ಕೋಟೇಶ್ವರ (ಆ, 24): ಗೆಳೆಯರ ಬಳಗ ಬೀಜಾಡಿ ಇವರ ಆಶ್ರಯದಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಲಕ್ಕಿ ಡಿಪ್ ಹಾಗೂ ಕ್ರಿಕೆಟ್ ಪಂದ್ಯಾಟದಿಂದ ಸಂಗ್ರಹಿಸಿದ 1 ಲಕ್ಷ 12 ಸಾವಿರ ಮೊತ್ತವನ್ನು ಬೀಜಾಡಿ ಗ್ರಾಮದ ಬಡ ಕುಟುಂಬದ ಹುಡುಗಿಯ ವೈದ್ಯಕೀಯ ಚಿಕಿತ್ಸೆಗಾಗಿ ಹುಡುಗಿಯ ಪೋಷಕರಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದಿದೆ.
ಈ ಸಂದರ್ಭದಲ್ಲಿ ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ,ಗೋಪಾಡಿ ,ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುರೇಶ್ ಶೆಟ್ಟಿ,ಮೀನುಗಾರಿಕಾ ಸೊಸೈಟಿಯ ಅಧ್ಯಕ್ಷರಾದ ಮಂಜುನಾಥ್ ಕುಂದರ್, ಗ್ರಾಮ ಪಂಚಾಯತ್ ಸದಸ್ಯರಾದ ಶೇಖರ್ ಜಾತ್ರೆಬೆಟ್ಟು, ಸುರೇಶ್ ಬೆಟ್ಟಿನ್ ,ಎಸ್ ಡಿ ಎಂ ಸಿ ಅಧ್ಯಕ್ಷರಾದ ರವಿ, ಗೆಳೆಯರ ಬಳಗದ ಗೌರವಾಧ್ಯಕ್ಷರಾದ ಅಶೋಕ್ ಪೂಜಾರಿ, ಗೆಳೆಯರ ಬಳಗ ಅಧ್ಯಕ್ಷರಾದ ನರಸಿಂಹ, ಹಮ್ಜ, ಹಾಗೂ ಬಳಗದ ಸದಸ್ಯರು ಉಪಸ್ಥಿತರಿದ್ದರು. ವಿನಯ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.
ಈ ಮಾನವೀಯ ನೆಲೆಯ ಕೆಲಸಕ್ಕೆ ಸಹಕರಿಸಿದ ಬೀಜಾಡಿ ಗ್ರಾಮಸ್ಥರಿಗೂ ಹಾಗೂ ಸಹೃದಯಿ ದಾನಿಗಳಿಗೆ ಗೆಳೆಯರ ಬಳಗ ಕೃತಜ್ಞತೆ ಸಲ್ಲಿಸಿದೆ.
ವರದಿ : ನವೀನ್ ಕುಮಾರ್ ಬೀಜಾಡಿ