ಇಂದಿನ ದಿನಗಳಲ್ಲಿ ಯಕ್ಷಗಾನದ ಕಲಾ ಪ್ರಕಾರಗಳಲ್ಲೊಂದಾದ “ಚಿಕ್ಕಮೇಳ”ವನ್ನು ಸತತ ಹತ್ತು ವರ್ಷ ನಡೆಸಿಕೊಂಡು ಬರುವುದೆಂದರೆ ಅದೊಂದು ಸಾಹಸವೇ ಸರಿ. ಈ ವರ್ಷ ಇದ್ದ ಚಿಕ್ಕಮೇಳ ಬರುವ ವರ್ಷ ಇರುವುದಿಲ್ಲ. ಹೀಗಿರುವಾಗ ಆರ್ಥಿಕತೆಯ ಮುಖ ನೋಡದೆ ಕಲೆ ಮತ್ತು ಸೇವೆಯ ಮನೋಭಾವದಿಂದ ಮಳೆಗಾಲದಲ್ಲಿ ಮನೆಯೊಳಗೆ ಕಲಾದೇವಿಯ ಸಾಕ್ಷಾತ್ಕರಿಸುವ ಶ್ರದ್ಧಾಭಕ್ತಿಯ ಆರಾಧನಾ ಕಲೆಯನ್ನು ಕಳೆದ ಹತ್ತು ವರ್ಷಗಳಿಂದ ಮಾಡುತ್ತ ಬಂದವರು ಶ್ರೀ ತಿಮ್ಮಪ್ಪ ದೇವಾಡಿಗ ಮತ್ತು ಶ್ರೀ ನಾಗರಾಜ ಭಟ್. ಈ ಚಿಕ್ಕ […]
Category: Uncategorized
ಉಚ್ಚಿಲ ಮಹಾಲಕ್ಷ್ಮೀ ಸ್ವರ್ಣ ಕಳಶ ಸಮಿತಿ :ಕುಂದಾಪುರ ವಲಯದ ಸಭೆ
ಕುಂದಾಪುರ (ಸೆ,18): ಉಚ್ಚಿಲ ಮಹಾಲಕ್ಷ್ಮೀ, ಬೆಣ್ಣೆಕುದ್ರು ಕುಲಮಾಸ್ತಿ, ಮತ್ತು ಬಗ್ವಾಡಿ ಮಹಿಷಮರ್ದಿನಿ ಈ ಮೂರು ಹೋಬಳಿಗಳ ಆದಿ ಶಕ್ತಿ ಮೂರು ದೇವತೆಗಳಲ್ಲಿ ಒಂದಾದ ಉಚ್ಚಿಲ ಮಹಾ ಲಕ್ಷ್ಮೀ ದೇವಿಗೆ ಸ್ವರ್ಣ ಕಳಶ ಅರ್ಪಿಸಲು ನಿಧಿ ಸಂಗ್ರಹಿಸುವ ಸಲುವಾಗಿ ಕುಂದಾಪುರ ವಲಯದ ವತಿಯಿಂದ ಸಪ್ಟೆಂಬರ್,18ರಂದು ಹೆಮ್ಮಾಡಿಯ ಮತ್ಸ್ಯ ಜ್ಯೋತಿ ಸಭಾಗೃಹದಲ್ಲಿಸಭೆಯನ್ನು ಆಯೋಜಿಸಲಾಗಿತ್ತು. ಬೈಂದೂರು, ಹೆಮ್ಮಾಡಿ, ಕುಂದಾಪುರ, ಹಾಲಾಡಿ ಕೋಟೇಶ್ವರ, ಕೋಟ, ಸಾಲಿಗ್ರಾಮ, ಮಂದಾರ್ತಿ ಒಳಗೊಂಡ ಸ್ವರ್ಣ ಕಲಶ ಸಮಿತಿ ಕುಂದಾಪುರ ಇದರ ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷರಾದ ಉದಯಕುಮಾರ್ ಹಟ್ಟಿಯಂಗಡಿ, […]
ಡಾ.ಬಿ.ಬಿ. ಹೆಗ್ಡೆ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ – ಸನ್ಮಾನ ಕಾರ್ಯಕ್ರಮ
ಕುಂದಾಪುರ ( ಸೆ.7): ಎಲ್ಲಾ ವೃತ್ತಿಗಳಿಗಿಂತ ಶ್ರೇಷ್ಠವಾದ ವೃತ್ತಿ ಶಿಕ್ಷಕ ವೃತ್ತಿ. ಅದೆಷ್ಟೆ ಜನರಿದ್ದರೂ ಕೂಡ ನನಗೆ ಕಲಿಸಿದ ಶಿಕ್ಷಕರು ಎದುರಿಗೆ ಬಂದರೆ ಅವರ ಕಾಲಿಗೆರಗುತ್ತೇನೆ. ಶಿಕ್ಷಕರೆಂದರೆ ನನಗೆ ಅಪಾರ ಗೌರವ. ತಂದೆ ತಾಯಿಗೆ ಮೂರು ಮಕ್ಕಳಿದ್ದರೆ ಯಾವ ಮಗು ಬುದ್ಧಿವಂತ ಎಂದು ಗುರುತಿಸುವುದು ಕಷ್ಟ ಆಗಬಹುದು. ಆದರೆ ತರಗತಿಯಲ್ಲಿ ಸಾವಿರ ವಿದ್ಯಾರ್ಥಿಗಳಿದ್ದರೂ ಕೂಡ ಪ್ರತಿ ಮಗುವಿನ ಸಾಮರ್ಥ್ಯವನ್ನು ಅಧ್ಯಾಪಕರು ಗುರುತಿಸುವಲ್ಲಿ ಸಫಲರಾಗುತ್ತಾರೆ. ಕರೋನಾ ಕಾರಣದಿಂದಾಗಿ ಹದಗೆಟ್ಟ ವಿದ್ಯಾರ್ಥಿಗಳ ಶೈಕ್ಷಣಿಕ […]
ಬೆಳ್ಳಾಲ : ಗುರುಪೂಜೆಯಲ್ಲಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಭಾಗಿ
ಬೆಳ್ಳಾಲ (ಆ, 01) : ಇಲ್ಲಿನ ಮೂಡುಮುಂದದಲ್ಲಿ ಆಯೋಜಿಸಿದ ಅರ್ಪಣೆ ಮತ್ತು ಅರ್ಚನೆಗೆ ಪ್ರತೀಕವಾದ ಗುರುಪೂಜೆಯಲ್ಲಿ ಬೈಂದೂರು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಭಾಗವಹಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾದ ನಮಗೆಲ್ಲ ಭಗವಾ ಧ್ವಜ ಗುರು ಸಮಾನವಾದುದು, ರಾತ್ರಿಯ ಕತ್ತಲನ್ನು ಹೊಡೆದೋಡಿಸುವ ಅರುಣೋದಯದ ಬಣ್ಣವೂ ಕೇಸರಿಯೇ ಆಗಿದ್ದು, ಹೀಗಾಗಿ ನಮಗಿದು ಜ್ಞಾನದ ಸಂಕೇತ, ಎಲ್ಲ ಶಕ್ತಿಗಳ ಶಕ್ತಿಯಾಗಿರುವ ಭಗವಾದ್ವಜಕ್ಕೆ ನಮ್ಮಲ್ಲಿ ಗುರುವಿನ ಸ್ಥಾನವಿದೆ, ಇದರೆದುರು ತಲೆಬಾಗುತ್ತ ಗುರುವಿಗೆ […]
ಕೃಷಿಯ ಬಗ್ಗೆ ವಿದ್ಯಾರ್ಥಿಗಳು ಒಲವು ಮೂಡಿಸಿಕೊಳ್ಳಬೇಕು – ಶ್ರೀ ಮುರಳಿ ಕಡೆಕಾರು
ಕಲ್ಯಾಣಪುರ(ಜು ,16): ಇಲ್ಲಿನ ಮಿಲಾಗ್ರಿಸ್ ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ಜುಲೈ 15 ರ ಗುರುವಾರದಂದು ವಿದ್ಯಾರ್ಥಿಗಳಿಗೆ ಕೃಷಿಯ ಬಗ್ಗೆ ಅರಿವು ಮೂಡಿಸುವ ಅಂಗವಾಗಿ ಕೊಡಂಕೂರು ಪರಿಸರದ ಗದ್ದೆಯಲ್ಲಿ ನಾಟಿ ಕಾರ್ಯ ಹಾಗೂ ಕಡೆಕಾರು ಪರಿಸರದಲ್ಲಿ ನಾಟಿ ಮಾಡಿದ ಗದ್ದೆಯಲ್ಲಿ ಬೆಳೆದಿರುವ ಕಳೆಯನ್ನು ಕೀಳುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕೇದಾರೋತ್ಥಾನ ಟ್ರಸ್ಟ್ (ರಿ) ಉಡುಪಿ ಇದರ ಸಹಯೋಗದಲ್ಲಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಕೆದಾರೋತ್ಥಾನ ಟ್ರಸ್ಟ್ […]
ಕೋಟ: ಗೀತಾನಂದ ಫೌಂಡೇಶನ್( ರಿ) ಮತ್ತು ಜನತಾ ಸಂಸ್ಥೆ ವತಿಯಿಂದ “ಸೃಷ್ಠಿ” ಸಸಿಗಳನ್ನು ನೆಟ್ಟು ಪೋಷಿಸುವ ವಿನೂತನ ಕಾರ್ಯಕ್ರಮ
ಕೋಟ (ಜೂ, 25): ಸಾಮಾಜಿಕ,ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಕೊಡುಗೈದಾನಿ ,ಉದ್ಯಮಿ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಆನಂದ .ಸಿ.ಕುಂದರ್ ರವರ ಸಂಚಾಲಕತ್ವದ ಗೀತಾನಂದ ಫೌಂಡೇಶನ್( ರಿ) ಮತ್ತು ಜನತಾ ಸಂಸ್ಥೆ ಜಂಟಿಯಾಗಿ “ಸೃಷ್ಠಿ” ಸಸಿಗಳನ್ನು ನೆಟ್ಟು ಪೋಷಿಸುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಪ್ರತಿ ವರುಷದಂತೆ ಈ ವರ್ಷವೂ ಸಹ ಸುಮಾರು 6000 ಗಿಡಗಳನ್ನು “ಸೃಷ್ಠಿ”ಕಾರ್ಯಕ್ರಮದಡಿಯಲ್ಲಿ ವಿತರಿಸುವ ಸಲುವಾಗಿ ಸಸಿಗಳನ್ನು ಸಂಗ್ರಹಿಸಲಾಗಿದೆ. ತಾರೆ, ಕುಂಟು ನೆರಳೆ, […]
ಲಾಕ್ ಡೌನ್ ಸಂದರ್ಭದಲ್ಲಿ ವಿಕಲಚೇತನರ ಸಂಕಷ್ಟಕ್ಕೆ ಸ್ಪಂದಿಸಲು ಸಚಿವ ಶ್ರೀನಿವಾಸ ಪೂಜಾರಿಗೆ ಮನವಿ
ಕೋಟ (ಜೂ, 19): ಕರೋನಾ ಲಾಕ್ ಡೌನ್ ಸಂದರ್ಭದಲ್ಲಿ ವಿಕಲಚೇತನರು ಅನುಭವಿಸುತ್ತಿರುವ ಸಂಕಷ್ಟಕ್ಕೆ ಸ್ಪಂದಿಸಲು ಉಡುಪಿ ಜಿಲ್ಲೆಯ ಅಂಗವಿಕಲರ ಮತ್ತು ಪಾಲಕರ ಜಿಲ್ಲೆಯಾಧ್ಯಕ್ಷರಾದ ಶ್ರೀ ಮಂಜುನಾಥ ಹೆಬ್ಬಾರ್ ನೇತೃತ್ವದಲ್ಲಿ ಧಾರ್ಮಿಕ ದತ್ತಿ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ಯವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾನ್ಯ ಸಚಿವರು ಮಾತನಾಡಿ ಅತ್ಯಂತ ತೀವ್ರತೆ ಮತ್ತು ಕಷ್ಟದಲ್ಲಿದ್ದ ವಿಕಲಚೇತನರಿಗೆ ಆಹಾರ ಸಾಮಗ್ರಿಗಳ ಕಿಟ್ […]
ಚಿಕ್ಕ ಅಕ್ಕನಿಗೊಂದು ಗಂಡು ಹುಡುಕಿ ಮದುವೆ ಮಾಡಲೆಂದು ಅದೆಷ್ಟು ಕಾದಿದ್ದಳು. ಕೊಂಕಣಿ ರಾಮಣ್ಣನ ಕ್ಯಾಮೆರಾ ರೀಲುಗಳಲೆಲ್ಲ ಅಕ್ಕನ ನೆಗೆಟಿವ್ಗಳೇ ತುಂಬಿರುವಷ್ಟು!!!
ಕತ್ತಲು ಆಗಷ್ಟೇ ಕಳಚಿ, ಭೂಮಿ ಬೆಳಕಿಗೆ ಮೈಯೊಡ್ಡುವುದರಲ್ಲಿತ್ತು. ನೆರೆ ಮನೆಯ ಬಚ್ಚಲಿನ ಚಿಮುಣಿ ಚಟ ಚಟ ಸದ್ದಿನೊಂದಿಗೆ ಕರ್ರನೆಯ ಹೊಗೆಯನ್ನು ಸೂಸುತ್ತಾ, ಊರಿಗೆಲ್ಲ ಮಂಜಿನಂತ ಮಬ್ಬನ್ನು ಕವಿಯುವಂತೆ ಮಾಡಿತ್ತು. ವಾರವಿಡೀ ದುಡಿದು ದಣಿದ ಮಂದಿಗೆಲ್ಲ ಮೈಮುರಿಯಲೆಂದೆ ಅಂದು ಭಾನುವಾರ ಬೇರೆ!!! ಅವರೆಲ್ಲ ಮಗ್ಗಲು ಮಗಚಿ, ಮೈ ಮುರಿಯುವ ಹೊತ್ತು ದೂರವೇ ಇತ್ತು. ಮಂದಿ ಕಣ್ಣರಳಿಸುವ ಮುನ್ನವೆ ಅಲ್ಲೊಂದು ಜೀವ ಕಣ್ಮುಚ್ಚಿ , ಬದುಕಿನ ಓಟಕ್ಕೆ ವಿರಾಮವಿಟ್ಟಿತ್ತು. ಮುಂಜಾವಿನ ಮೌನಕ್ಕೆ ಸೆಡ್ಡು […]
ಅ(ಸ)ಬಲೆ
ಆಕೆ ನನ್ನಂತೆ ಕನಸು ಕಂಡಿರಬಹುದಲ್ಲವೇ,ರೆಕ್ಕೆ ಬಿಚ್ಚಿ ಹಾರಾಡೋ ಕನಸು, ಯಾರ ಪರಿವಿಲ್ಲದೇ ಗುನುಗಾಡೋ ಮನಸು ಆಕೆಗೂ ಇದ್ದಿರಬಹುದಲ್ಲವೇ!ಆದರೆ ಇಂದು ಇನ್ನೊಬ್ಬರ ಖುಷಿಯಲಿ ತನ್ನ ಕನಸನ್ನು ಕಾಣುತಿರುವಳಷ್ಟೇ. ಚಿಕ್ಕ ಪುಟ್ಟ ವಿಷಯಕ್ಕೂ ಕೂಗಾಡೋ ನಮ್ಮ ಪರಿಸ್ಥಿತಿಗೆ ,ಕೋಪ ಆಕೆಗೂ ಬರುವುದೇ ಎನ್ನುವುದು ಪ್ರಶ್ನೆ.ನಮ್ಮ ಕೋಪ ಕೂಗಾಡಿ ಕರಗಿದರೆ,ಆಕೆಯ ಕೋಪ ಪಾತ್ರೆಗಳ ಮೇಲೆ ತೀರಿಸಿಕೊಂಡು, ಒಬ್ಬಳೇ ನೀರ್ಜೀವ ವಸ್ತುಗಳ ಮೇಲೆ ಕೋಪ ಹೊರಗೆ ಹಾಕುತ್ತಾಳೆ. ಇನ್ನೂ ಇವಳ ಹಾಗೆ ಮಾಡಬೇಡ, ಹೀಗೆ ಮಾಡಬೇಡ […]