ಉಡುಪಿ (ಆ,14): ರಕ್ತದ ಆಪತ್ಬಾಂಧವ ಸತೀಶ್ ಸಾಲ್ಯಾನ್ ಮಣಿಪಾಲ್ ಅಭಿಮಾನಿ ಬಳಗ ಉಡುಪಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಮತ್ತು ಉತ್ತರ ಕನ್ನಡ, ಡಿ ಡಿ ಗ್ರೂಫ್ ನಿಟ್ಟೂರು, ಶೌರ್ಯ ವಿಪತ್ತು ಘಟಕ , ಬಾರ್ಕೂರು,ಎಚ್ ಡಿ ಎಫ್ ಸಿ ಬ್ಯಾಂಕ್ ಮಂಗಳೂರು, ರಾಷ್ಟ್ರೀಯ ಮೀನುಗಾರರ ಸಂಘ ರಿ. ಕರ್ನಾಟಕ , ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ ಇವರ ಸಹಕಾರದಲ್ಲಿ ರಕ್ತದ ಆಪತ್ಬಾಂಧವ ಸತೀಶ್ ಸಾಲ್ಯಾನ್ ಮಣಿಪಾಲ್ ಅವರ ಹುಟ್ಟುಹಬ್ಬದ ದಿನದಂದು ಇಂಟರೆಕ್ಟ್ ಹಾಲ್ ಮಣಿಪಾಲ ಇಲ್ಲಿ ಆಗಸ್ಟ್ 11 ರ ಆದಿತ್ಯವಾರ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಕೆಎಂಸಿ ಮಣಿಪಾಲ ಇದರ ಡೀನ್, ಡಾ. ಪದ್ಮರಾಜ್ ಹೆಗ್ಡೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ರಕ್ತದಾನಕ್ಕಿಂತ ಮಹದಾನ ಬೇರೊಂದಿಲ್ಲ, ರಕ್ತದಾನಿ ಸೂಕ್ತ ಸಮಯದಲ್ಲಿ ರಕ್ತದಾನ ಮಾಡದಿದ್ದರೆ ಯಾವುದೇ ವೈದ್ಯರಿಗೂ ರೋಗಿಗಳ ಜೀವ ಉಳಿಸುವುದು ದೊಡ್ಡ ಸವಾಲು, ಸತೀಶ್ ಸಾಲ್ಯಾನ್ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಹಾಗೂ ವಿವಿಧ ಸಂಘಟನೆಗಳು ರಕ್ತದಾನದ ಮೂಲಕ ಆಚರಿಸುತ್ತಿರುವುದು ಮಾದರಿಯ ಕಾರ್ಯಕ್ರಮ.ಇಂದು ನಾನು ಕೂಡ ರಕ್ತದಾನ ಮಾಡುತ್ತಿದ್ದು ಪ್ರತಿ ಫಲಪೇಕ್ಷೆ ಇಲ್ಲದ ಮಾನವೀಯ ಸೇವೆಗೆ ನಿಮ್ಮೊಂದಿಗೆ ಕೈಜೋಡಿಸುದಾಗಿ ತಿಳಿಸಿದರು.ರಕ್ತದಾನದಂತೆ ಇತ್ತೀಚಿಗೆ ಕಸ್ತೂರಬಾ ಆಸ್ಪತ್ರೆ ಆರಂಭಿಸಿರುವ ತಾಯಿ ಎದೆ ಹಾಲು ದಾನ ಕೂಡ ಅತ್ಯಂತ ಮಾನವೀಯ ದಾನ.ಇಂತಹ ಮಾನವೀಯ ಕಾರ್ಯಕ್ರಮಗಳಿಗೆ ಕಸ್ತೂರಬಾ ಮಣಿಪಾಲ ನಿರಂತರ ಸಹಕಾರ ನೀಡಲಿದೆ ಎಂದರು.
ಡಾ.ಶಮಿ ಶಾಸ್ತ್ರಿ, ನಿರ್ದೇಶಕರು ರಕ್ತ ಕೇಂದ್ರ ಕೆಎಂಸಿ ಮಣಿಪಾಲ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ಈ ಸಂದರ್ಭದಲ್ಲಿ ಶ್ರೀ ಪುರುಷೋತ್ತಮ ಶೆಟ್ಟಿ, ಉಜ್ವಲ್ ಡೆವಲಪರ್ಸ್ ಉಡುಪಿ, ಡಾ. ಪ್ರಸಾದ್ ಎಸ್ ಎಸ್ , ಪ್ರೋಫೆಸರ್ ಮತ್ತು ಮುಖ್ಯಸ್ಥರು ,ಜನರಲ್ ಸರ್ಜರಿ ಕೆಎಂಸಿ ಮಣಿಪಾಲ,ಡಾ. ಸಹನಾ ಶೆಟ್ಟಿ, ಪ್ರೊಫೆಸರ್ ಮತ್ತು ಮುಖ್ಯಸ್ಥರು, ಎಂಡೊಕ್ರಿನೊಲಾಜಿ ಕೆಎಂಸಿ ಮಣಿಪಾಲ,ಡಾ. ಗುರುಪ್ರಸಾದ್ ರೈ ಡಿ, ಹೃದಯ ಶಸ್ತ್ರಚಿಕಿತ್ಸೆ ತಜ್ಞರು ಕೆಎಂಸಿ ಮಣಿಪಾಲ,ಡಾ.ದೇವಿಪ್ರಸಾದ್ ಹೆಜಮಾಡಿ, ರಾಜ್ಯ ಅಧ್ಯಕ್ಷರು, ರಾಷ್ಟ್ರೀಯ ಮೀನುಗಾರರ ಸಂಘ (ರಿ) ಕರ್ನಾಟಕ,ಡಾ.ರಾಜೇಶ್ ನಾಯರ್ ನರ ಶಸ್ತ್ರಚಿಕಿತ್ಸೆ ತಜ್ಞರು ಕೆಎಂಸಿ ಮಣಿಪಾಲ, ಶ್ರೀ ಯತೀಶ್ ಬೈಕಂಪಡಿ, ಕೋಶಾಧಿಕಾರಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ( ರಿ) ಬೆಂಗಳೂರು ಉಪಸ್ಥಿತರಿದ್ದರು.
ರಕ್ತದ ಆಪತ್ಬಾಂದವ ಸತೀಶ್ ಸಾಲ್ಯಾನ್ ಮಣಿಪಾಲ್ ಪ್ರಸ್ತಾವಿಕ ಹಾಗೂ ಅತಿಥಿಗಳನ್ನು ಸ್ವಾಗತಿಸಿದರು. ದೀಪಕ್ ಎಳ್ಳಾರೆ ಧನ್ಯವಾದ ಅರ್ಪಿಸಿದರು. ಸಚಿನ್ ಕಾರ್ಯಕ್ರಮ ನಿರೂಪಿಸಿದರು . ಈ ಯಶಸ್ವಿ ರಕ್ತದಾನ ಶಿಬಿರದಲ್ಲಿ 173 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.