ಹೆಮ್ಮಾಡಿ( ಆ,21): ಇಲ್ಲಿನ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ನಿ.ಹೆಮ್ಮಾಡಿಯಲ್ಲಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನುಗಾರರ ಕಲ್ಯಾಣ ಯೋಜನೆ ಉಳಿತಾಯ ಮತ್ತು ಪರಿಹಾರ ಯೋಜನೆಯ 2024-25 ನೇ ಸಾಲಿನ ನೋಂದಾವಣೆ ಪ್ರಾರಂಭಗೊಂಡಿದೆ.
ಅರ್ಜಿ ಸಲ್ಲಿಸ ಬಯಸುವವರು ಕೆಳಗೆ ತಿಳುಹಿಸಿದ ಅರ್ಹತೆಯನ್ನು ಹೊಂದಿರಬೇಕು ಎಂದು ತಿಳಿಸಲಾಗಿದೆ.
ಅರ್ಹತೆಗಳು
1 ಫಲಾನುಭವಿಯು ಮೀನುಗಾರರ ಸಹಕಾರ ಸಂಘದ ಮೀನುಗಾರಿಕಾ ಸದಸ್ಯರಾಗಿರಬೇಕು
2 ಬಿ.ಪಿ.ಎಲ್ ಕಾರ್ಡ್ ದಾರರಾಗಿರಬೇಕು
3 18 ರಿಂದ 60 ವರ್ಷದೊಳಗಿನವರಾಗಿರಬೇಕು
ಬೇಕಾಗುವ ದಾಖಲೆಗಳು
1 ಪೋಟೋ
2 ಆಧಾರ್ ಕಾರ್ಡ್ ಜೆರಾಕ್ಸ್
3 ರೇಷನ್ ಕಾರ್ಡ್ ಜೆರಾಕ್ಸ್
4 ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್
5 ಸದಸ್ಯತ್ವ ಗುರುತಿನ ಗುರುತಿನ ಚೀಟಿ ಜೆರಾಕ್ಸ್
ಕೊನೆಯ ದಿನಾಂಕ 30-08-2024
ಹೆಚ್ಚಿನ ಮಾಹಿತಿಗಾಗಿ ಸಂಘದ ಕಚೇರಿಯನ್ನು ಸಂಪರ್ಕಿಸಿ
ಪ್ರಧಾನ ಕಚೇರಿ- 9449554691
ವಂಡ್ಸೆ ಶಾಖೆ -9945438788
ಶಂಕರನಾರಾಯಣ ಶಾಖೆ -9980438738
ಬ್ಯೆಂದೂರು ಶಾಖೆ – 9845666063
ಕುಂದಾಪುರ ಶಾಖೆ -9620320028