ಮೂಡ್ಲಕಟ್ಟೆ(ಆ,14): ಇಲ್ಲಿನ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯಲ್ಲಿ ದೀಕ್ಷಾರಂಭ ಕಾರ್ಯಕ್ರಮದ ಎರಡನೇ ದಿನ ಸೈಬರ್ ಸೆಕ್ಯೂರಿಟಿ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಪೃಥ್ವಿ ವಿಷನ್ ಸ್ಥಾಪಕರಾದ ಶ್ರೀ ಪೃಥ್ವಿಶ್ ರವರು “ಸೈಬರ್ ಸೆಕ್ಯೂರಿಟಿಯ ಮಹತ್ವ, ವಿಶೇಷತೆ, ಅನ್ವಯಗಳ ಬಗ್ಗೆ ತಿಳಿಸಿ, ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯೂರಿಟಿಯ ಕುರಿತು ಇರುವ ಸಂದೇಹಗಳಿಗೆ ಸೂಕ್ತ ಮಾಹಿತಿ ನೀಡಿ ವಾಸ್ತವಿಕ ಸಮಸ್ಯೆಗಳ ಅರಿವು ಮೂಡಿಸಿ, ತಾಂತ್ರಿಕ ಅರಿವಿನ ಕೊರತೆಯ ತೊಂದರೆಗಳನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪ ಪ್ರಾಂಶುಪಾಲರಾದ ಶ್ರೀ ಜಯಶೀಲ ಕುಮಾರವರು ತಂತ್ರಜ್ಞಾನದ ಅರಿವಿನ ಮೂಲಕ ವಾಸ್ತವಿಕ ಪ್ರಪಂಚದಲ್ಲಿ ನಡೆಯುವ ಅಪರಾಧಗಳನ್ನು ಹೇಗೆ ತಡೆಯಬಹುದು ಎನ್ನುವ ಅರಿವು ಇವತ್ತಿನ ದಿನಕ್ಕೆ ಅತಿ ಅವಶ್ಯಕವೆಂದರು. ಕಾರ್ಯಕ್ರಮವನ್ನು ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಕು.ನಿಧಿಯವರು ನಿರೂಪಿಸಿದರು.