಕ್ತದ ಪೂರೈಕೆ ಮಾಡಿ ರಕ್ತದ ಆಪತ್ಪಾಂಧವ ಎಂಬ ಬಿರುದನ್ನು ಪಡೆದಿದ್ದಾರೆ.
2020 ಮಾರ್ಚ್ ತಿಂಗಳಲ್ಲಿ ವಿಶ್ವಕ್ಕೆ ಕಾಡಿದ ಮಹಾಮಾರಿ ಕರೋನ ಸಂದರ್ಭದಲ್ಲಿ ಉಡುಪಿ ಜಿಲ್ಲೆಯಲ್ಲಿ ತೀವ್ರ ರಕ್ತದ ಕೊರತೆಯನ್ನು ಮನಗಂಡ ಇವರು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ ಸಂಸ್ಥೆಯನ್ನು ಹುಟ್ಟುಹಾಕಿ ಇದರ ಸ್ಥಾಪಕ ಅಧ್ಯಕ್ಷ ಹಾಗೂ ಅಧ್ಯಕ್ಷರು ಆಗಿದ್ದಾರೆ. ಮಾರ್ಚ್ 2020ರಿಂದ ಇದುವರೆಗೆ ವಿವಿಧ ಸಂಘಟನೆಗಳ ಸಹಕಾರದಲ್ಲಿ ಉಡುಪಿ ದ.ಕ ಉ.ಕ ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಗೂ ವಿದೇಶದಲ್ಲಿ ( ದುಬೈ) ಒಟ್ಟು 213 ರಕ್ತದಾನ ಶಿಬಿರವನ್ನು ಆಯೋಜಿಸಿದ್ದಾರೆ. ಇದುವರೆಗೆ ಒಟ್ಟು ಕೇವಲ ಮೂರುವರೆ ವರ್ಷದ ಅವಧಿಯಲ್ಲಿ 25000 ( ಇಪ್ಪತ್ತೆದುಸಾವಿರ ) ಯೂನಿಟ್ ರಕ್ತವನ್ನು ಸಂಗ್ರಹಿಸಿ ರಾಜ್ಯದ ಅತ್ಯಂತ ಪ್ರತಿಷ್ಟಿತ ಸಂಸ್ಥೆ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಅಭಯಹಸ್ತ ಸಂಸ್ಥೆಯ ರಕ್ತದಾನ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಬೆಂಗಳೂರು 2021 ನ ಸಾಲಿನಲ್ಲಿ ರಾಜ್ಯದಲ್ಲೆ ಅತೀ ಹೆಚ್ಚು ರಕ್ತವನ್ನು ಸಂಗ್ರಹಿಸಿದ ಸಂಸ್ಥೆ ಎಂದು ಗುರುತಿಸಿ ಬೆಂಗಳೂರಿನಲ್ಲಿ ಸನ್ಮಾನಿಸಲ್ಪಟ್ಟಿದೆ.
ಬ್ಲಡ್ ಮ್ಯಾನ್ ಸತೀಶ್ ಸಾಲ್ಯಾನ್ ಅವರ ಸಾಧನೆಯನ್ನು ಗುರುತಿಸಿ,2016 ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ. ಮೊಗವೀರ ಯುವ ಸಂಘಟನೆ (ರಿ.), ಉಡುಪಿ ವತಿಯಿಂದ ಹಲವು ಬಾರಿ ನಾಡೋಜ ಡಾ.ಜಿ. ಶಂಕರ್ ಅವರ ಉಪಸ್ಥಿತಿಯಲ್ಲಿ ಸನ್ಮಾನದ ಗೌರವಕ್ಕೆ ಪಾತ್ರರಾಗಿದ್ದಾರೆ. 2 ಬಾರಿ ಉಡುಪಿ ಜಿಲ್ಲಾಧಿಕಾರಿಯಿಂದ ಸನ್ಮಾನ, ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರಿಂದ ಮಣಿಪಾಲ ಕಂಟ್ರಿ ಇನ್ ಮಣಿಪಾಲದಲ್ಲಿ ಸನ್ಮಾನ,2022ರಲ್ಲಿ ಮೊಗವೀರ್ಸ್ ಯುಎಇ ವತಿಯಿಂದ ವಿದೇಶದಲ್ಲಿ ( ದುಬೈ, ಯುಎಇ) ಸನ್ಮಾನ.2023ರಲ್ಲಿ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ ಸಂಸ್ಥೆಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ, ಕರ್ನಾಟಕದಾದ್ಯಂತ 75ಕ್ಕೂ ಅಧಿಕ ಸಂಘ ಸಂಸ್ಥೆಯಿಂದ ಸನ್ಮಾನ ಮುಡಿಗೇರಿಸಿಕೊಂಡಿರುವುದು ಗೌರವ ಇವರಿಗೆ ಸಲ್ಲುತ್ತದೆ.
ಆದರೆ ಯಾವುದೇ ಪ್ರತಿಫಲಾಪೇಕ್ಷೆಯನ್ನು ಬಯಸದ ಸತೀಶರ ಸೇವೆಗಳು ಮೂಲೆಗುಂಪಾಗಿರುವುದು ನೂರಕ್ಕೆ ನೂರು ಸತ್ಯವಾದ ವಿಚಾರವಾಗಿದೆ . ಸತೀಶ್ ಅವರ ಈ ಸಮಾಜ ಸೇವೆಯ ಚಿತ್ರಣ ಓದುವಾಗ ನಮಗೆ ನಗಣ್ಯವಾಗಿ ಕಾಣಬಹುದು. ಗೊತ್ತಿಲ್ಲದ ದೊಡ್ಡ ಆಸ್ಪತ್ರೆಯಲ್ಲಿ ನಮ್ಮ ಫ್ಯಾಮಿಲಿ ಮೆಂಬರ್ ಯಾರಾದರೂ ಅಪಾಯಕಾರಿ ಪರಿಸ್ಥಿತಿಯಲ್ಲಿ ಅಡ್ಮಿಟ್ ಇದ್ದಾಗ ಸತೀಶ್ ರಂತ ಆಪದ್ಭಾಂಧವ ಒಬ್ಬ ಸಿಕ್ಕರೆ ಸತ್ಯದ ಈಶನೇ ಸಿಕ್ಕಂತೆ ಬಾಸವಾಗುವುದರಲ್ಲಿ ಸಂಶಯವಿಲ್ಲ .
ಬಡ ರೋಗಿಗಳ ಮತ್ತು ಬಡವರ ಸೇವೆ ಮಾಡುವ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಸತೀಶರನ್ನು ಹುಡುಕಿಕೊಂಡು ಬಂದವರಿಗೆ ಎಂದೂ ಇವರು ನಿರಾಸೆ ಮಾಡಿದವರಲ್ಲ ಎನ್ನುವ ಮಾತನ್ನು ಹಲವಾರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಸ್ವತಃ ಸತೀಶರೇ ಹೇಳುವಂತೆ ಉಡುಪಿ, ಮಣಿಪಾಲ ಮತ್ತು ಮಂಗಳೂರಲ್ಲಿ ರಕ್ತದ ಕೊರತೆಯಿಂದ ಸತ್ತವರು ಯಾರು ಇರಲಿಕ್ಕೆ ಇಲ್ಲ.ಯಾಕೆಂದರೆ ನಿರಂತರವಾಗಿ ರಕ್ತದಾನ ಶಿಬಿರವನ್ನುಆಯೋಜಿಸಿ ಸೂಕ್ತ ಸಮಯದಲ್ಲಿ ರಕ್ತ ಪೂರೈಸುವ ಕೆಲಸ ನಮ್ಮ ಕರಾವಳಿ ಭಾಗದಲ್ಲಿ ನಡೆಯುತ್ತಿದೆ. ಹಲವಾರು ರಕ್ತದಾನ ಶಿಬಿರವನ್ನು ಆಯೋಜಿಸಿ ರಕ್ತದ ಪೂರೈಕೆಯನ್ನು ನಿಭಾಯಿಸಿ ಸತತ 213 ಕಡೆಗಳಲ್ಲಿ ರಕ್ತದಾನ ಶಿಬಿರ ನಡೆಸಿಕೊಂಡು ಮುನ್ನುಗುತ್ತಿರುವುದು ಸತೀಶರ ಈ ಸೇವೆ ಅನನ್ಯ ಮತ್ತು ಅಮೋಘ. ಅದೆಷ್ಟೋ ಬಾರಿ ಆಯುಷ್ಮಾನ್ ಯೋಜನೆಯನ್ನು ಪಡೆದುಕೊಳ್ಳುವಲ್ಲಿ ಸಾಧ್ಯವಾಗದ ಪರಿಸ್ಥಿತಿಯಲ್ಲೂ ಸಂಭಂದಪಟ್ಟ ಸರ್ಕಾರಿ ಇಲಾಖೆ ಮತ್ತು ಆಸ್ಪತ್ರೆಯ ವೈದ್ಯರಿಗೆ ತಿಳಿಸಿ ರೋಗಿಗಳಿಗೆ ಸಹಾಯ ಮಾಡಿದ ಉದಾಹರಣೆಗಳು ಅನೇಕ. ಇದು ರೋಗಿಗಳ ಕುರಿತಾದ ಇವರ ನೈಜ ಕಾಳಜಿಗೆ ಸಾಕ್ಷಿಯoತಿದೆ. ಇವರ ಸಮಾಜ ಸೇವೆ ಮತ್ತು ಜನಪರ ಕಾರ್ಯಕ್ರಮಗಳು ಹೀಗೆ ಸದಾ ಸಾಗುತ್ತಿರಲಿ.ಸದಾ ಸಮಾಜ ಸೇವೆಯೊಂದಿಗೆ ಸಂಸಾರ ಜೀವನ ನಡೆಸುತ್ತಿರುವ ಇವರಿಗೆ ಒಂದು ಗಂಡು ಒಂದು ಹೆಣ್ಣು ಅವಳಿ ಮಕ್ಕಳು (ಸಾಜನ್, ಸಂಜನಾ) ಪತ್ನಿ ನಯನರವರು ಇವರ ಎಲ್ಲಾ ಸಾಮಾಜಿಕ ಕಾರ್ಯಕ್ರಮದಲ್ಲಿ ಜೊತೆಯಾಗಿರುವ ಸುಂದರ ಸಂಸಾರ. ಸತೀಶ್ ಸತೀಶ್ ಸಾಲ್ಯಾನ್ ರವರ ಮಾನವೀಯ ನೆಲೆಯ ಈ ಮಹತ್ಕಾರ್ಯಕ್ಕೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಹಲವಾರು ಸನ್ಮಾನಗಳು ಶ್ರೀಯುತರನ್ನು ಹುಡುಕಿ ಬರಲಿ ಎಂದು ಆಶಿಸೋಣಾ. .
ರಕ್ತದ ಆಪದ್ಬಾಂಧವನ ಹುಟ್ಟಿದ ದಿನದಂದು ರಕ್ತದಾನ ಮಾಡೋಣ ಬನ್ನಿ
ಕಳೆದ 16 ವರ್ಷಗಳಿಂದ ರಕ್ತದಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತ ವರ್ಷದ 365 ದಿನವೂ ತುರ್ತು ಸಂದರ್ಭದಲ್ಲಿ ನ ರಕ್ತದ ವ್ಯವಸ್ಥೆಗಾಗಿ ಶ್ರಮಿಸುವ ರಕ್ತದ ಆಪದ್ಬಾಂಧವನ ಸತೀಶ್ ಸಾಲ್ಯಾನ ರ 49 ನೇ ಹುಟ್ಟುಹಬ್ಬವನ್ನು ಇದೇ ಅಗಸ್ಟ್ 11ರಂದು ಬಹಳ ಅರ್ಥಪೂರ್ಣವಾಗಿ ಆಚರಿಸಲು ವಿವಿಧ ಸಂಘಟನೆಗಳು ಸಂಘ ಸಂಸ್ಥೆಗಳು ಮುಂದೆ ಬಂದಿರುವುದು ಸತೀಶ್ ಸ್ಯಾಲಿನ್ ರವರ ನಿಸ್ವಾರ್ಥ ಸೇವೆಗೆ ಹಿಡಿದ ಕೈಗನ್ನಡಿಯಂತಿದೆ.
ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.), ಉಡುಪಿ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ (ಉತ್ತರ ಕನ್ನಡ ವಿಭಾಗ) ಡಿ.ಡಿ. ಗ್ರೂಪ್, ನಿಟ್ಟೂರು,ರಾಷ್ಟ್ರೀಯ ಮೀನುಗಾರರ ಸಂಘ (ರಿ) ಕರ್ನಾಟಕ ರಾಜ್ಯ. ಶೌರ್ಯ ವಿಪತ್ತು ನಿರ್ವಹಣಾ ಘಟಕ, ಬಾರಕೂರು, ಹೆಚ್.ಡಿ.ಎಫ್.ಸಿ.ಬ್ಯಾಂಕ್ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಕೆ.ಎಂ.ಸಿ., ಮಣಿಪಾಲದ ರಕ್ತ ಕೇಂದ್ರದಲ್ಲಿ ಇದೇ ಆಗಸ್ಟ್ 11ರ ಆದಿತ್ಯವಾರದಂದು ಆಯೋಜಿಸಲಾಗಿದೆ.
ಸಭಾ ಕಾರ್ಯಕ್ರಮ
ಕೆಎಂಸಿ ಮಣಿಪಾಲದ ಡೀನ್ ಡಾl ಪದ್ಮರಾಜ್ ಹೆಗ್ಡೆ ಉದ್ಘಾಟನೆ ಮಾಡಲಿದ್ದು ಗೌರವಾನ್ವಿತ ಅತಿಥಿ ನೆಲೆಯಲ್ಲಿ ಕೆ ಎಚ್ ಮಣಿಪಾಲದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಆನಂದ್ ವೇಣುಗೋಪಾಲ್ ಆಗಮಿಸಲಿದ್ದು, ಕೆಎಚ್ ಬ್ಲಡ್ ಸೆಂಟರ್ ಮಣಿಪಾಲ ಇದರ ಪ್ರೊಫೆಸರ್ ಮತ್ತು ಮುಖ್ಯಸ್ಥರು, IHBT ಡಾ lಶಮೀ ಶಾಸ್ತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿ ನೆಲೆಯಲ್ಲಿ ಮಣಿಪಾಲದ ಕೆ ಹೆಚ್ ಆಸ್ಪತ್ರೆಯ ಪ್ರೊಫೆಸರ್ ಹಾಗೂ ಜನರಲ್ ಸರ್ಜರಿ ವಿಭಾಗದ ಮುಖ್ಯಸ್ಥರಾದ ಕೆಎಚ್ ಡಾlಪ್ರಸಾದ್ ಎಸ್ ಎಸ್, ಮಣಿಪಾಲದ ಕೆಎಚ್ ಆಸ್ಪತ್ರೆಯ ಪ್ರೊಫೆಸರ್ ಮತ್ತು ಎಂಡೊ ಕ್ರಿನೋಲೋಜಿ ಮುಖ್ಯಸ್ಥರಾದ ಡಾI ಸಹನಾ ಶೆಟ್ಟಿ .ಹೆಚ್ಚುವರಿ ಪ್ರಾಧ್ಯಾಪಕ ,ಹೃದಯ ರಕ್ತನಾಳದ ಮತ್ತು ಎದೆಗೂಡಿನ ಶಸ್ತ್ರಚಿಕಿತ್ಸೆ ವೈದ್ಯರಾದ ಡಾ ಗುರುಪ್ರಸಾದ್ ರೈ. ಡಿ, ರಾಷ್ಟ್ರೀಯ ಮೀನುಗಾರರ ಸಂಘ ಕರ್ನಾಟಕ (ಆರ್).ದ ರಾಜ್ಯಾಧ್ಯಕ್ಷರಾದ ಡಾ ದೇವಿಪ್ರಸಾದ್ ಹೆಜಮಾಡಿ, ಕೆ ಹೆಚ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ಅಸೋಸಿಯೇಟೆಡ್ ಪ್ರೊಫೆಸರ್ ಡಾIರಾಜೇಶ್ ನಾಯರ್,ಇಂಡಿಯನ್ ರೆಡ್ಕ್ರಾಸ್ ಸೊಸೈಟಿ (ಆರ್) ಬೆಂಗಳೂರು ಇದರ ಖಜಾಂಚಿ ಶ್ರೀ ಯತೀಶ್ ಬೈಕಂಪಾಡಿ,ಕೃಷ್ಣ ಕುಟೀರ ಮಣಿಪಾಲದ ವ್ಯವಸ್ಥಾಪಕ ಪಾಲುದಾರ ಶ್ರೀ ರಾಘವೇಂದ್ರ ಸುವರ್ಣ ಉಪಸ್ಥಿತರಿರಲಿದ್ದಾರೆ .
ರಕ್ತದಾನಿಗಳಿಗೆ ಗೌರವ ಸ್ಮರಣಿಕೆ ಹಾಗೂ ಪ್ರಶಂಸ ಪತ್ರ ವಿತರಣಾ ಸಮಾರಂಭ
ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ, ಜಿಲ್ಲಾ ಆಸ್ಪತ್ರೆ ಉಡುಪಿ ಇದರ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಎಚ್ .ಅಶೋಕ್, ಕರ್ನಾಟಕ ಸರಕಾರ ಮಾಜಿ ಸಚಿವರಾದ ಶ್ರೀ ಪ್ರಮೋದ್ ಮಧ್ವರಾಜ್, ಉಡುಪಿಯ ಸಮಾಜಸೇವಕರಾದ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮೂಲ್ಕಿ, ಉಡುಪಿಯ ಕಾಂಗ್ರೆಸ್ ಮುಖಂಡರಾದ ಶ್ರೀ ಪ್ರಸಾದ್ ಕಾಂಚನ್ ,ಸಾಯಿರಾಧಾ ಗ್ರೂಫ್ಸ್ ಉಡುಪಿ ಇದರ ಆಡಳಿತ ನಿರ್ದೇಶಕರಾದ ಶ್ರೀ ಮನೋಹರ್ ಶೆಟ್ಟಿ, ವೈಕುಂಠ ಕಾಲೇಜ್ ಆಫ್ ಲಾ ಉಡುಪಿಯ ನಿರ್ದೇಶಕರಾದ ಡಾ. ನಿರ್ಮಲಾ ಕುಮಾರಿ,, ಡಾ ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಕುಂದಾಪುರ ಉಪಪ್ರಾಂಶುಪಾಲರಾದ ಡಾ.ಚೇತನ್ ಶೆಟ್ಟಿ ಕೆ,, ಶ್ರೀ ಕೃಷ್ಣಪ್ರಸಾದ್ ಗ್ರೂಫ್ ಆಫ್ ಇಂಡಸ್ಟ್ರೀಸ್ ವಂಡಾರು ಉಡುಪಿಯ ಆಡಳಿತ ನಿರ್ದೇಶಕರಾದ ಶ್ರೀ ಸಂಪತ್ ಶೆಟ್ಟಿ, ಉಜ್ವಲ್ ಡೆವಲಪರ್ಸ್ ಉಡುಪಿಯ ಶ್ರೀ ಪುರುಷೋತ್ತಮ ಶೆಟ್ಟಿ .ಬಿಜೆಪಿ ಮುಖಂಡರಾದ ಸಂದೀಪ್ ಶೆಟ್ಟಿ ಎಕ್ಕಾರು, ಆದಿತಿ ಬಿಲ್ಡರ್ಸ್ ಉಡುಪಿಯ ಕೆ.ರಂಜನ್, ಮಾತೃಶ್ರೀ ಸೇವಾ ಸಂಘ ಮಣಿಪಾಲದ ಪ್ರವರ್ತಕರಾದ, ಶ್ರೀ ಬಳ್ಕೂರು ಗೋಪಾಲ ಆಚಾರ್ಯ, ಶ್ರೀ ಲಾಜಿಸ್ಟಿಕ್ಸ್ ಉಡುಪಿಯ ಪ್ರವೀಣ್ ಪೂಜಾರಿ, ಎಚ್ ಎಫ್ ಸಿ ಬ್ಯಾಂಕ್ ಮಂಗಳೂರು, ಇದರ ಹಿರಿಯ ಪ್ರಬಂಧಕರಾದ ಶ್ರೀ ಮನೋಜ್ ಪುತ್ರನ್ ಭಾಗವಹಿಸಲಿದ್ದಾರೆ.
ವರದಿ : ಪ್ರವೀಣ್ ಮೊಗವೀರ ಗಂಗೊಳ್ಳಿ –7411420325